ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇನ್ನೊಂದು ದೊಡ್ಡ ಅವಕಾಶ

ಬೆಂಗಳೂರು :  ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿ ಪ್ರವೇಶಾತಿಯ ಅಧಿಸೂಚನೆಯನ್ನು ಮುಂದುವರೆಸಿ, ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ. ಡೌನ್‍ಲೋಡ್ ಮಾಡಿಕೊಂಡ ಅರ್ಜಿಗಳ ಜೊತೆಯಲ್ಲಿ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನಾಂಕವಾಗಿದೆ.

ಇದನ್ನ ಸಹ ಓದಿ : ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ

ಎಂ.ಎ. – ಅರ್ಥಶಾಸ್ತ್ರ,  ಆಂಗ್ಲ,  ಹಿಂದಿ, ಇತಿಹಾಸ,  ಪತ್ರಿಕೋದ್ಯಮ ಮತ್ತು ಸಂವಹನ, ಕನ್ನಡ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಗ್ರಾಮೀಣಾಭಿವೃದ್ಧಿ ಅಧ್ಯಯನ, ಸಂಸ್ಕøತ, ಸಮಾಜಶಾಸ್ತ್ರ, ತೆಲುಗು, ಉರ್ದು, ಮಹಿಳಾ ಅಧ್ಯಯನ, ಪ್ರದರ್ಶನ ಕಲೆ, ನೃತ್ಯ, ಭರತನಾಟ್ಯ, ನಾಟಕ, ಸಂಗೀತ ಕೋರ್ಸುಗಳು. ಸ್ವ ಹಣಕಾಸು ಕೋರ್ಸುಗಳು, ಎಂ.ಎ.- ಮಾಧ್ಯಮ ಅಧ್ಯಯನ ಮತ್ತು ಸಾರ್ವಜನಿಕ ಸಂಪರ್ಕ ಮತ್ತು ಜಾಹೀರಾತು.

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ವಿಜ್ಞಾನ ನಿಕಾಯದಲ್ಲಿ ಎಂ.ಎಸ್ಸಿ ಅನ್ವಯಿಕ ತಳಿಶಾಸ್ತ್ರ, ಅನ್ವಯಿಕ ಭೂಗರ್ಭಶಾಸ್ತ್ರ, ಜೀವರಸಾಯನಶಾಸ್ತ್ರ, ಜೀವತಂತ್ರಜ್ಞಾನ, ರಸಾಯನಶಾಸ್ತ್ರ, ಗಣಕ ವಿಜ್ಞಾನ,  ವಿದ್ಯುನ್ಮಾನ ಮಾಧ್ಯಮ, ವಿದ್ಯುನ್ಮಾನ ವಿಜ್ಞಾನ,  ಪರಿಸರ ವಿಜ್ಞಾನ, ಪುಡ್ ಟೆಕ್ನಾಲಜಿ,  ಫ್ಯಾಷನ್ ಅಂಡ್ ಅಪೆರಲ್ ಡಿಸೈನ್, ಭೂಗೋಳಶಾಸ್ತ್ರ, ಯೋಗ ವಿಜ್ಞಾನ, ಜೀವ ವಿಜ್ಞಾನ,  ಗಣಿತ ಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ,  ಭೌತಶಾಸ್ತ್ರ, ಮನ:ಶಾಸ್ತ್ರ, ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, (ಎಂ.ಎಲ್.ಐ.ಎಸ್.ಸಿ (ಮೊದಲ ಎರಡು  ಸೆಮಿಸ್ಟರ್‍ಗಳನ್ನು ಪೂರೈಸ ಬಯಸಿದಲ್ಲಿ ಸ್ನಾತಕ ಪದವಿಯೊಂದಿಗೆ ನಿರ್ಗಮಿಸಬಹುದು).

ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

 ಸ್ವ ಹಣಕಾಸು ಕೋರ್ಸುಗಳು, ಎಂ.ಎಸ್ಸಿ.-ಫಿಲ್ಮ್ ಮೇಕಿಂಗ್, ವಿಧಿ ವಿಜ್ಞಾನ, ಗ್ರಾಫಿಕ್ಸ್ ಮತ್ತು ಅನಿಮೇಷನ್, ನೈಸರ್ಗಿಕ ವಿಪತ್ತು ನಿರ್ವಹಣೆ, ಘನತ್ಯಾಜ್ಯನಿರ್ವಹಣೆ,ಭೌಗೋಳಿಕ ಮಾಹಿತಿ ವಿಜ್ಞಾನ, ಅಣುಜೀವ ವಿಜ್ಞಾನ ಮತ್ತು ಮನ:ಶಾಸ್ತ್ರ ಸಮಾಲೋಚನೆ, ಎಂ.ಕಾಂ (ಎಫ್.ಎ.), ಎಂ.ಕಾಂ (ಐ.ಬಿ.) ಮತ್ತು ಎಂ.ಟಿ.ಟಿ.ಎಂ. ವಾಣಿಜ್ಯ ನಿಕಾಯದಲ್ಲಿ  ಎಂ.ಕಾಂ. ಹಾಗೂ ಶಿಕ್ಷಣ  ನಿಕಾಯದಲ್ಲಿ ಎಂ.ಎಡ್. ಕೋರ್ಸುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮೊದಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಹಿಂದಿನ ಅಧಿಸೂಚನೆಗೆ ವಿರುದ್ದವಾಗಿ  ಈಗಾಗಲೇ ಅರ್ಜಿ ಸಲ್ಲಿಸಿದ ಮತ್ತು ಕೌನ್ಸೆಲಿಂಗ್‍ಗೆ ಹಾಜರಾಗದ / ಮೊದಲೇ ಸೀಟುಗಳನ್ನು  ನೀಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment