ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

Malenadu Today

ತೀರ್ಥಹಳ್ಳಿ ತಾಲೂಕಿನ ಸುಮಾರು 75 ಕೋಟಿ ರೂಪಾಯಿಗಳ ಎರಡು ಅಭಿವೃದ್ದಿ ಕಾಮಗಾರಿಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ತಿಳಿಸಿದ್ಧಾರೆ. 

ಗೃಹಸಚಿವ ಆರಗ ಜ್ಞಾನೇಂದ್ರ :  ರಾಜ್ಯ ಸರಕಾರದ ಮಹತ್ವಾಕಾಂಕ್ಷೆ,   ಗ್ರಾಮೀಣ ರಸ್ತೆ ಸಂಪರ್ಕ, ಯೋಜನೆಯಡಿ ತೀರ್ಥಹಳ್ಳಿ ತಾಲೂಕಿನಲ್ಲಿ,  ಸುಮಾರು 75 ಕೋಟಿ ರೂಪಾಯಿಗಳ ವೆಚ್ಚದ ಎರಡು ಕಾಮಗಾರಿಗಳಿಗೆ, ಇಂದು ನಡೆದ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ. ಈ ಕುರಿತು  ಗೃಹ ಸಚಿವ ಹಾಗೂ  ತೀರ್ಥಹಳ್ಳಿ ಶಾಸಕರೂ ಆದ, ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. 

ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ತೂದೂರು ಮುಂಡುವಳ್ಳಿ ಸೇತುವೆ :ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ಸರಕಾರ ಸುಮಾರು 50 ಕೋಟಿ ರೂಪಾಯಿಗಳ ವೆಚ್ಚದ  ತೀರ್ಥಹಳ್ಳಿ ತಾಲೂಕಿನ ತೂದೂರು – ಮುಂಡುವಳ್ಳಿ ಗ್ರಾಮಗಳನ್ನು ಸಂಪರ್ಕಿಸುವ 49.87 ಕೋಟಿ ರೂಪಾಯಿಗಳ ಯೋಜನೆಗೆ, ಆಡಳಿತಾತ್ಮಕ ಮಂಜೂರಾತಿ ಪಡೆದು ಕೊಳ್ಳಲಾಗಿದೆ.

ತುಂಗಾನದಿಗೆ ಹೊಸ ಸೇತುವೆ :  ಅದೇ ರೀತಿಯಾಗಿ, ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ 25.65 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಕಾರಣಗಿರಿ ಬಪ್ಪನ ಮನೆ ಸಂಪರ್ಕ ರಸ್ತೆಯ ಬಿಲ್ಸಾಗರ ಸೇತುವೆ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು, ಕಾರಣಗಿರಿ – ಬಪ್ಪನಮನೆ ಸಂಪರ್ಕ ರಸ್ತೆಯ, ಶರಾವತಿ ಹಿನ್ನೀರಿನ, ಬಿಲ್ಸಾಗರ ದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ 24.36 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಶೀಘ್ರವಾಗಿ, ಯೋಜನೆ ಅನುಷ್ಠಾನಕ್ಕೆ, ಟೆಂಡರ್ ಕರಯಲಾಗುವುದು ಎಂದಿದ್ದಾರೆ.   

ತೂದೂರು- ಮುಂಡುವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಯೋಜನೆ ಕಾರ್ಯಗತ ಗೊಳಿಸಬೇಕೆಂದು,  ದಶಕಗಳಿಂದ ಬೇಡಿಕೆ ಇದ್ದರೂ, ಇದುವರೆಗೆ ಮಾನ್ಯತೆ ದೊರೆತಿರಲಿಲ್ಲ. ಈ ಎರಡೂ ಕಾಮಗಾರಿಗಳನ್ನು, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕಾರ್ಯಗತ ಗೊಳ್ಳಲಿದೆ. 

Share This Article