ಸದ್ಯ ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ಧಾಣ ಕಾಮಗಾರಿ ಪೂರ್ಣಗೊಂಡಿದ್ದು, ಇದೇ ಫೆಬ್ರವರಿ 27 ಏರ್ಪೋರ್ಟ್ ನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡುತ್ತಾರೆ ಎಂಬ ಮಾಹಿತಿಯಿದೆ. ಈ ನಡುವೆ ಶಿವಮೊಗ್ಗ AIRPORT ನಲ್ಲಿ ಉದ್ಯೋಗವಕಾಶಕ್ಕಾಗಿ ಹಲವು ಮಂದಿ ತಮಗೆ ಸಿಗುವ ಮೂಲಗಳಲ್ಲಿ ಪರಿಶೀಲಿಸ್ತಿದ್ಧಾರೆ. ಅಷ್ಟೆಅಲ್ಲದೆ ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡಬೇಕು ಎಂಬ ಅಭಿಪ್ರಾಯವೂ ಅಭಿಯಾನವಾಗಿ ಮಾರ್ಪಟ್ಟಿದೆ. ಈ ಮಧ್ಯೆ ಉದ್ಯೋಗವಕಾಶ ಕೊಡಿಸುತ್ತೇವೆ ಎಂಬ ಮಾತುಗಳನ್ನು ಹೇಳುವವರ ಬಗ್ಗೆಯು ವರದಿ ಬರುತ್ತಿದೆ.
ಈ ವಿಚಾರದಲ್ಲಿ ಕೆಲವೊಂದು ಸ್ಪಷ್ಟತೆಗಳನ್ನು ಮಲೆನಾಡು ಟುಡೆ ತಂಡ ಕಲೆಹಾಕಲು ಮುಂದಾಗಿದೆ. ಮೊದಲನೆಯದ್ದಾಗಿ ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಹೌಸ್ ಕೀಪಿಂಗ್ ನ ವಿಭಾಗದಲ್ಲಿ ಉದ್ಯೋಗವಕಾಶಗಳನ್ನು ಸ್ಥಳೀಯರಿಗೆ ಒದಗಿಸುವ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ತಿಳಿಸಿದ್ದರು. ಆದಾಗ್ಯು ಏರ್ಪೋರ್ಟ್ಗೆ ಸಂಬಂಧಿಸಿದ ಯಾವುದೇ ಹುದ್ದೆಗಳ ಭರ್ತಿಕೆಲಸ ಇನ್ನೂ ಆರಂಭವಾಗಿಲ್ಲ. ಸದ್ಯ ಸಿಕ್ಕಿರುವ ಮೂಲಗಳ ಪ್ರಕಾರ, karnataka state infrastructure development corporation ನ ಸಿಬ್ಬಂದಿ ಏರ್ಪೋರ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಡಿಜಿಸಿಎ (directorate general of civil aviation) ನಡಿಯಲ್ಲಿ ಆಯ್ಕೆಯಾಗಿರುವ ಸಿಬ್ಬಂದಿಗೆ ತರಭೇತಿ ನೀಡಲಾಗ್ತಿದೆ. ಇದರ ಹೊರತಾಗಿ ಹೌಸ್ ಕೀಪಿಂಗ್ ವಿಭಾಗದಲ್ಲಿಯು ನೇಮಕಾತಿ ಆರಂಭಗೊಂಡಿಲ್ಲ.
ಇದಿಷ್ಟರ ಹೊರತಾಗಿ ಯಾವುದೇ ನೇಮಕಾತಿ ಆರಂಭಗೊಂಡಿಲ್ಲ. ಈ ಸಂಬಂಧ ಸದ್ಯದಲ್ಲಿಯೇ ಅಧಿಕಾರಿಗಳು ಕೂಡ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಇದರ ನಡುವೆ ಕೆಲವು ಹೊರಗುತ್ತಿಗೆ ಸಂಸ್ಥೆಗಳು ಹಾಗು ಖಾಸಗಿ ವ್ಯಕ್ತಿಗಳು ವಿಮಾನ ನಿಲ್ಧಾಣದ ನಿರ್ವಹಣೆ ವಿಭಾಗದಲ್ಲಿ ಉದ್ಯೋಗವಕಾಶ ಕೊಡಿಸುವ ಭರವಸೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ಹೆಸರು ನೋಂದಣಿಗೆ ಸಾವಿರಗಟ್ಟಲೇ ಹಣ ಸಂಗ್ರಹಿಸುತ್ತಿರುವುದಾಗಿ ದೂರುಗಳು ಕೇಳಿಬರುತ್ತಿವೆ. ಆಕಾಂಕ್ಷಿಗಳು ಇಂತಹ ವಿಚಾರಗಳನ್ನು ನಂಬದೇ ಇರುವುದು ಕ್ಷೇಮ.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಶಿವಮೊಗ್ಗ ವಿಮಾನ ನಿಲ್ದಾಣ ಹೇಗೆ ಸಿದ್ಧವಾಗಿದೆ ನೋಡಿ
ಇನ್ನಷ್ಟು ಸುದ್ದಿಗಳಿಗಾಗಿ : https://malenadutoday.com/
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
