ಅಪರೂಪದ ಕೇಸ್! ಕಾಳು ಮೆಣಸಿನ ಪ್ರಕರಣ ಭೇದಿಸಿದ ಸಾಗರ ಟೌನ್ ಪೊಲೀಸ್ !

A rare case! Sagar Town police crack pepper case

ಅಪರೂಪದ ಕೇಸ್! ಕಾಳು ಮೆಣಸಿನ ಪ್ರಕರಣ ಭೇದಿಸಿದ ಸಾಗರ ಟೌನ್ ಪೊಲೀಸ್ !
ಸಾಗರ ಟೌನ್​ ಪೊಲೀಸ್ ಸ್ಟೇಷನ್, Sagar Town Police Station, ಕಾಳುಮೆಣಸು, pepper

SHIVAMOGGA  |  Jan 6, 2024  |  ಶಿವಮೊಗ್ಗ ಜಿಲ್ಲೆ ಸಾಗರ ಪೊಲೀಸರು ಕಾಳುಮೆಣಸಿನ ಕೇಸ್​ವೊಂದನ್ನ ಬಿಡಿಸಿದ್ದಾರೆ. ಫೇಕ್ ಚೆಕ್​ ಕೊಟ್ಟು ಕಾಳುಮೆಣಸು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ನಾಲ್ವರನ್ನ ಸಾಗರ ಟೌನ್​ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

READ : ಮಲೆನಾಡಿಗರಿಗೆ ರಿಲೀಫ್! ಹುಲಿ ಉಗುರು & ಕಾಡುಪ್ರಾಣಿಗಳ ವಸ್ತುಗಳನ್ನ ವಾಪಸ್ ಕೊಡಲು ಸರ್ಕಾರದಿಂದ ಲಾಸ್ಟ್​ ಚಾನ್ಸ್​!

ಸಾಗರ ಟೌನ್​ ಪೊಲೀಸ್ ಸ್ಟೇಷನ್/ Sagar Town Police Station

ಸಾಗರದ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದಿಂದ ನಕಲಿ ಚೆಕ್ ಮೂಲಕ 4.25 ಕ್ವಿಂಟಾಲ್ ಕಾಳು ಮೆಣಸು ಖರೀದಿಸಲಾಗಿತ್ತು. ಆ ಬಳಿಕ ಈ ಸಂಬಂಧ ಸಾಗರ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್​ ದಾಖಲಾಗಿತ್ತು. ಪ್ರಕರಣ ತನಿಖೆ ಕೈಗೊಂಡ , ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಇನ್ಸ್ ಪೆಕ್ಟರ್ ಸೀತಾರಾಮ ಹಾಗೂ ಪಿಎಸ್‍ಐ ನಾಗರಾಜ  ಹಾಗೂ ಸಿಬ್ಬಂದಿಗಳಾದ ರತ್ನಾಕರ, ಶ್ರೀನಿವಾಸ, ಮೆಹಬೂಬ್, ವಿಕಾಸ್, ಕೃಷ್ಣಮೂರ್ತಿ, ವಿಶ್ವನಾಥ್ ಅವರ ತಂಡ  ಆರೋಪಿಗಳನ್ನ ಬಂಧಿಸಿದ್ದಾರೆ. 

ಬಂಧಿತರು ಸಾಗರ, ಶೆಟ್ಟಿಸರ, ರಾಮನಗದ್ದೆ ಮೂಲದವರಾಗಿದ್ದು, ಆರೋಪಿಗಳು ನಾಲ್ಕು ಕಾಲು ಕ್ವಿಂಟಾಲ್ ಕಾಳುಮೆಣಸನ್ನ ಬೇರೆಯವರಿಗೆ ಮಾರಲು ಮುಂದಾಗಿದ್ದರು ಎನ್ನಲಾಗಿದೆ. ಅವರನ್ನ ಬಂಧಿಸಿರುವ ಪೊಲೀಸರು ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ವಿಶೇಷ ಅಂದರೆ, ಬಂಧಿತ ಆರೋಪಿಗಳು ಉನ್ನತ ವ್ಯಾಸಂಗ ಕೈಗೊಂಡಿರುವ ವಿದ್ಯಾರ್ಥಿಗಳಾಗಿದ್ದು, ಪ್ರಕರಣದ ಅಂತರಾಳ ಇನ್ನಷ್ಟೆ ಗೊತ್ತಾಗಬೇಕಿದೆ.