ಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಐವರು ಮಕ್ಕಳು ಓರ್ವ ಮಹಿಳೆ ನಾಪತ್ತೆ!

Five children and a woman have gone missing from bhadravathi old town police station limits, bhadravathi news, Shivamogga news live,

ಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಐವರು ಮಕ್ಕಳು ಓರ್ವ ಮಹಿಳೆ ನಾಪತ್ತೆ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shikaripura |  Malnenadutoday.com | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಓಲ್ಡ್​ ಟೌನ್ ವ್ಯಾಪ್ತಿಯಲ್ಲಿ ಐವರು ಮಕ್ಕಳು ಸೇರಿದಂತೆ ಒರ್ವ ಮಹಿಳೆ ಮಿಸ್ಸಿಂಗ್ ಆಗಿರುವ ಬಗ್ಗೆ ವರದಿಯಾಗಿದೆ. ಕಳೆದ ನವೆಂಬರ್​ 11 ರಂದು ಕಾಣೆಯಾದ ಪ್ರಕರಣದ ಬಗ್ಗೆ ನವೆಂಬರ್ 15 ರಂದು ಸಂಜೆ ಎರಡು ದೂರು ದಾಖಲಾಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.. 

READ : ಶಿವಮೊಗ್ಗದಲ್ಲಿ ಸಾವಿರಾರು ಜನರು ಒಟ್ಟಾಗಿ World Cup Final ಮ್ಯಾಚ್​ ನೋಡಬಹುದು ! ಇಲ್ಲಿದೆ ಅವಕಾಶ!

ಏನಿದು ಪ್ರಕರಣ

ಇಲ್ಲಿನ ಅನ್ವರ್ ಕಾಲೋನಿಯ ನೆರೆಹೊರೆಯ ಐವರು ಕಾಣೆಯಾಗಿದ್ದಾರೆ. ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಎಫ್​ಐಆರ್ ಪ್ರಕಾರ, ಮುನ್ನಾ ಎಎಂಬವರ  ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಇನ್ನೊಂದೆಡೆ ಸಮಿವುಲ್ಲಾ ಎಂಬವರ ಪತ್ನಿ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.  

ಕಳೆದ 11 ರಂದು ಮುನ್ನಾರವರ ಮೂವರು ಮಕ್ಕಳ ಪೈಕಿ ಹಿರಿಯವಳು,  ಸೀಗೆಬಾಗಿ ಯಲ್ಲಿರುವ ಆಸ್ಪತ್ರೆಗೆ ಹೋಗಿಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲವಂತೆ. ಈ ಸಂಬಂಧ ಎಲ್ಲೆಡೆ ಹುಡುಕಾಡಿದ್ದಾರೆ. ಬಳಿಕ ಸಂಬಂಧಿಕರಲ್ಲಿ ವಿಚಾರಿಸಿದ್ದಾರೆ. ಅಲ್ಲದೆ ದರ್ಗಾಕ್ಕೆ ಹೋಗಿರಬಹುದು ಎಂದು ಲಕ್ಷೇಶ್ವರ ಬಾಬಾ ಬುಡುನ್ ಗಿರಿ,ಚಿಂತಾಮಣಿ, ಹಾಸನದ ಜಾವಗಲ್,ಹಣಗೆರೆ ಕಟ್ಟೆ ಸೇರಿದಂತೆ ವಿವಿಧೆಡೆ ಹುಡುಕಾಡಿದ್ದಾರೆ. 

READ :18 ಅಕೌಂಟ್​ನಲ್ಲಿ 80 ಲಕ್ಷ ನಕಲಿ ಚಿನ್ನದ ಸಾಲ! ಒಂದುವರೆ ಕೋಟಿ ಲೋನ್ ಕೇಳಿದಾಗ ಸಿಕ್ಕಿಬಿದ್ದಿದ್ದೇಗೆ ಗೊತ್ತಾ?

ಬಳಿಕ ಆಸ್ಪತ್ರೆಗೆ ಹೋಗುತ್ತೇನೆ ಎಂದು ಹೋದವರು ನೆರೆಮನೆಯ ಸಮಿವುಲ್ಲಾರ ಪತ್ನಿ ಜೊತೆಗೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಇದೀಗ ಎರಡು ಮನೆಯವರು ಐವರು ಮಕ್ಕಳು ಸೇರಿದಂತೆ ಓರ್ವ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.