KARNATAKA | Jan 6, 2024 | ಕದ್ದ ಕೋಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಲ್ಲೆ ಯತ್ನ!
ಕದ್ದ ಕೋಳಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೋಳಿ ಕತ್ತರಿಸುವ ಮಚ್ಚಿನಿಂದಲೇ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಕೋಲಾರ ಜಿಲ್ಲೆ ಗಲ್‌ಪೇಟೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿ ಕೊಂಡಿದ್ದಾರೆ.
ಗಲ್‌ಪೇಟೆ ಪೊಲೀಸ್ ಸ್ಟೇಷನ್
ಇಲ್ಲಿನ ಕೊಂಡರಾಜನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿನ ಖಾದಿಪುರ ಗ್ರಾಮದಲ್ಲಿ ಅನೇಕ ದಿನಗಳಿಂದ ಕೋಳಿಗಳನ್ನು ಕಳವಾಗುತ್ತಿತ್ತಂತೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಮನೆಯೊಂದರಲ್ಲಿಯು ಕೋಳಿ ಕಳವುವಾಗಿತ್ತು ಎನ್ನಲಾಗಿದೆ..
READ : ಅಪರೂಪದ ಕೇಸ್! ಕಾಳು ಮೆಣಸಿನ ಪ್ರಕರಣ ಭೇದಿಸಿದ ಸಾಗರ ಟೌನ್ ಪೊಲೀಸ್ !
ಇದಕ್ಕೆ ಸಂಬಂಧಿಸಿದಂತೆ ಕಳುವಾದ ಕೋಳಿಗಳು ಅಮ್ಮವಾರಿ ಪೇಟೆ ಯ ಬಳಿ ವ್ಯಕ್ತಿಯೊಬ್ಬರು ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಅವರ ಕಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ತಮ್ಮ ಕೋಳಿ ಅಲ್ಲಿ ಸಿಗಬಹುದು ಎಂದು ವ್ಯಾಪಾರಿಯ ಅಂಗಡಿಗೆ ಬಂದಿದ್ದಾರೆ.
ಅಂಗಡಿಗೆ ಬಂದು ನೋಡಿದಾಗ, ಅಲ್ಲಿ ಸಂತ್ರಸ್ತರ ಕೋಳಿ ಪತ್ತೆಯಾಗಿದೆ. ಹಾಗಾಗಿ ಅಂಗಡಿಯಾತನನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಅಂಗಡಿಯಾತ ಸಂತ್ರಸ್ತರ ಮೇಲೆ ಮಚ್ಚು ಬೀಸಿದ್ದಾನೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಅಂಗಡಿಯಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.