ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಮಗು ನಿಗೂಢ ಸಾವು!

Davanagere-based couple's child found dead under mysterious circumstances in US ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಮಗು ನಿಗೂಢ ಸಾವು!

ಅಮೆರಿಕಾದಲ್ಲಿ ದಾವಣಗೆರೆ ಮೂಲದ ದಂಪತಿ ಮಗು ನಿಗೂಢ ಸಾವು!

KARNATAKA NEWS/ ONLINE / Malenadu today/ Aug 20, 2023 SHIVAMOGGA NEWS

ದಾವಣಗೆರೆ ಮೂಲದ ಮೂವರು ಅಮೇರಿಕಾದಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಘಟನೆ ಶನಿವಾರ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೆಕಲ್ಲು ಗ್ರಾಮದ ಮೂಲದವರಾದ ಒಂದೇ ಕುಟುಂಬದ ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ(35), ಯಶ್ ಹೊನ್ನಾಳ(6) ಅನುಮಾನಸ್ಪದವಾಗಿ ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್‌ನಲ್ಲಿ ಸಾವು ಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ಯೋಗೇಶ್ ಮತ್ತು ಪ್ರತಿಭಾ ಮದುವೆ ನಂತರ ಅಮೇರಿಕಾದಲ್ಲಿ ಮಗುವಿನೊಂದಿಗೆ ವಾಸವಿದ್ದರು. ಮೃತ, ಪತಿ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿ ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಮೂವರ ಸಾವು ಹಲವು ಅನುಮಾನಗಳು ಹುಟ್ಟಿ ಹಾಕಿದ್ದು, ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತ ದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆಯಲ್ಲಿ ವಾಸವಿರುವ ಯೋಗೇಶ್ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 


ಬಿಕ್ಕೋನಹಳ್ಳಿಯಲ್ಲಿ ಸಿಕ್ಕಿದ್ದು ನರಭಕ್ಷಕ ಚಿರತೆ ಎಂದು ಗೊತ್ತಾಗಿದ್ದು ಹೇಗೆ? MAN EATER ಸಿಕ್ಕಿಬಿದ್ದಿದ್ದೇಗೆ?

ಶಿವಮೊಗ್ಗ ಜಿಲ್ಲೆಯ ಬಿಕ್ಕೋನಹಳ್ಳಿಯಲ್ಲಿ ಮಹಿಳೆಯೊಬ್ಬರನ್ನ ಸಾಯಿಸಿದ್ದ ಚಿರತೆಯನ್ನ ಅರಣ್ಯ ಅಧಿಕಾರಿಗಳು ಸೆರೆಹಿಡಿದಿದ್ದಾರೆ. ರೈತ ಮಹಿಳೆಯನ್ನು ಕೊಂದು ತಿಂದಿದ್ದ ನರ ಭಕ್ಷಕ ಚಿರತೆಯನ್ನ ಹಿಡಿಯುವುದು ಅನಿವಾರ್ಯವಾಗಿತ್ತು. 

ನರಭಕ್ಷಕನನ್ನ ಹಿಡಿದ ಇಲಾಖೆ

ಮ್ಯಾನ್​ ಈಟರ್​ ವನ್ಯಜೀವಿಯನ್ನು ಹಿಡಿಯುವುದಕ್ಕೆ ಕಾನೂನಿನ ಅಡೆತಡೆಯು ಇರಲಿಲ್ಲ. ಈ ನಿಟ್ಟಿನಲ್ಲಿ ಚಿರತೆ ಸೆರೆ ಹಿಡಿಯುವ ಸಂಬಂಧ  ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಕಾರ್ಯಾಚರಣೆಗಾಗಿ ಮೈಸೂರಿನಿಂದ ಚಿರತೆ ಟಾಸ್ಕ್ ಪೂರ್ಸ್ ತಂಡ ಕರೆಯಿಸಲಾಗಿತ್ತು.ಕಳೆದ ಆಗಸ್ಟ್ 8 ರಂದು ಬಿಕ್ಕೋನಹಳ್ಳಿ ಗ್ರಾಮದ ರೈತ ಮಹಿಳೆ ಯಶೋಧಮ್ಮರನ್ನು ಕೊಂದಿದ್ದ ಚಿರತೆ ಈ ಭಾಗದಲ್ಲಿ ಆತಂಕ ಮೂಡಿಸಿತ್ತು.  

10 ಕ್ಕೂ ಹೆಚ್ಚು ಬೋನ್​

ಚಿರತೆಯು ಓಡಾಡುವ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಿದ್ದ ಅರಣ್ಯ ಸಿಬ್ಬಂದಿ ಒಟ್ಟಾರೆ,  7 ಟ್ರ್ಯಾಕ್​ ಕ್ಯಾಮರಾಗಳನ್ನು ಅಳವಡಿಸಿದ್ದರು. ಜೊತೆಯಲ್ಲಿ 10 ಕ್ಕೂ ಹೆಚ್ಚು ಬೋನ್​ಗಳನ್ನ ಇಟ್ಟು ಚಿರತೆಗಾಗಿ ಹುಡುಕಾಟ ನಡೆಸಲಾಗಿತ್ತು.  ಈ ಮಧ್ಯೆ ಸ್ಥಳೀಯವಾಗಿ ಮತ್ತೆ ಚಿರತೆ ಕಾಣಿಸಿಕೊಂಡ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದು, ಕಾರ್ಯಾಚರಣೆ ಯಶಸ್ವಿಗೊಂಡಿದೆ. 

ಅದೇ ಅಂತಾ ಹೇಗೆ ಗೊತ್ತು ?

ಸಿಕ್ಕಿಬಿದ್ದ ಚಿರತೆಯ ಪಾದ, ಹಾಗೂ ಅದರ ಮೈಕೂದಲು ಸೇರಿದಂತೆ ಇತರೇ ಗುರುತುಗಳು ಯಶೋಧಮ್ಮರವರ ಸಾವನ್ನಪ್ಪಿದ ಸ್ಥಳದಲ್ಲಿ ಕಾಣ ಸಿಕ್ಕ ಗುರುತುಗಳಿಗೆ ಹೋಲಿಕೆಯಾದ್ದರಿಂದ ಈ ಚಿರತೆಯೇ ಯಶೋದಮ್ಮರರವರನ್ನ ಕೊಂದಿದೆ ಎಂದು ಅರಣ್ಯ ಸಿಬ್ಬಂದಿ ಅಂದಾಜಿಸಿದ್ದಾರೆ. ಯಶೋದಮ್ಮರವರು ಸಾವನ್ನಪ್ಪಿದ ಸ್ಥಳದಿಂದ ತುಸು ದೂರದಲ್ಲಿಯೇ ಚಿರತೆ ಸೆರೆಯಾಗಿದೆ.  

ಬನ್ನೇರುಘಟ್ಟಕ್ಕೆ ಶಿಫ್ಟ್

ಇನ್ನೂ  ನರಭಕ್ಷಕ ಚಿರತೆಯನ್ನು ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಪ್ರಾಥಮಿಕ ಹಂತದಲ್ಲಿ ಶಿಫ್ಟ್ ಮಾಡಲಾಯ್ತಾದರೂ, ಆನಂತರ ಚಿರತೆಯನ್ನು  ಬೆಂಗಳೂರಿನ ಬನ್ನೇರುಘಟ್ಟಕ್ಕೆ ಶಿಫ್ಟ್ ಮಾಡಲಾಗುತ್ತಿದೆ. 

ಕಳ್ಳತನ ಕೇಸ್​ ಬೆನ್ನಲ್ಲೆ ಚಂದ್ರಗುತ್ತಿಗೆ ಎಸ್​ಪಿ ಭೇಟಿ! 12 ಸೂಚನೆ ನೀಡಿದ ಮಿಥುನ್ ಕುಮಾರ್!

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು