ಮಕ್ಕಳ ಕುಣಿತ ಎಷ್ಟು ಚೆಂದಾ ಅಲ್ಲಾ ಮಲೆನಾಡ ಪುಟಾಣಿಗಳ ವಿಶಿಷ್ಟ ವಿಡಿಯೋ ಮನಸ್ಸಿಗೆ ಮುದ ನೀಡುತ್ತೆ ಮಿಸ್ ಮಾಡಬೇಡಿ!

Don't miss the unique video of the children dancing so beautiful/ malennadu putanigalu

ಮಕ್ಕಳ ಕುಣಿತ ಎಷ್ಟು ಚೆಂದಾ ಅಲ್ಲಾ ಮಲೆನಾಡ ಪುಟಾಣಿಗಳ ವಿಶಿಷ್ಟ ವಿಡಿಯೋ ಮನಸ್ಸಿಗೆ ಮುದ ನೀಡುತ್ತೆ  ಮಿಸ್ ಮಾಡಬೇಡಿ!
Don't miss the unique video of the children dancing so beautiful/ malennadu putanigalu

SHIVAMOGGA  |  Jan 16, 2024  | malennadu putanigalu ಪುಟ್ಟ ಪುಟ್ಟ ಮಕ್ಕಳ ಸ್ಟೇಜ್​ ಡ್ಯಾನ್ಸ್​ ನೋಡೋದಕ್ಕೆ ಕಣ್ಣಿಗೆ ಹಬ್ಬ. ಏನೂ ತಿಳಿಯದ ಎದುರಿಗೆ ಹೇಳಿಕೊಡುವ ಸ್ಟೆಪ್ಸ್ ಮಾಡುವಾಗ ವೇದಿಕೆ ಮೇಲೆ ಸೃಷ್ಟಿಯಾಗುವ ನಗುವಿನ ಲೋಕ ಎಂತಹ ಖಿನ್ನತೆಯನ್ನಾದರೂ ಸಹ ಅಳಿಸಿ ಮುಖದಲ್ಲಿ ನಗುವನ್ನ ಮೂಡಿಸುತ್ತದೆ. ಮಕ್ಕಳನ್ನ ಪರಮಾತ್ಮ ಎನ್ನುತ್ತೇವೆ. ಅಂತಾ ಪರಮಾತ್ಮದ ಮನಸ್ಸುಗಳು ಕುಣಿಯುವುದು ನೋಡುವ ಅವಕಾಶ  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಲಭ್ಯವಾಗಿತ್ತು. ಇಲ್ಲಿನ ವಿದ್ಯಾ ಸನ್ನಿದಾನಂ ಶಿಕ್ಷಣ ಸಂಸ್ಥೆಯ ಮಕ್ಕಳ ಡ್ಯಾನ್ಸ್​ನ ವಿಡಿಯೋ ಇದೀಗ ಎಲ್ಲರನ್ನು ಆಕರ್ಷಸುತ್ತಿದೆ. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ  ಸಾಮಾಜಿಕ ಕಾರ್ಯಕರ್ತರಾದ ಗುರು ಶಕ್ತಿ ವಿದ್ಯಾಧರ ಎನ್ ಆರ್ ದೇವಾನಂದ್ ಹಾಲಗದ್ದೆ ಉಮೇಶ್ ಮನುಷ್ಯತ್ವ ಮಾನವೀಯತೆ ಹೊಂದಲು ಸಂಸ್ಕಾರಯುತ ಶಿಕ್ಷಣ ಅಗತ್ಯವಿದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗ ಪೈಪೋಟಿಯೊಂದಿಗೆ ಸಂಸ್ಕಾರ ಹೊಂದಿದ ಶಿಕ್ಷಣ ನೀಡಲು ಮಂದಾಗಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ. 

ಬಟ್ಟೆ ಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ಮುಖ್ಯಸ್ಥರಾದ ಮಂಜುನಾಥ ಬ್ಯಾಣದ ಮಕ್ಕಳಲ್ಲಿ ದೈವ ಸ್ವರೂಪವನ್ನು ಕಾಣುವ ಮೂಲಕ ಅವರಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಬೇಕು ಈ ಕೆಲಸವನ್ನು ಪೋಷಕರಿಂದ ಮಾಡಲು ಸಾಧ್ಯವಿಲ್ಲ ಈ ಮಹತ್ವದ ಕಾರ್ಯ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರ ಹೊಣೆಯಾಗಿದೆ ಎಂದರು.