ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಾಮಚಂದ್ರಪುರ ಮಠದಲ್ಲಿ ಇಂದಿನಿಂದ ರಾಮೋತ್ಸವ

Ramotsava at Ramachandrapura Mutt in Hosanagara taluk of Shivamogga district from today

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಾಮಚಂದ್ರಪುರ ಮಠದಲ್ಲಿ ಇಂದಿನಿಂದ ರಾಮೋತ್ಸವ
Ramachandrapura Mutt , Ramotsava

Shivamogga  Apr 16, 2024 | Ramachandrapura Mutt , Ramotsava   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಾಮಚಂದ್ರಪುರ ಮಠದಲ್ಲಿ ಇಂದಿನಿಂದ ರಾಮೋತ್ಸವ ಕಾರ್ಯಕ್ರಮಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂಕಿನ ರಾಮಚಂದ್ರಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ನಿನ್ನೆ ಸೋಮವಾರ ಪುರ ಪ್ರವೇಶ ಮಾಡಿದರು.ಪಟ್ಟಣದ ಹೊರವಲಯದ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನ ಬಳಿ ಸ್ವಾಮೀಜಿಯ‌ನ್ನು ಭಕ್ತರು ಸಂಭ್ರಮದಿಂದ ಸ್ವಾಗತಿಸಿದರು. ತೆರೆದ ರಥದಲ್ಲಿ ಸ್ವಾಮೀಜಿಯ ಮೆರವಣಿಗೆ ನಡೆಯಿತು. ಬಳಿಕ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸ್ವಾಮೀಜಿ ವಿಶೇಷ ಪೂಜೆ ನಡೆಸಿದರು.ನಂತರ ರಾಮಚಂದ್ರಪುರ ಮಠಕ್ಕೆ ತೆರಳಿದರು. ಮಠದಲ್ಲಿ ಏಪ್ರಿಲ್‌ 16ರಿಂದ 19 ವರೆಗೆ ರಾಮೋತ್ಸವ ನಡೆಯಲಿದ್ದು, ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ