hosanagara :ಹಳೆಯ ನೀರಿನ ಟ್ಯಾಂಕ್​ ಹತ್ತಿ ಕುಳಿತು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಂದಲೇ ಪ್ರತಿಭಟನೆ! ಏನಿದು ಹೊಸನಗರದಲ್ಲಿ?

hosanagara : The president and members of the gram panchayat climbed on to the old water tank and sat down protested

hosanagara :ಹಳೆಯ ನೀರಿನ ಟ್ಯಾಂಕ್​ ಹತ್ತಿ ಕುಳಿತು,  ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಂದಲೇ ಪ್ರತಿಭಟನೆ! ಏನಿದು ಹೊಸನಗರದಲ್ಲಿ?
hosanagara :ಹಳೆಯ ನೀರಿನ ಟ್ಯಾಂಕ್​ ಹತ್ತಿ ಕುಳಿತು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಂದಲೇ ಪ್ರತಿಭಟನೆ! ಏನಿದು ಹೊಸನಗರಲ್ಲಿ?

MALENADU TODAY. COM | SHIVAMOGGA NEWS | 3 FEBRUARY 2023

ಹೊಸದಾಗಿ ನೀರಿನ ಓವರ್​ ಹೆಡ್​ ಟ್ಯಾಂಕ್ (over head water tank)​ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ನೀರಿನ ಟ್ಯಾಂಕ್​ ಹತ್ತಿ ಪ್ರತಿಭಟಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (Hosangara taluk) ಮಾರುತಿಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ  ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಟ್ಯಾಂಕ್ ಮೇಲೇರಿ ಪ್ರತಿಭಟನೆ ನಡೆಸಿದ್ದಾರೆ. 

*ಇನ್​ಸ್ಪೆಕ್ಟರ್​ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್‌ಐ ಗಳ ವರ್ಗಾವಣೆ*

 ಪಂಚಾಯತಿ ಬಳಿ ಇರುವ ನೀರಿನ ಟ್ಯಾಂಕ್ ಹಳೆಯದಾಗಿದ್ದು, ಅದನ್ನು ಕೆಡವಿ ಹೊಸ ಟ್ಯಾಂಕ್ ನಿರ್ಮಿಸಲು ಜಿಲ್ಲಾ ಪಂಚಾಯತ್​ನ ಸಭೆಯಲ್ಲಿ ತೀರ್ಮಾನವಾಗಿದೆ. ಇದಕ್ಕಾಗಿ 94.22 ಲಕ್ಷ ರೂಪಾಯಿ ಮೀಸಲಿಡಿಲಾಗಿದೆಯಂತೆ. ಇಷ್ಟೆಲ್ಲಾ ಆಗಿ ವರ್ಷವಾದರೂ ಇನ್ನೂ  ಸಹ ಹಳೆಯ ಟ್ಯಾಂಕ್ ಕೆಡವಿಲ್ಲ.  ಕುಸಿಯುವ ಸ್ಥಿತಿಯಲ್ಲಿದ್ರೂ ಹೊಸ ಟ್ಯಾಂಕ್ ನಿರ್ಮಾಣದ ಗೋಜಿಗೆ ಯಾರು ಹೋಗಿಲ್ಲ. ಹೀಗಾಗಿ ಜಿಲ್ಲಾ ಪಂಚಾಯತ್​ ಸಿಇಒ ಸ್ಥಳಕ್ಕೆ ಬಂದು ಲಿಖಿತ ಆದೇಶ ನೀಡುವವರೆಗೂ ಕೆಳಗಿಳಿಯುವುದಿಲ್ಲ ಎಂದು ಪಂಚಾಯತಿ ಅಧ್ಯಕ್ಷ ಚಿದಾನಂದ ಹಾಗೂ ಸದಸ್ಯರಾದ ಇಂದ್ರೇಶ್, ಪ್ರಕಾಶ್, ಶ್ರೀಧರ್ ಶೆಟ್ಟಿ ಎಲ್ಲರೂ ಟ್ಯಾಂಕ್ ಮೇಲೇರಿ ಪ್ರತಿಭಟಿಸಿದ್ರು. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

ಇನ್ನೂ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಈ ಪ್ರತಿಭಟನೆ ಬಗ್ಗೆ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದ್ಧಾರೆ. ಬಳಿಕ ಸ್ಥಳಕ್ಕೆ ಬಂಧ ಅಗ್ನಿಶಾಮಕ ಸಿಬ್ಬಂದಿ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇನ್ನೂ ಪ್ರತಿಭಟನಾಕಾರರು ಮನವೊಲಿಕೆಗೆ ಬಗ್ಗದಿದ್ದಾಗ ಸ್ಥಳಕ್ಕೆ ಬಂಧ ಶಿವಮೊಗ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾವಿ ಕಾರ್ಯಪಾಲಕ ಅಭಿಯಂತರ 20 ದಿನಗಳಲ್ಲಿ ಕಾಮಗಾರಿಗೆ ಅವಕಾಶ ಮಾಡಿಕೊಡ್ತೀವಿ ಎಂದು ಬರೆದುಕೊಟ್ಟು ಪ್ರತಿಭಟನಾಕಾರರನ್ನು ಕೆಳಕ್ಕೆ ಇಳಿಸಿದರು. 

*Shivamogga news : ಕಾಲೇಜು ಕ್ಯಾಂಪಸ್‌ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com