ಕೊಲ್ಲೂರಿನಿಂದ ವಾಪಸ್​ ಆಗ್ತಿದ್ದ ವೇಳೆ, ಗವಟೂರು ಬಳಿ ರಸ್ತೆ ಬದಿಗೆ ಉರುಳಿದ ದಾವಣೆಗೆರೆ ಮೂಲದವರ ಕಾರು

Malenadu Today
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ ಪೇಟೆ ಸಮೀಪದ ಗವಟೂರು ಬಳಿ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದದ ಕಾರುರಸ್ತೆ ಬದಿಯಲ್ಲಿನ ತಗ್ಗಿಗೆ ಉರುಳಿದೆ. 
ಕೆಲಹೊತ್ತಿಗೆ ಮೊದಲು ಸಂಭವಿಸಿದ ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ಧಾರೆ. ದಾವಣಗೆರೆ ಮೂಲದವರು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಮುಗಿಸಿಕೊಂಡು ಬರುತ್ತಿದ್ದರು.
ತಮ್ಮ ಊರಿಗೆ ಹೊರಟ್ಟಿದ್ದ ಪ್ರಯಾಣಿಕರ ಕಾರು ಗವಟೂರು ಹೊಳೆಯ ಬಳಿ ಸಿಗುವ ಕ್ರಾಸ್​ನಲ್ಲಿ ನಿಯಂತ್ರಣ ಸಿಗದೇ , ಪಕ್ಕದಲ್ಲಿದ್ದ ಹಳದೊಳಗೆ ನುಗ್ಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸ್ತಿದ್ಧಾರೆ. 
Share This Article