ಹೊಸನಗರ ಕಾಡಲ್ಲಿ ಕಳ್ಳಾಟ! ಮನೆಯಲ್ಲಿಯೇ ಸಿಕ್ತು ಲಕ್ಷಗಟ್ಟಲೇ ಮೌಲ್ಯದ ನಾಟಾ ! ಬೇರೆಯದ್ದೆ ಇದೆಯಾ ಆಟ?

Hosanagara forest officials conducted a raid and seized the trees that were illegally cut downಹೊಸನಗರ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಕಡಿದಿದ್ದ ಮರಗಳನ್ನ ವಶಕ್ಕೆ ಪಡೆದಿದ್ದಾರೆ

ಹೊಸನಗರ ಕಾಡಲ್ಲಿ ಕಳ್ಳಾಟ! ಮನೆಯಲ್ಲಿಯೇ ಸಿಕ್ತು ಲಕ್ಷಗಟ್ಟಲೇ ಮೌಲ್ಯದ ನಾಟಾ ! ಬೇರೆಯದ್ದೆ ಇದೆಯಾ ಆಟ?

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದ ವನ್ಯಜೀವಿ ವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ‌ ಮರಗಳ್ಳತನ ಮಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ. ಶಿವಮೊಗ್ಗ ನಗರದ ನಿವಾಸಿ ವಾಸುದೇವ ಎಂಬಾತನನ್ನು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಮರಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಶಿವಮೊಗ್ಗ ವನ್ಯಜೀವಿ ವಿಭಾಗದ ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಹಾರೋಹಿತ್ಲು ಗ್ರಾಮದ ಸ.ನಂ 23 ರ ಹಾರೋಹಿತ್ಲು ಮೀಸಲು ಅರಣ್ಯ ಪ್ರದೇಶಲ್ಲಿ ದಿನಾಂಕ 18.08.2023 ರಂದು ಅಕ್ರಮವಾಗಿ ಬೀಟೆ ಜಾತಿಯ ಒಂದು ಮರ ಮತ್ತು ಸಾಗುವಾನಿ ಜಾತಿಯ ಎರಡು ಮರಗಳು ಕಡಿತಲೆಗೆ ಸಂಬಂಧಿಸಿದಂತೆ ಅರಣ್ಯ ಮೊಕದ್ದಮೆ ಸಂಖ್ಯೆ:10/2023-24 ದಿನಾಂಕ: 18.08.2023 ರಂತೆ ಪ್ರಕರಣವನ್ನು ದಾಖಲಿಸಲಾಗಿತ್ತು.

ಸಿರಿಗೆರೆ ವಲಯದ ಅರಣ್ಯಾಧಿಕಾರಿಗಳ ತಂಡ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನಕೃಷ್ಣ ಪಟಗಾರ್‌ IFS, ಹಾಗು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ  ಬಿ.ಸುರೇಶ SFS, ರವರ ಸೂಕ್ತ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದ ಗೋಲ್ಡನ್‌ಸಿಟಿ ಕಾಲೋನಿಯ ವಾಸುದೇವ ಎಂಬಾತನನ್ನು ಬಂಧಿಸಿಲಾಗಿದೆ. ಆರೋಪಿಯ ಮಗಳಿಗೆ ಸೇರಿದ, ನಿರ್ಮಾಣ ಹಂತದ ಮನೆಯಲ್ಲಿ ಅಕ್ರಮವಾಗಿ ಮರವನ್ನು ದಾಸ್ತಾನು ಇರುವುದನ್ನು ಪತ್ತೆಹಚ್ಚಿ ಪ್ರಕರಣವನ್ನು ಭೇದಿಸಲಾಗಿದೆ. 

ಇನ್ನೂ ಸ್ತಳೀಯರು ಆರೋಪಿಸುವಂತೆ ಈ ಭಾಗದಲ್ಲಿ ಮರಗಳ ಕಳ್ಳತನ ಯತೇಚ್ಚವಾಗಿ ನಡೆಯುತ್ತಿದ್ದು ಅರಣ್ಯ ಇಲಾಖೆಯ ಒಳಗಿನಿಂದಲೇ ಮರ ಕಳ್ಳತನಕ್ಕೆ ಬೆಂಬಲ ನೀಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. 


ಉದ್ಯೋಗಕ್ಕಾಗಿ ಹುಡಕಾಡ್ತಿದ್ದೀರಾ? ಇಲ್ಲಿದೆ ಅವಕಾಶ! ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ-ಪದವಿ! ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (Shimoga District Employment Exchange Office) ವತಿಯಿಂದ ಆಗಸ್ಟ್ 23 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 

ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ದಿಪ್ಲೋಮಾ ಮತ್ತು ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೊಡಾಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 08182-255293, 9380663606, 9482023412, 9535312531 ನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಬಾಂಬ್ ಇನ್​ ದಿ ಸಿಟಿ ಗೇಮ್ ಆಡ್ತಿರಾ! ಮಹಿಳೆಯರಿಗೆ ಮಾತ್ರ ಅವಕಾಶ! ಪುರುಷರಿಗೂ ಇದೆ ಸ್ಪರ್ಧೆ ! ಏನಿದು ಪೂರ್ತಿ ವಿವರ ಇಲ್ಲಿದೆ ಓದಿ

ಮೇಜರ್ ಧ್ಯಾನ್‌ಚಂದ್‌ರವರ ಹುಟ್ಟುಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ  ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ

ಈ ಸಂಬಂಧ  ಪುರುಷರು ಹಾಗೂ ಮಹಿಳೆಯರಿಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ  (Nehru Stadium, Shimoga)ಆ.29 ರಂದು ಬೆಳಗ್ಗೆ 9.30 ರಿಂದ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ.

ಯಾವ್ಯಾವ ಕ್ರೀಡೆಗಳಿಗೆ ಅವಕಾಶ

ರಸಪ್ರಶ್ನೆ ಸ್ಪರ್ಧೆ, ಲಗೋರಿ (ಪುರುಷರಿಗೆ ಮಾತ್ರ), ಬಾಂಬ್ ಇನ್ ದಿ ಸಿಟಿ ( ಮಹಿಳೆಯರಿಗೆ ಮಾತ್ರ), ಹಗ್ಗ ಜಗ್ಗಾಟ ಸ್ಪರ್ಧೆ (ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ), ನಡಿಗೆ ಸ್ಪರ್ಧೆ (ಪುರುಷರಿಗೆ 4 ಕಿ.ಮೀ., ಮಹಿಳೆಯರಿಗೆ 2 ಕಿ.ಮೀ), ಹಾಕಿ ಸ್ಪರ್ಧೆ(ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ) ಸ್ಪರ್ಧೆಗಳಿವೆ. 

ಆಸಕ್ತ ಕ್ರೀಡಾಪಟುಗಳು ಆ.29 ರಂದು ಬೆಳಗ್ಗೆ 9.30ರೊಳಗಾಗಿ ನೆಹರೂ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 9008949847 ನ್ನು ಸಂಪರ್ಕಿಸಬಹುದಾಗಿದೆ. 


ಶಿವಮೊಗ್ಗ ನಗರದ ಈ ಪ್ರಮುಖ ಭಾಗಗಳಲ್ಲಿ ದಿನವಿಡಿ ಇರೋದಿಲ್ಲ ವಿದ್ಯುತ್! ಯಾವಾಗ? ಎಲ್ಲೆಲ್ಲಿ ? ವಿವರ ಇಲ್ಲಿದೆ



ಶಿವಮೊಗ್ಗ ನಗರ ಉಪ ವಿಭಾಗ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗ ಮತ್ತು ಪರಿವರ್ತಕ ಸ್ಥಳಾಂತರ ಕಾಮಗಾರಿಯನ್ನು ಮೆಸ್ಕಾಂ ಶಿವಮೊಗ್ಗ (Mescom Shimoga) ವಿಭಾಗ ಹಮ್ಮಿಕೊಂಡಿದೆ. 




ಈ ಹಿನ್ನೆಲೆಯಲ್ಲಿ  ಎಂಎಫ್-20 ಆನಂದರಾವ್ ಬಡಾವಣೆ 11 ಕೆ.ವಿ. ಮಾರ್ಗದ  ಟಿಪ್ಪುನಗರ ಎಡಭಾಗ 1 ರಿಂದ 7ನೇ ಕ್ರಾಸ್, ಮಂಜುನಾಥ ಬಡಾವಣೆ, ಆನಂದರಾವ್ ಬಡಾವಣೆ, ಪದ್ಮಾ ಟಾಕೀಸ್, ಸರ್ಕಾರಿ ಬಸ್ ಡಿಪೋ, ಕಿನಿ ಲೇಔಟ್ ಹಿಂಭಾಗ, ಮಿಳಘಟ್ಟ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಯಾವಾಗ?

ಆಗಸ್ಟ್​  23 ರಂದು ಬೆಳಗ್ಗೆ 10.00 ರಿಂದ ಸಂಜೆ 06.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಮೆಸ್ಕಾಂಯೊಂದಿಗೆ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.




ಜಿಂಕೆ ಬೇಟೆಯಾಡಿ ಪಾರ್ಟಿ! ಅರಣ್ಯ ಇಲಾಖೆ ರೇಡ್ ! ಆರು ಮಂದಿ ಅರೆಸ್ಟ್



ಚಿಕ್ಕಮಗಳೂರು:  ಜಿಲ್ಲೆ ಅರಣ್ಯಾಧಿಕಾರಿಗಳು ಜಿಂಕೆ ಬೇಟೆ ಮಾಡಿದ ಆರೋಪಿಗಳನ್ನ ಬಂಧಿಸಿದ್ದಾರೆ.  ಜಿಂಕೆಯನ್ನು ಬೇಟೆಯಾಡಿ  ಅದರ ಅಡುಗೆ ತಯಾರಿಯಾಗುತ್ತಿದ್ದಾಗಲೇ ರೇಡ್​ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು  ಜಿಂಕೆ ಮಾಂಸ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 



ಭದ್ರ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯ ಮುತ್ತೋಡಿ  ಫಾರೆಸ್ಟ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,  ಕಾಫಿ ತೋಟವೊಂದರಲ್ಲಿ ಜಿಂಕೆ ಬೇಟೆಯಾಡಿ ಪಾರ್ಟಿ ನಡೆಸಲಾಗುತ್ತಿತ್ತು. ಈ ವೇಳೆ  ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾ ಆರು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ   ಜೊತೆಗೆ 8 ಕೆ.ಜಿ. ಜಿಂಕೆ ಮಾಂಸ ಹಾಗೂ ನಾಡ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ.



ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು