ಮಲ್ನಾಡ್​ನಲ್ಲಿ ಸಿಗದ ನೆಟ್​ವರ್ಕ್​! ಅಧಿಕಾರಿಗಳಿಗೆ ದಿಗ್ಬಂಧನ! ಪರಿಹಾರ ಹುಡುಕಲು ಸಂಸದರ ಮೀಟಿಂಗ್!

Shivamogga MP B Y Raghavendra held a meeting on bsnl network issue ಶಿವಮೊಗ್ಗ ಸಂಸದರ ಬಿ.ವೈ.ರಾಘವೇಂದ್ರರವರು ಬಿಎಸ್​ಎನ್​ಎಲ್ ನೆಟ್​ವರ್ಕ್​ ಸಮಸ್ಯೆ ಸಂಬಂಧ ಸಭೆ ನಡೆಸಿದರು

ಮಲ್ನಾಡ್​ನಲ್ಲಿ ಸಿಗದ ನೆಟ್​ವರ್ಕ್​! ಅಧಿಕಾರಿಗಳಿಗೆ ದಿಗ್ಬಂಧನ!  ಪರಿಹಾರ ಹುಡುಕಲು ಸಂಸದರ ಮೀಟಿಂಗ್!

KARNATAKA NEWS/ ONLINE / Malenadu today/ Jul 31, 2023 SHIVAMOGGA NEWS

ಶಿವಮೊಗ್ಗ:   ಜಿಲ್ಲೆಗೆ ಮಂಜೂರಾಗಿರುವ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಸರ್ಕಾರಿ ಜಾಗ ಹಾಗೂ ಗ್ರಾಮಗಳ ಸಮೀಪವೇ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ  ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ, ಕಂದಾಯ ಇಲಾಖೆ ಹಾಗೂ ಬಿಎಸ್‌ಎನ್‌ಎಲ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೇಂದ್ರದಿಂದ ಜಿಲ್ಲೆಗೆ ಹೊಸದಾಗಿ 261 ಟವರ್ ಮಂಜೂರು ಆಗಿವೆ.  ತಕ್ಷಣ ಗುರುತಿಸಿರುವ ಸ್ಥಳಗಳಲ್ಲಿ ಟವರ್ ನಿರ್ಮಿಸುವಂತೆ ಸೂಚಿಸಿದರು.ಕೇಂದ್ರ ಸರ್ಕಾರ ಜಿಲ್ಲೆಗೆ 249 ಹೊಸ ಟವರ್ ನಿರ್ಮಾಣ ಹಾಗೂ 12 ಟವರ್‌ಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈಗಾಗಲೇ 128 ಟವರ್‌ಗಳ ನಿರ್ಮಾಣಕ್ಕೆ ಸರ್ವೆ ನಡೆಸಿದ್ದು 64 ಟವರ್‌ಗಳು ಕಂದಾಯ ಜಾಗದಲ್ಲಿವೆ. 45 ಟವರ್ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತಿವೆ. 5 ಕಡೆ ಕಾಮಗಾರಿ ಆರಂಭಗೊಂಡಿದೆ. 

ನೆಟ್​ವರ್ಕ್​ ಪ್ರಾಬ್ಲಮ್​ ಅಧಿಕಾರಿಗೆ ಮುತ್ತಿಗೆ

ಇನ್ನೊಂದೆಡೆ ಸಾಗರ ತಾಲ್ಲೂಕು ಬ್ಯಾಕೋಡು ನಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲದೆ ಇದ್ದುದ್ದರಿಂದ  ಗ್ರಾಮಸ್ಥರು ಕಳೆದ  ಶುಕ್ರವಾರ ಬಿಎಸ್​​ಎನ್​ಎಲ್​ ನ ಮೂವರು ನೌಕರರಿಗೆ ದಿಗ್ಬಂಧನ ಹಾಕಿದ್ದರು.  ಈ ಭಾಗದಲ್ಲಿ ವಿದ್ಯುತ್ ಇದ್ದರೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಸುಳ್ಳಳ್ಳಿ, ನಾಡಕಚೇರಿ, ಸ್ಥಳೀಯ ಸೊಸೈಟಿ, ಆಸ್ಪತ್ರೆ ಇತರೆಡೆಗಳಲ್ಲಿ ಯಾವುದೇ ಕೆಲಸ ಆಗುತ್ತಿರಲಿಲ್ಲ. ಅಲ್ಲದೆ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೂ ನೋಂದಣಿ ಮಾಡಲು ಆಗುತ್ತಿರಲಿಲ್ಲ. ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದರು. 

ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್​ರ ಮೃತದೇಹ ಪತ್ತೆ!

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್​ ಆ್ಯಂಡ್​ ರನ್​ ಯುವಕ ಬಲಿ! ಏನಿದು ಘಟನೆ?

SHIVAMOGGA AIRPORT ಗೆ ಸಿಗಲಿದೆ ವಿಶೇಷ ಭದ್ರತೆ! ಗೋವಾ, ತಿರುಪತಿ, ಹೈದ್ರಾಬಾದ್​ಗೂ ಹಾರುತ್ತೆ ವಿಮಾನ! ಟಿಕೆಟ್ ದರದ ಬಗ್ಗೆ ಸಂಸದರು ಹೇಳಿದ್ದೇನು?

 

ಶಿವಮೊಗ್ಗ ಟಿವಿ ಟವರ್ ಗೆ ಎಫ್​ಎಂ ಟ್ರಾನ್ಸ್​ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್​ಎಂ!? ಏನಂದ್ರು ಸಂಸದರು?

ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ






 ​