KARNATAKA NEWS/ ONLINE / Malenadu today/ Jul 31, 2023 SHIVAMOGGA NEWS
ಸಾಗರ/ ದಾರಿಯಲ್ಲಿ ಕುಳಿತಿದ್ದ ಅಜ್ಜಿಯೊಬ್ಬರ ಜೊತೆಗೆ ಶಾಸಕ ಬೇಳೂರು ಗೋಪಾಲಕೃಷ್ಣ (MLA Belur Gopalakrishna) ನಡೆಸಿದ ಸಂಭಾಷಣೆಯೊಂದು ಸದ್ಯ ವೈರಲ್ ಆಗುತ್ತಿದೆ. ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಅಜ್ಜಿಯೊಬ್ಬಳು ಕಾಣ ಸಿಕ್ಕಿದ್ದಾಳೆ. ಜನ ಸಿಕ್ಕಾಗ ಎಂತದಾ ಸಮಾಚಾರ ಎಂದು ಮಾತಿಗಿಳಿವ ಬೇಳೂರು ಗೋಪಾಲಕೃಷ್ಣ, ಅಜ್ಜಿಯನ್ನು ಕಂಡು ಎಲ್ಲಿಗೆ ಹೊಗ್ತಿದ್ದಿ, ನಟ್ಟಿಗೆ ಬಂದಿದ್ಯಾ ಎಂದು ವಿಚಾರಿಸಿದ್ಧಾರೆ. ಅಲ್ಲದೆ ಅಜ್ಜಿ ಕುಳಿತಿದ್ದ ರಸ್ತೆ ಬದಿಯ ಕಟ್ಟೆ ಮೇಲೆ ಕುಳಿತು, ವೃದ್ಧೆಯ ಪೂರ್ವಪರ ವಿಚಾರಿಸಿದ್ದಾರೆ. ಈ ವೇಳೆ ತಾಯಿ, ತನ್ನ ವಿವರಗಳನ್ನು ನೀಡುತ್ತಾ, ಹೀಗೆ ಹೋಗುತ್ತಿರುತ್ತೇನೆ, ವಯಸ್ಸಾಯ್ತು ನಟ್ಟಿ ಮಾಡಕ್ಕಾಗಲ್ಲ, ಯಾರಾದರೂ ಗಾಡಿಯಲ್ಲಿ ಕರೆದುಕೊಂಡು ಹೋದರೆ ಹೋಗುತ್ತೇನೆ ಎಂದೆಲ್ಲಾ ಹೇಳಿದ್ಧಾಳೆ
ನೀ ಯಾರೆಂದು ಗೊತ್ತಾಗಿಲ್ಲಪ್ಪ!
ಎಲ್ಲವನ್ನು ಆಲಿಸಿದ ಶಾಸಕರು ನಾನ್ಯಾರು ಗೊತ್ತಾ ನಿನಗೆ ಎಂದು ಕುತೂಹಲಕ್ಕೆ ಪ್ರಶ್ನಿಸಿದ್ದಾಳೆ. ಎಂಎಲ್ಎಯವರ ಪ್ರಶ್ನೆಗೆ ಮರುಕ್ಷಣದಲ್ಲಿಯೇ ನಿ ಯಾರೆಂದು ಗೊತ್ತಾಗ್ಲ ನಂಗೆ ಎಂದು ಹೇಳಿದ್ದಾಳೆ. ಇದಕ್ಕೆ ಶಾಸಕರು ನಾನು ಗೋಪಾಲಕೃಷ್ಣ ಬೇಳೂರು ಎಂದು ಪರಿಚಯಿಸಿಕೊಂಡಿದ್ದಾರೆ. ಹೆಸರನ್ನಷ್ಟೆ ತಿಳಿದಿದ್ದ ಅಜ್ಜಿ, ದೇವರು ನಿನಗೆ ಒಳ್ಳೆಯದು ಮಾಡ್ಲಪ್ಪ ಎಂದು ಬೇಳೂರುರವರ ಕೈಯನ್ನ ಹಿಡಿದು ಹಣೆಗೆ ಒತ್ತಿಕೊಂಡಿದ್ದಾಳೆ.
ಯಾರಿಗೆ ವೋಟು ಹಾಕಿದ್ದಿ
ಜೀವಾನುಭವದ ಮಾಗಿದ ಮಾತುಗಳನ್ನ ಆಡುತ್ತಿದ್ದ ಅಜ್ಜಿ ಜೊತೆಗೆ ಇನ್ನಷ್ಟು ಹರಟಿದ ಶಾಸಕರು, ಯಾರಿಗೆ ವೋಟ್ ಹಾಕಿದ್ದಿ ಎಂದು ಕೇಳಿದ್ದಾರೆ. ಇದಕ್ಕೆ ಅಜ್ಜಿ ತನ್ನ ಕೈ ತೋರಿಸುತ್ತಾ ಅಭಯಹಸ್ತವನ್ನು ತೋರಿಸಿದ್ದಾಳೆ. ನನಗೆ ಹಾಕಿದ್ಧಾಳಂತೆ ಕಣ್ರೋ ಎಂದು ಶಾಸಕರು ತಮ್ಮವರಿಗೆ ಹೇಳಿದ್ಧಾರೆ. ಈ ಮಧ್ಯೆ ಮಾತು ಮುಂದುವರಿಸಿದ ಅಜ್ಜಿ, ನಾನು ವೋಟು ಹಾಕಿದ್ದೀನಿ ಎಂದು ಹೇಳುತ್ತಾ ವಿವರಣೆಕೊಟ್ಟಿದ್ಧಾಳೆ. ಅದೇ ಸಂದರ್ಭದಲ್ಲಿ ಅಲ್ಲಿದ್ದ ಕಾರ್ಯಕರ್ತರು, ಶಾಸಕರು ಗೆದ್ದಿದ್ದಾರೆ ಎಂದಿದ್ದಾರೆ. ಆಗ ಅಜ್ಜಿ ಹೌದು , ನಮ್ಮ ಊರೆಲ್ಲೆಲ್ಲಾ ಪಟಾಕಿ ಹೊಡೆದಿದ್ದಾರೆ ಎಂದಿದ್ಧಾಳೆ. ಇದನ್ನ ಕೇಳಿದ ಶಾಸಕರು ನಕ್ಕು, ಅಜ್ಜಿಗೆ ನೆರವಿನ ಆಸರೆಯ ಆಶ್ವಾಸನೆ ಕೊಟ್ಟು ಅಲ್ಲಿಂದ ಮುಂದಕ್ಕೆ ಸಾಗಿದ್ದಾರೆ.
ಶಾಸಕರು ಕೈಗೆ ಸಿಗೋದಿಲ್ಲ ಎಂಬ ಆರೋಪಗಳು ಇಂದು ನಿನ್ನೆಯದಲ್ಲ. ಆದರೆ ಮಲೆನಾಡಲ್ಲಿ ಯಾರೇ ಆಯ್ಕೆಯಾದರೂ ಅವರು ಜನರ ಜೊತೆಗೆ ಇರುತ್ತಾರೆ ಎಂಬುದು ಈ ವಿಡಿಯೋ ಸಾಕ್ಷಿಯಾಗಿದೆ. ಶಿವಮೊಗ್ಗದಲ್ಲಿನ ಜನಪ್ರತಿನಿಧಿಗಳ ಮಾನವೀಯತೆ ಈ ಹಿಂದೆಯು ಹಲವು ಘಟನೆಗಳು ಸಾಕ್ಷಿಯಾಗಿವೆ. ಇದಕ್ಕೆ ಪೂರಕವಾಗಿ ರಾಜಕೀಯವೇ ತಿಳಿಯದ ಹಿರಿಜೀವವೊಂದನ್ನ ಮಾತನಾಡಿ ಆಕೆಯ ಕಷ್ಟ ಸುಖ ಆಲಿಸಿದ ಬೇಳೂರು ಗೋಪಾಲಕೃಷ್ಣರವರ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೀನು ಯಾರಂತ ಗೊತ್ತಾಗಿಲ್ಲ! ಶಾಸಕ ಬೇಳೂರು ಗೋಪಾಲಕೃಷ್ಣರ ಪ್ರಶ್ನೆಗೆ ಅಜ್ಜಿಯ ಉತ್ತರ! ಸಾಮಾನ್ಯ ಮಹಿಳೆ-ಶಾಸಕರ ನಡುವಿನ ನಡೆದ ಮಲ್ನಾಡಿನ ಮಾತುಕತೆ ವಿಡಿಯೋ ನೋಡಿ! #shivamogga pic.twitter.com/qT4s1ss6r0
— malenadutoday.com (@CMalenadutoday) July 31, 2023
ಅರಶಿನ ಗುಂಡಿ ಫಾಲ್ಸ್ನಲ್ಲಿ ಶರತ್ ಸಾವು! ನೊಂದ ಕುಟುಂಬಸ್ಥರು ಸಂಸದ ಬಿ.ವೈ.ರಾಘವೇಂದ್ರರಿಗೆ ನೀಡಿದ್ರು ಒಂದು ಮನವಿ!
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಶರತ್ ರವರ ಮೃತದೇಹ ಅರಿಶಿನ ಗುಂಡಿ ಫಾಲ್ಸ್ನಲ್ಲಿ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಲೇ ನಿನ್ನೆ ಸಂಸದ ಬಿ.ವೈ.ರಾಘವೇಂದ್ರ (MP B. Y. Raghavendra) ಭದ್ರಾವತಿಯ ಕೆ.ಹೆಚ್.ನಗರದ ಸುಣ್ಣದಹಳ್ಳಿಯಲ್ಲಿರುವ ಶರತ್ ರವರ ಮನೆಗೆ ಭೇಟಿಕೊಟ್ಟು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ವೇಳೇ, ಸಂಸದರ ಬಳಿಯಲ್ಲಿ ಶರತ್ ರವರ ತಂದೆ ಮುನಿಸ್ವಾಮಿ ಅಪಾಯಕಾರಿ ಸ್ಥಳಗಳಿಗೆ ಸಾರ್ವಜನಿಕರು ಹೋಗದಂತೆ ನಿಷೇಧ ವಿಧಿಸಿ ಎಂದು ಒತ್ತಾಯಿಸಿದ್ರು. ಅಲ್ಲದೆ ತಮ್ಮ ಮಗನಿಗಾದ ಪರಿಸ್ಥಿತಿ ಮತ್ಯಾರಿಗು ಆಗಬಾರದು ಎಂದು ಮನವಿ ಮಾಡಿದರು. ಇನ್ನೂ ಇದೇ ವೇಳೆ ಸಂಸದರು, ಉಡುಪಿಯ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಬೇಗ ಶರತ್ರವರ ಮರಣೋತ್ತರ ಪರೀಕ್ಷೆಯನ್ನು ಮುಗಿಸಿ ಮೃತದೇಹವನ್ನು ರವಾನಿಸುವ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ರು. ಸದ್ಯ ಶರತ್ ರವರ ಮನೆಯಲ್ಲಿ ಕುಟುಂಬದವರ ಆಕ್ರಂಧನ ಮುಗಿಲುಮುಟ್ಟಿದೆ.
ಮಲ್ನಾಡ್ನಲ್ಲಿ ಸಿಗದ ನೆಟ್‌ವರ್ಕ್! ಅಧಿಕಾರಿಗಳಿಗೆ ದಿಗ್ಬಂಧನ! ಪರಿಹಾರ ಹುಡುಕಲು ಸಂಸದರ ಮೀಟಿಂಗ್!
ಶಿವಮೊಗ್ಗ: ಜಿಲ್ಲೆಗೆ ಮಂಜೂರಾಗಿರುವ ಬಿಎಸ್‌ಎನ್‌ಎಲ್ ಟವರ್‌ಗಳನ್ನು ಸರ್ಕಾರಿ ಜಾಗ ಹಾಗೂ ಗ್ರಾಮಗಳ ಸಮೀಪವೇ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ, ಕಂದಾಯ ಇಲಾಖೆ ಹಾಗೂ ಬಿಎಸ್‌ಎನ್‌ಎಲ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೇಂದ್ರದಿಂದ ಜಿಲ್ಲೆಗೆ ಹೊಸದಾಗಿ 261 ಟವರ್ ಮಂಜೂರು ಆಗಿವೆ. ತಕ್ಷಣ ಗುರುತಿಸಿರುವ ಸ್ಥಳಗಳಲ್ಲಿ ಟವರ್ ನಿರ್ಮಿಸುವಂತೆ ಸೂಚಿಸಿದರು.
ಕೇಂದ್ರ ಸರ್ಕಾರ ಜಿಲ್ಲೆಗೆ 249 ಹೊಸ ಟವರ್ ನಿರ್ಮಾಣ ಹಾಗೂ 12 ಟವರ್‌ಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈಗಾಗಲೇ 128 ಟವರ್‌ಗಳ ನಿರ್ಮಾಣಕ್ಕೆ ಸರ್ವೆ ನಡೆಸಿದ್ದು 64 ಟವರ್‌ಗಳು ಕಂದಾಯ ಜಾಗದಲ್ಲಿವೆ. 45 ಟವರ್ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತಿವೆ. 5 ಕಡೆ ಕಾಮಗಾರಿ ಆರಂಭಗೊಂಡಿದೆ.
ನೆಟ್‌ವರ್ಕ್ ಪ್ರಾಬ್ಲಮ್ ಅಧಿಕಾರಿಗೆ ಮುತ್ತಿಗೆ
ಇನ್ನೊಂದೆಡೆ ಸಾಗರ ತಾಲ್ಲೂಕು ಬ್ಯಾಕೋಡು ನಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇಲ್ಲದೆ ಇದ್ದುದ್ದರಿಂದ ಗ್ರಾಮಸ್ಥರು ಕಳೆದ ಶುಕ್ರವಾರ ಬಿಎಸ್‌ಎನ್‌ಎಲ್ ನ ಮೂವರು ನೌಕರರಿಗೆ ದಿಗ್ಬಂಧನ ಹಾಕಿದ್ದರು. ಈ ಭಾಗದಲ್ಲಿ ವಿದ್ಯುತ್ ಇದ್ದರೂ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಸುಳ್ಳಳ್ಳಿ, ನಾಡಕಚೇರಿ, ಸ್ಥಳೀಯ ಸೊಸೈಟಿ, ಆಸ್ಪತ್ರೆ ಇತರೆಡೆಗಳಲ್ಲಿ ಯಾವುದೇ ಕೆಲಸ ಆಗುತ್ತಿರಲಿಲ್ಲ. ಅಲ್ಲದೆ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೂ ನೋಂದಣಿ ಮಾಡಲು ಆಗುತ್ತಿರಲಿಲ್ಲ. ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದರು.
ಅರಶಿನಗುಂಡಿ ಜಲಪಾತದಲ್ಲಿ ಬಿದ್ದಿದ್ದ ಭದ್ರಾವತಿ ಶರತ್ರ ಮೃತದೇಹ ಪತ್ತೆ!
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹಿಟ್ ಆ್ಯಂಡ್ ರನ್ ಯುವಕ ಬಲಿ! ಏನಿದು ಘಟನೆ?
ಶಿವಮೊಗ್ಗ ಟಿವಿ ಟವರ್ ಗೆ ಎಫ್ಎಂ ಟ್ರಾನ್ಸ್ಮೀಟರ್ ಜೋಡಣೆ! ನಗರದಲ್ಲಿಯೇ ಕೇಳಲಿದೆ ಎಫ್ಎಂ!? ಏನಂದ್ರು ಸಂಸದರು?
ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!
SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!
ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ
