ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

FM transmitter attached to Shivamogga TV tower FM to be heard in the city itself!? What are MPs? ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ ಎಫ್​ಎಂ ಆರಂಭವಾಗಲಿದ್ಯಾ? ಹೀಗೊಂದು ಸಮಾಚಾರವನ್ನು ಇವತ್ತು ಸಂಸದ ಬಿ.ವೈ.ರಾಘವೇಂದ್ರರವರು ತಮ್ಮ ಸುದ್ದಿಗೋಷ್ಟಿಯಲ್ಲಿ ವಿವರಿಸಿದ್ಧಾರೆ. ಭದ್ರಾವತಿ ಆಕಾಶವಾಣಿಯಲ್ಲಿ Bhadravathi Akashavani ಎಫ್ಎಂ ರೇಡಿಯೋ FM Radio ಆರಂಭಿಸುವ ಸಂಬಂಧ  ಪ್ರಧಾನಿ ನರೇಂದ್ರ ಮೋದಿ ಸರ್ಕಾರ 10 ಕೋಟಿ ರೂ. ಮಂಜೂರಾತಿ ಮಾಡಿದೆ ಎಂದು  ಸಂಸದ  ಬಿ.ವೈ. ರಾಘವೇಂದ್ರ MP Raghavendra ತಿಳಿಸಿದ್ದಾರೆ. 

1 ಕಿ.ವ್ಯಾ. ಸಾಮರ್ಥ್ಯದ ಟ್ರಾನ್ಸ್​ಮೀಟರ್​ನ್ನ ಸದ್ಯ  ಆಕಾಶವಾಣಿ ಭದ್ರಾವತಿ ಹೊಂದಿದೆ. ಇದೀಗ 10 ಕಿ.ವ್ಯಾ. ಟ್ರಾನ್ಸ್ ಮಿಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಟ್ರಾನ್ಸ್​ಮೀಟರ್​ನ್ನ ಶಿವಮೊಗ್ಗದಲ್ಲಿ ವ್ಯರ್ಥವಾಗಿರುವ ಟಿವಿ ಟವರ್​ನಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಇದರಿಂದ ದೊಡ್ಡ ವ್ಯಾಪ್ತಿಯಲ್ಲಿ ಆಕಾಶವಾಣಿಯನ್ನು ಕೇಳಲು ಅನುಕೂಲವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ. ಡಿಸೆಂಬರ್ ಒಳಗಾಗಿ ಹೊಸ 10 ಕಿ.ವ್ಯಾ. ಟ್ರಾನ್ಸ್ ಮೀಟರ್ ಅಳವಡಿಕೆ ಕಾರ್ಯ ನಡೆಯಲಿದೆ. ಎಂದು ತಿಳಿಸಿರುವ ಸಂಸದರು,  ಇದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗುತ್ತದೆ ಎಂದಿದ್ದಾರೆ. ಅಲ್ಲದೆ ಶಿವಮೊಗ್ಗದಲ್ಲಿ ಎಫ್​ಎಂ ಟ್ರಾನ್ಸ್​ಮೀಟರ್ ಅಳವಡಿಸುವುದರ ಸಾಧಕ ಭಾದಕವನ್ನು ಸಹ ವಿವರಿಸಿದ್ದಾರೆ. 

ಭದ್ರಾವತಿಯಲ್ಲಿ ಪ್ರಸ್ತುತ 1 ಕಿಲೋವ್ಯಾಟ್ FM ಟ್ರಾನ್ಸ್‌ ಮೀಟರ್ ಬದಲಿಗೆ ಶಿವಮೊಗ್ಗದಲ್ಲಿ FM ಟ್ರಾನ್ಸ್‌ ಮೀಟರ್ (10 ಕಿಲೋವ್ಯಾಟ್) ಅನ್ನು ಹಾಕುವುದರಿಂದ ಆಗುವ ಪ್ರಯೋಜನಗಳು.

ಭದ್ರಾವತಿಯಲ್ಲಿರುವ ಪ್ರಸ್ತುತ 1 ಕಿಲೋ ವ್ಯಾಟ್ FM ಟ್ರಾನ್ಸ್‌ ಮೀಟರ್ ಬದಲಿಗೆ ಶಿವಮೊಗ್ಗಕ್ಕೆ ಈಗಾಗಲೇ ತಮ್ಮ ವಿ.ಐ.ಪಿ ರೆಫೆರೆನ್ಸ್ ನಿಂದ 10 ಕಿಲೋ ವ್ಯಾಟ್ FM ಟ್ರಾನ್ಸ್ ಮೀಟರ್ ಅನ್ನು ಪ್ರಸಾರಭಾರತಿ ಮಂಜೂರು ಮಾಡಿದೆ.ಮಂಜೂರಾದ 10 ಕಿಲೋವ್ಯಾಟ್ FM ಟ್ರಾನ್ಸ್ ಮೀಟರ್ ಭದ್ರಾವತಿಯಿಂದ 20 ಕಿ.ಮೀ ದೂರದಲ್ಲಿರುವ ಶಿವಮೊಗ್ಗದಲ್ಲಿ ಈಗ ನಿಷ್ಕ್ರಿಯವಾಗಿರುವ ದೂರದರ್ಶನ ಹೈ ಪವರ್ ಟ್ರಾನ್ಸ್ ಮೀಟರ್ ನಲ್ಲಿರುವ 150 ಮೀಟರ್ ಎತ್ತರದ ಗೋಪುರದ ಮೇಲೆ ಸ್ಥಾಪನೆಗೊಳ್ಳಲಿದೆ. 

ಶಿವಮೊಗ್ಗದಲ್ಲಿ ಸ್ಥಾಪನೆಯಾಗುವFM_ಟ್ರಾನ್ಸ್ ಮೀಟರ್ ಪ್ರಯೋಜನಗಳು ಹೀಗಿವೆ

1. ಶಿವಮೊಗ್ಗದಲ್ಲಿ 150 ಮೀಟರ್ ಟ್ರಾನ್ಸ್‌ ಮೀಟರ್ ಗೋಪುರವಿದೆ. ಭದ್ರಾವತಿಯಲ್ಲಿ 100 ಮೀಟರ್ ಟ್ರಾನ್ಸ್ ಮೀಟರ್ ಗೋಪುರವಿದೆ, ಅಂದರೆ ಹೆಚ್ಚುವರಿ 50 ಮೀಟರ್‌ಗಳು ಲಭ್ಯವಾಗುತ್ತದೆ 2. ಶಿವಮೊಗ್ಗ ಟವರ್ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕವನ್ನು ಹೊಂದಿದೆ ಮತ್ತು ಜಿಲ್ಲಾ ಕೇಂದ್ರವಾಗಿದೆ. ಭದ್ರಾವತಿಯು ತುಲನಾತ್ಮಕವಾಗಿ ಕಡಿಮೆ ಸಂಪರ್ಕವನ್ನು ಹೊಂದಿದೆ ಮತ್ತು ತಾಲ್ಲೂಕು ಕೇಂದ್ರವಾಗಿದೆ.

3. ಭದ್ರಾವತಿಯ 100 ಮೀಟರ್ ಟವರ್‌ನಲ್ಲಿ ಪ್ರಸ್ತುತ ಲಭ್ಯವಿರುವ 1 ಕಿಲೋವ್ಯಾಟ್ ಟ್ರಾನ್ಸ್‌ ಮೀಟರ್ ಬದಲಿಗೆ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗ ನಗರದಲ್ಲಿ, ಉತ್ತಮ ವಸತಿಗೃಹಗಳ ಲಭ್ಯತೆಯೂ ಇರುವ ದೂರದರ್ಶನ ಹೈ ಪವರ್ ಟವರ್‌ನಲ್ಲಿ, ಇದೀಗ ಮಂಜೂರಾಗಿರುವ 10ಕಿಲೋವ್ಯಾಟ್ FM ಟ್ರಾನ್ಸ್ ಮೀಟರ್ ಅನ್ನು ಸ್ಥಾಪಿಸಬಹುದಾಗಿದೆ

4. ಭದ್ರಾವತಿಯ 100 ಮೀಟರ್ ಟವರ್ ನಲ್ಲಿ ಪ್ರಸ್ತುತ ಇರುವ 1 ಕಿಲೋವ್ಯಾಟ್ ಟ್ರಾನ್ಸ್ ಮೀಟರ್ ಬದಲಿಗೆ, ಶಿವಮೊಗ್ಗದ 150 ಮೀಟರ್ ಟವರ್ ನಲ್ಲಿ 10 ಕಿಲೋವ್ಯಾಟ್ ಸಾಮರ್ಥ್ಯದ ಟ್ರಾನ್ಸ್‌ ಮೀಟರ್ ಅಳವಡಿಸುವುದರಿಂದ ವಿಶಾಲವಾದ ವ್ಯಾಪ್ತಿಯ ಪ್ರದೇಶಕ್ಕೆ ಪ್ರಸಾರಮಾಡಲು ಅನುಕೂಲಕರವಾಗುತ್ತದೆ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ತಿಳಿದುಕೊಳ್ಳಲು ಇದರಿಂದ ಸಾರ್ವಜನಿಕರಿಗೆ ಅನುವಾಗುತ್ತದೆ. ಹಾಗು ಗೌರವಾನ್ವಿತ ಪ್ರಧಾನ ಮಂತ್ರಿಯವರ "ಮನ್ ಕಿ ಬಾತ್" ನಂತಹ ಕಾರ್ಯಕ್ರಮಗಳ ಉತ್ತಮ ಪ್ರಸಾರ ಸೇರಿದಂತೆ ಸಾರ್ವಜನಿಕರಿಗೆ ಕಲ್ಯಾಣ ಕಾರ್ಯಕ್ರಮಗಳ ವ್ಯಾಪಕ ಪ್ರಸಾರಕ್ಕೆ ಅನುವು ಮಾಡಿಕೊಡುತ್ತದೆ.

5. ಆಕಾಶವಾಣಿ ಭದ್ರಾವತಿ (ಟವರ್) ಗಿಂತ ಎತ್ತರವಾದ ಮತ್ತು ಎಲ್ಲಾ ಸೌಲಭ್ಯಗಳು ಈಗಾಗಲೇ ಹೊಂದಿರುವ ಶಿವಮೊಗ್ಗದಲ್ಲಿ 10ಕಿಲೋವ್ಯಾಟ್ FM ಟ್ರಾನ್ಸ್ ಮೀಟರ್ ಸ್ಥಾಪಿಸುವುದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಇಲ್ಲ.

6. ಭದ್ರಾವತಿಯಲ್ಲಿರುವ ರೆಕಾಡಿರ್ಂಗ್ ಸ್ಟುಡಿಯೋಗಳು ಮತ್ತು ಪ್ಲೇ ಬ್ಯಾಕ್ ಸ್ಟುಡಿಯೋಗಳನ್ನು ರೆಕಾಡಿರ್ಂಗ್ ಮತ್ತು ಪ್ರಸಾರ ಸೇರಿದಂತೆ ಎಂದಿನಂತೆಯೇ ಬಳಸಲಾಗುವುದು ಮತ್ತು ಆಕಾಶವಾಣಿ ಭದ್ರಾವತಿ” ಎಂದೇ ಪ್ರಸಾರಕಾರ್ಯಗಳನ್ನು ಭದ್ರಾವತಿ ಆಕಾಶವಾಣಿ ಕೇಂದ್ರದಿಂದಲೇ ನಡೆಸಲಾಗುವುದು. ಆದಾಗ್ಯೂ ವಿವಿಐಪಿ ರೆಕಾಡಿರ್ಂಗ್ ಮತ್ತು ತುರ್ತು ರೆಕಾರ್ಡಿಂಗ್‌ಗಳಿಗೆ ಅನುಕೂಲವಾಗುವಂತೆ ಶಿವಮೊಗ್ಗದಲ್ಲಿ 10ಕಿಲೋವ್ಯಾಟ್ FM ಟ್ರಾನ್ಸ್ ಮೀಟರ್ ಸ್ಥಾಪನೆಯ ಜೊತೆಗೆ ತಾತ್ಕಾಲಿಕ ಸ್ಟುಡಿಯೋ ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​