8 ವರ್ಷಗಳ ಹಿಂದೆ ಶಂಕರಘಟ್ಟದಿಂದ ಕಾಣೆಯಾಗಿದ್ದ ವ್ಯಕ್ತಿ ಹೊಸಪೇಟೆಯಲ್ಲಿ ಪತ್ತೆ: ಏನಿದು ಸುದ್ದಿ?

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

Missing Person ಭದ್ರಾವತಿ : ಸುಮಾರು 8 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರನ್ನು ಪತ್ತೆಹಚ್ಚುವಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪತ್ತೆಯಾದ ವ್ಯಕ್ತಿಯನ್ನು ಅವರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

indian post office : ತೀರ್ಥಹಳ್ಳಿ ಹಾಗೂ ಶಿವಮೊಗ್ಗ ವ್ಯಾಪ್ತಿಯ ಅಂಚೆ ಕಚೇರಿಗಳ ವಹಿವಾಟು ತಾತ್ಕಾಲಿಕ ಸ್ಥಗಿತ | ಕಾರಣವೇನು

2018ನೇ ಸಾಲಿನಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಘಟ್ಟದಿಂದ ವ್ಯಕ್ತಿಯೊಬ್ಬರು ದಿಢೀರ್ ಕಾಣೆಯಾಗಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿMissing Case ಪ್ರಕರಣ ದಾಖಲಾಗಿತ್ತು. ಅಂದಿನಿಂದ ಈ ಪ್ರಕರಣದ ಪತ್ತೆಗಾಗಿ ಪೊಲೀಸರು ನಿರಂತರ ಪ್ರಯತ್ನ ನಡೆಸುತ್ತಿದ್ದರು.

ಭದ್ರಾವತಿ ಉಪವಿಭಾಗದ ಡಿವೈಎಸ್ಪಿ ಪ್ರಕಾಶ್ ರಾಠೋಡ್ ಅವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಲಾಗಿತ್ತು. ಈ ವೇಳೆ ಪ್ರೊ. ಪಿಎಸ್‌ಐಗಳಾದ ವಿನಯ್ ಮತ್ತು ಯುವರಾಜ್ ಅವರು ಕಾಣೆಯಾದ ವ್ಯಕ್ತಿಯ ವಿಳಾಸ ಮತ್ತು ಸುಳಿವನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದರು.ನಂತರ ಪಿ.ಐಚಿದಾನಂದ ಹಾಗೂ ಪಿ.ಎಸ್.ಐ ಶಿಲ್ಪಾ ಅವರ ನೇತೃತ್ವದಲ್ಲಿ ಕಚೇರಿಯ ಸಿಬ್ಬಂದಿಯಾದ ಹೆಚ್.ಸಿ. ಮಂಜುನಾಥ್ ಅವರು ಕಾರ್ಯಾಚರಣೆ ನಡೆಸಿ, ವ್ಯಕ್ತಿಯು ಹೊಸಪೇಟೆಯಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಅವರನ್ನು ಪತ್ತೆ ಹಚ್ಚಿದರು. ಪತ್ತೆಯಾದ ವ್ಯಕ್ತಿಯನ್ನು ಭದ್ರಾವತಿಗೆ ಕರೆತಂದು, ಅವರ ಕುಟುಂಬದ ವಾರಸುದಾರರಿಗೆ ಒಪ್ಪಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor