ಲಯನ್ ಸಫಾರಿ ಸಮೀಪ ಭೀಕರ ಅಪಘಾತ | ಮೂವರ ಸಾವು | ಹಲವರಿಗೆ ಗಾಯ
Lion Safari in Shivamogga. Innova car traveling from Shivamogga towards Sagar collided with a Swift car coming from Ayanur near Muddina Koppa.
SHIVAMOGGA | MALENADUTODAY NEWS | Jul 6, 2024 ಮಲೆನಾಡು ಟುಡೆ
ಶಿವಮೊಗ್ಗದ ಲಯನ್ ಸಫಾರಿ ಬಳಿ ಭೀಕರ ಅಪಘಾತವಾಗಿದೆ. ಮುದ್ದಿನ ಕೊಪ್ಪದ ಬಳಿಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದೆ. ಇಲ್ಲಿನ ಇನ್ನೋವಾ ಕಾರು ಹಾಗೂ ಸ್ವಿಫ್ಟ್ ಕಾರು ನಡುವೆ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ಸಾಗರ ಕಡೆಗೆ ಹೋಗುತ್ತಿದ್ದ ಇನ್ಹೋವಾ ಕಾರು ಹಾಗೂ ಆಯನೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿಯಾಗಿದೆ.
ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದ್ದು, ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಲ್ಲಿ ಎರಡು ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಅವರನ್ನ ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.
A fatal accident involving two cars occurred near the Lion Safari in Shivamogga. An Innova car traveling from Shivamogga towards Sagar collided with a Swift car coming from Ayanur near Muddina Koppa.