ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Three elephants have been sent from Sakrebail elephant camp to catch the wild elephant found on the banks of Sulekere in Channagiri taluk.

ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

ದಾವಣಗೆರೆ ಜಿಲ್ಲೆ ಚನ್ನಗಿರಿ ಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಆನೆಯನ್ನು ಹಿಡಿಯಲು ಇದೀಗ ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಟೀಂ ಚನ್ನಗಿರಿ ತಾಲ್ಲೂಕಿನ ಜಕಲಿಯಲ್ಲಿ ಬೀಡುಬಿಟ್ಟಿದೆ. 

ಬಿಡಾರದ  ಸಾಗರ, ಬಾಲಣ್ಣ, ಹಾಗೂ ಬಹದ್ದೂರ್ ಆನೆಗಳು ಚನ್ನಗಿರಿಯ ಸೂಳೆಕೆರೆ ಯ ಬಳಿಗೆ ಹೋಗಿದ್ದು, ಅಲ್ಲಿ ಕಾರ್ಯಾಚರಣೆಯನ್ನು ಸಹ ಆರಂಭಿಸಿವೆ. ಇನ್ನೊಂದೆಡೆ ನಾಗರಹೊಳೆಯಿಂದ ಅಭಿಮನ್ಯು, ಭೀಮ ಮತ್ತು ಮಹೇಂದ್ರ ಆನೆಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. 

ಉಳಿದೆಲ್ಲಾ ಆಪರೇಷನ್​ಗಿಂತಲೂ ಇದು ಡಿಫರೆಂಟ್ 

ಹೌದು, ಸದ್ಯ ಚನ್ನಗಿರಿಯ ಸೂಳೆಕೆರೆಯ ಸಮೀಪ ಇರುವ ಕಾಡಾನೆಯು ಸುಮಾರು 10 ವರ್ಷದ್ದು ಇರಬಹುದು ಎಂದು ಅಂದಾಜಿಸಲಾಗಿದೆ, ಮೊನ್ನೆ ಮೊನ್ನೆ ತೀರ್ಥಹಳ್ಳಿಯಲ್ಲಿ ಸಿಕ್ಕ ಆನೆಯು ದೇವಂಗಿ ಬೆನ್ನಿಗಿರುವ ಕಾಡನ್ನ ಆವಾಸಸ್ಥಾನ ಮಾಡಿಕೊಳ್ಳಲು ಮುಂದಾಗಿತ್ತು. ಆದರೆ ಸೂಳೆಕೆರೆ ಸಮೀಪ ಇರುವ ಸಲಗವೂ ದಾವಣಗೆರೆ-ಚನ್ನಗಿರಿ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದು, ಅದರ ಕೈಯಲಿ ಸಾಧ್ಯವಾಗದೇ ಹೆದರಿ ಮತ್ತೆ ಕೆರೆ ಸುತ್ತಮುತ್ತ ಓಡಾಡಿಕೊಂಡಿದೆ. ಈ ಭಯದಲ್ಲಿ ಅಲ್ಲಿರುವ ಹಳ್ಳಿಗಳಿಗೆ ನುಗ್ಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಹೆಳುತ್ತಿದ್ದಾರೆ. 

೧೫೦ ಕ್ಕೂ ಹೆಚ್ಚು ಸಿಬ್ಬಂದಿ, ಊರು ತುಂಬಾ ಡಂಗೂರ

ಮುಖ್ಯವಾದ ವಿಷಯವೆಂದರೆ, ಸಾಮಾನ್ಯವಾಗಿ ಕಾಡಿನಲ್ಲಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಾರೆ. ಶಿವಮೊಗ್ಗ-ಭದ್ರಾವತಿಯ ಅರಣ್ಯ ಸಿಬ್ಬಂದಿ ಸೂಳೆಕೆರೆಯ ಬಳಿ ಇರುವ ಜನವಸತಿಯ ಪ್ರದೇಶದಲ್ಲಿ ಕಾಡಾನೆಯನ್ನು ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸುಮಾರು 150 ಸಿಬ್ಬಂದಿ ಸ್ಥಳದಲ್ಲಿದ್ದು, ಕಾರ್ಯಾಚರಣೆಯನ್ನು ಸೂಕ್ಷ್ಮ ರೀತಿಯಲ್ಲಿ ಹ್ಯಾಂಡಲ್​ ಮಾಡಲಾಗುತ್ತಿದೆ. ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದ ಡಾ.ವಿನಯ್​ ಸೇರಿದಂತೆ ತಜ್ಞರ  ಟೀಂ ಸ್ಥಳದಲ್ಲಿದ್ದು, ಪೊಲೀಸ್ ಇಲಾಖೆಯ ಸಹಾಯ ಪಡೆಯಲಾಗಿದೆ. ಅಲ್ಲದೆ ಊರುಗಳಲ್ಲಿ ಡಂಗೂರ ಸಾರಲಾಗಿದ್ದು ಕಾರ್ಯಾಚರಣೆಗೆ ಸಹಾಯ ಕೋರಲಾಗಿದೆ. 




ಆನೆ ಹಿಡಿಯುತ್ತಾರಾ? 

ಆನೆಯು ಈಗಾಗಲೇ ಒರ್ವ ಮಹಿಳೆಯನ್ನು ತುಳಿದು ಸಾಯಿಸಿದ್ದರಿಂದ ಕಾರ್ಯಾಚರಣೆಯಲ್ಲಿ ಆನೆಯನ್ನು ಹಿಡಿಯುವ ಅನಿವಾರ್ಯತೆ ಎದುರಾಗಿದೆ. ಜನವಸತಿ ಪ್ರದೇಶದಲ್ಲಿ ಮಾನವನಿಗೆ ಸಮಸ್ಯೆ  ಉಂಟುಮಾಡಿರುವ ಬೆನ್ನಲ್ಲೆ ಆನೆಯನ್ನು ಹಿಡಿಯಲು ವೈಲ್ಡ್​ ಲೈಫ್​ ಆಕ್ಟ್​ನಲ್ಲಿ ತಕ್ಷಣವೇ ಅನುಮತಿ ಸಿದ್ದವಾಗುತ್ತದೆ. ಸದ್ಯ ಚನ್ನಗಿರಿಯಲ್ಲಿ ಕಾಣಿಸಿಕೊಂಡಿರುವ ಆನೆಯನ್ನು ಹಿಡಿಯಲು ಅನುಮತಿ ಸಿಕ್ಕಾಗಿದೆ.  ಆನೆಯನ್ನು ಹಿಡಿದು ಕಾಡಿಗೆ ಬಿಡುವುದು ಅಥವಾ ಬಿಡಾರದಲ್ಲಿ ಅದನ್ನು ಪಳಗಿಸುವುದು  ಎಂಬು ಇನ್ನಷ್ಟೆ ತೀರ್ಮಾನವಾಗಬೇಕಿದೆ



ಎಲ್ಲಿಂದ ಬಂತು ಆನೆ 



ಇನ್ನೂ ಉಬ್ರಾಣಿ ಕಾಡಿಗೆ ಹೊಂದಿಕೊಂಡಿರುವ ಪ್ರದೇಶಕ್ಕೆ ಕಾಡಾನೆಯು ಹಾಸನದ ಆಲೂರು ಕಡೆಯಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಅರಸೀಕೆರೆ ,ಶಿವನಿ ಮೂಲಕ ಸೂಳೆಕೆರೆಗೆ ಆನೆ ಸಾಗಿ ಬಂದಿರುವ ಸಾಧ್ಯತೆ ಇದೆ. ಅಲ್ಲದೆ ಇಲ್ಲಿಂದ ಮುಂದಕ್ಕೆ ಹೋಗಲು ಆನೆಗೆ ಸಾಧ್ಯವಾಗುತ್ತಿಲ್ಲ. ಹೆದ್ದಾರಿಯಲ್ಲಿ ವಾಹನ ಸಂಚಾರವಿರುವುದರಿಂದ ಆನೆ ರೋಡು ದಾಟಲಾಗದೇ ಹೆದರಿದೆ. ಈ ಭಯದಲ್ಲಿಯೇ ಅದು ಮನುಷ್ಯರ ಮೇಲೆ ದಾಳಿ ಮಾಡುತ್ತಿದೆ ಎನ್ನುತ್ತಿದ್ದಾರೆ ಅರಣ್ಯ ಸಿಬ್ಬಂದಿ



ಆನೆ ಸೆರೆಗೆ ಡ್ರೋಣ್ ಟೀಂ 



ಸದ್ಯ ಆನೆಯ ಪತ್ತೆಗಾಗಿ ಡ್ರೋಣ್ ಟೀಂ ಕೂಡ ಬಂದಿದ್ದು,  ಸಕ್ರೆಬೈಲ್ ಬಿಡಾರದ ವೈದ್ಯರ ಜೊತೆ ಮೈಸೂರು, ನಾಗರಹೊಳೆಯಿಂದಲೂ ವೈದ್ಯರ ಟೀಂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಬಹುಶಃ ಇವತ್ತು ಸಂಜೆಯಹೊತ್ತಿಗೆ ಕಾಡಾನೆಯನ್ನು ಹಿಡಿಯುವ ಸಾಧ್ಯತೆ ಇದೆ. 

 

 



ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS

HASHTAGS

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga

#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnada