ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ

ಇದರ ನಂತರ ಈ ಡಿಸೆಂಬರ್​ನಲ್ಲಿ ಅಡಿಕೆ ರೇಟು ಕ್ವಿಂಟಾಲ್​ಗೆ 39-40 ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಹೀಗೆ ಕಳೆದ ಎರಡುವರೆ ಮೂರು ತಿಂಗಳಿನಲ್ಲಿ ಅಡಿಕೆ ಧರ ಸುಮಾರು 18 ಸಾವಿರದಷ್ಟು ಕುಸಿತ ಕಂಡಿದೆ.

ನಿಮಗಿದು ಗೊತ್ತಾ | ಜಸ್ಟ್ ಎರಡುವರೆ ತಿಂಗಳಿನಲ್ಲಿ ₹18 ಸಾವಿರ ಕುಸಿತ ಕಂಡಿದೆ ಅಡಿಕೆ ಧಾರಣೆ

ಅಡಿಕೆ ಧಾರಣೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುತ್ತಿದ್ದು, ಕಳೆದ ಸೆಪ್ಟೆಂಬರ್​ನಿಂದ ಇಲ್ಲಿವರೆಗೂ ಅಡಿಕೆ ರೇಟ್​ನಲ್ಲಿ ಗಮನಾರ್ಹ ವ್ಯತ್ಯಾಸವಾಗಿದೆ. ಅಂದಾಜಿನ ಪ್ರಕಾರ, ಇದೇ ವರ್ಷದ ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಅಡಿಕೆಯ ಧಾರಣೆ ಕ್ವಿಂಟಾಲ್​ಗೆ 58 ಸಾವಿರ ರೂಪಾಯಿಗಳಿಷ್ಟಿತ್ತು. ಆನಂತರ ಪ್ರತಿ ಕ್ವಿಂಟಾಲ್​ಗೆ 50 ಸಾವಿ ರೂಪಾಯಿಯ ಆಸುಪಾಸಿಗೆ ಬಂದು ನಿಂತಿತ್ತು. 

ಇದನ್ನು ಸಹ ಓದಿ : ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಇದರ ನಂತರ ಈ ಡಿಸೆಂಬರ್​ನಲ್ಲಿ ಅಡಿಕೆ ರೇಟು ಕ್ವಿಂಟಾಲ್​ಗೆ 39-40 ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಹೀಗೆ ಕಳೆದ ಎರಡುವರೆ ಮೂರು ತಿಂಗಳಿನಲ್ಲಿ ಅಡಿಕೆ ಧರ ಸುಮಾರು 18 ಸಾವಿರದಷ್ಟು ಕುಸಿತ ಕಂಡಿದೆ. 

ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

ಭೂತಾನ್ ಅಡಿಕೆ ಕಾರಣವಾಯ್ತಾ? 

ಇನ್ನೂ ಅಡಿಕೆ ಧರದ ಕುಸಿತಕ್ಕೆ ಕಾರಣ ಭೂತಾನ್​ ದೇಶದಿಂದ ಆಮದು ಸುಂಕದ ವಿನಾಯಿತಿ ಮೂಲಕ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಸಹ ಒಂದು ಕಾರಣ ಎನ್ನಲಾಗುತ್ತಿದೆ.  ಇನ್ನೂ ಕೆಲವರು, ಗುಟ್ಕಾ ಕಂಪನಿಗಳು ಅಗತ್ಯಕ್ಕೆ ತಕ್ಕಂತೆ ಅಡಿಕೆ ಖರೀದಿಸಿ ಆನಂತರ ಖರೀದಿ ನಿಲ್ಲಿಸುವುದು ಸಹ ಧರ ಕುಸಿತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. 

ಇದನ್ನು ಸಹ ಓದಿ : ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಈ ಸಂಬಂಧ ಹಲವು ಚರ್ಚೆಗಳು ಆರಂಭವಾಗಿದೆ.  ವರ್ಷ ವರ್ಷ ಮೂವತ್ತು ಸಾವಿರ ಕೋಟಿಗೂ ಅಧಿಕ ವಹಿವಾಟು ಆಗುವ  ಅಡಿಕೆಯಲ್ಲಿ ರಾಜ್ಯವೇ ಪ್ರಮುಖ  ಪಾತ್ರ ವಹಿಸುತ್ತದೆ. ಆದರೆ,  2014 ರಲ್ಲಿ ಕ್ವಿಂಟಾಲ್​ಗೆ ಒಂದು ಲಕ್ಷದ ಗಡಿ ದಾಟಿದ್ದ ಅಡಿಕೆ ಆನಂತರ 50 ಸಾವಿರ ರೂಪಾಯಿಯ ಆಸುಪಾಸಿನಲ್ಲಿತ್ತು. ಆದರೆ ಈಗ ಧರ ಕುಸಿತ ಕಾಣುತ್ತಿದೆ. ಇದು ಬೆಳೆಗಾರರಲ್ಲಿ ಆತಂಕವನ್ನು ಸಹ ಮೂಡಿಸುತ್ತಿದೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link