ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

Job at Shimoga airport! Don't believe fake advertising! What did the Shimoga SP say?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

ಶಿವಮೊಗ್ಗ ನಗರದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಕೆಲಸ ಏನಾದರೂ ಸಿಗಬಹುದೇ ಎಂದು ಯವ ಸಮೂಹ ತನ್ನದೇ ದಾರಿಯಲ್ಲಿ ಹುಡುಕಾಡುತ್ತಿದೆ. ಅಲ್ಲದೆ ಲೋಕಲ್​ನಲ್ಲಿಯೇ ಕೆಲಸ ನೀಡಬೇಕು ಎಂಬ ಅಭಿಯಾನವೂ ಈ ಸಂಬಂಧ ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೆ ಉದ್ಯೋಗ ಕೊಡಿಸುತ್ತೇವೆ ಎಂಬ ಜಾಹಿರಾತುಗಳು ಸಹ ಅಬ್ಬರಿಸುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮಲೆನಾಡು ಟುಡೇ ಈ ಮೊದಲೇ ಸುದ್ದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ ಓದಿ FACT CHECK : ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಉದ್ಯೋಗಾವಕಾಶದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ

ಇದೀಗ ಇಂತಹ ಫೇಕ್​ ಜಾಹಿರಾತುಗಳನ್ನು ನಂಬದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್​ ಕುಮಾರ್​ ರವರು ಸಂದೇಶ ರವಾನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸ್ತೇವೆ ಎಂಬಂತಹ ಫೇಕ್​ ಜಾಹಿರಾತುಗಳು ಹರಿದಾಡುತ್ತಿದೆ ಎಂದು ನಕಲಿ ಜಾಹಿರಾತಿನ ಫೋಟೋವೊಂದನ್ನು ಷೇರ್ ಮಾಡಿದ್ದಾರೆ. ಈ ಜಾಹಿರಾತು ಹಾಗೂ ಇದರಲ್ಲಿರುವ ಮಾಹಿತಿ ಸತ್ಯವಾದುದಲ್ಲ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಫೇಕ್​ ಜಾಹಿರಾತಿನ ಮೂಲ ಹುಡುಕಲಾಗುತ್ತಿದೆ ಎಂದು ಎಸ್​ಪಿ ಸಂದೇಶ ರವಾನಿಸಿದ್ದಾರೆ.

ಇನ್ನು ಎಸ್​ಪಿಯವರು ಷೇರ್ ಮಾಡಿದ್ದ ಜಾಹಿರಾತಿನಲ್ಲಿ ಶಿವಮೊಗ್ಗ ಏರ್​ಪೋರ್ಟ್​ನ ಫೋಟೋ ಬಳಸಿ ವಿವಿಧ ವಿಭಾಗಗಳಲ್ಲಿ ಹುದ್ದೆ ಕೊಡಿಸುವುದಾಗಿ ಪ್ರಕಟಿಸಲಾಗಿತ್ತು. ಸದ್ಯ ಇದು ನಕಲಿ ಎಂಬುದು ಗೊತ್ತಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಉದ್ಯೋಗವಕಾಶಕ್ಕಾಗಿ ಹಾತೊರೆಯುತ್ತಿರುವವರನ್ನು ಗುರಿಯಾಗಿಸಿಕೊಂಡು ಇಂತಿಷ್ಟು ಹಣ ಕಟ್ಟಿ ಎನ್ನುವ ಭೋಗಸ್​ ಕಂಪನಿಗಳು ಶಿವಮೊಗ್ಗ ನಗರದಲ್ಲಿ ತನ್ನದೆ ನೆಟ್​ವರ್ಕ್​ ನಲ್ಲಿ ಕೆಲಸ ಮಾಡುತ್ತಿವೆ. ಅಂತಹ ಕಂಪನಿಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇನ್ನೂ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಅಧಿಕಾರಿ ವಲಯದ ಮೂಲಗಳ ಪ್ರಕಾರ, ಇದುವರೆಗೂ ಏರ್​ಪೋರ್ಟ್ಗೆ ಸಂಬಂಧಿಸಿದ ಉದ್ಯೋಗವಕಾಶಗಳ ಬಗ್ಗೆ ಪ್ರಕಟಣೆಯು ಸಹ ಹೊರಬಿದ್ದಿಲ್ಲ. 

Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ