traffic fine ಬಾಕಿ ಕಟ್ಟಲು ಸರ್ಕಾರದಿಂದ 50 ಪರ್ಸೆಂಟ್ ಡಿಸ್ಕೌಂಟ್! ಯಾರಿಗೆ ಅವಕಾಶ!? ಎಲ್ಲಿವರೆಗೂ ಅವಕಾಶ
traffic fine : Govt to give 50% discount to pay traffic fine dues February 11 is the last date! Who all benefit from this!?
MALENADUTODAY. COM | SHIVAMOGGA NEWS | 3 FEBRUARY 2023
BENGALURU : ಫೈನ್ ಹಾಕಿ ಮನೆಗೆ ಫೋಟೋ ಸಮೇತ ಕಳಿಸುವ ಇ-ಚಲನ್ ವಿಷಯದಲ್ಲಿ ಸರ್ಕಾರ ಗುಡ್ ನ್ಯೂಸ್ವೊಂದನ್ನ ಕೊಟ್ಟಿದೆ. ಫೈನ್ ( traffic fine ) ಬಾಕಿ ಇದೆಯಲ್ಲಪ್ಪ ಕಟ್ಟೋದು ಹೇಗೆ ಅಂತಾ ತಲೆಕೆಡಿಸಿಕೊಳ್ಳುತ್ತಿದ್ದವರಿಗೆ ದಂಡದ ಶೇಕಡಾ 50 ರಷ್ಟು discount ನೀಡಿದೆ. ಹೌದು, ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್ (e challan) ಮೂಲಕ ವಿಧಿಸಿದ ದಂಡ ಪಾವತಿಗೆ ರಿಯಾಯಿತಿ ನೀಡಲಾಗಿದೆ ಫೆ.11ರೊಳಗೆ ಇ -ಚಲನ್ ನ ದಂಡನವನ್ನ ಭರ್ತಿ ಮಾಡಿದರೆ, ಶೇಕಡಾ 50 ರಷ್ಟು ರಿಯಾಯಿತಿ ಸಿಗಲಿದೆಯಂತೆ. ಈ ಸಂಬಂಧ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ಕಳೆದ ಜ.27ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯವನ್ನು ಇದೀಗ ಜಾರಿಗೆ ತರಲಾಗಿದೆ.
ರಾಜ್ಯಾದ್ಯಾಂತ ಫೆಬ್ರವರಿ 11ರೊಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ “ಒಂದು ಬಾರಿಯ ಕ್ರಮವಾಗಿ’ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಫೆಬ್ರವರಿ 2 ರಂದು ಆದೇಶ ಹೊರಡಿಸಿದೆ.
ಇದನ್ನ ಓದಿಒ: *ಇನ್ಸ್ಪೆಕ್ಟರ್ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್ಐ ಗಳ ವರ್ಗಾವಣೆ*
ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಾವಿರ ಕೋಟಿಗೂ ಹೆಚ್ಚು ದಂಡ ಬರಬೇಕಿದೆ, ಇದರಲ್ಲಿ ಶೇ 80 ರಷ್ಟು ಪ್ರಕರಣಗಳು ಬೆಂಗಳೂರು ಕಮಿಷನರೇಟ್ನಲ್ಲಿಯೇ ಬಾಕಿ ಇವೆ. ಈ ದಂಡ ವಸೂಲಿಗಾಗಿ ಶೇ.50ರಷ್ಟು ರಿಯಾಯಿತಿ ನೀಡುವ ಸಂಬಂಧ ಸಾರಿಗೆ ಆಯುಕ್ತರು ಜನವರಿ 30 ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.
*Shivamogga news : ಕಾಲೇಜು ಕ್ಯಾಂಪಸ್ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com