ಈದ್ ಮಿಲಾದ್ ಕಮಿಟಿ ವಿಚಾರಕ್ಕೆ ಕೊಲೆ! ಶಿವಮೊಗ್ಗದ ಇಬ್ಬರು ಸೇರಿದಂತೆ 9 ಮಂದಿ ವಿರುದ್ಧ ಎಫ್ಐಆರ್? ಶಿಕಾರಿಪುರದಲ್ಲಿ ನಿನ್ನೆ ನಡೆದಿದ್ದೇನು?

An FIR has been registered against nine people in connection with the murder in Shikaripura. ಶಿಕಾರಿಪುರದಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈದ್ ಮಿಲಾದ್ ಕಮಿಟಿ ವಿಚಾರಕ್ಕೆ ಕೊಲೆ!  ಶಿವಮೊಗ್ಗದ ಇಬ್ಬರು ಸೇರಿದಂತೆ 9 ಮಂದಿ ವಿರುದ್ಧ ಎಫ್ಐಆರ್? ಶಿಕಾರಿಪುರದಲ್ಲಿ ನಿನ್ನೆ ನಡೆದಿದ್ದೇನು?

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಪಟ್ಟಣದಲ್ಲಿ ನಿನ್ನೆ ಜಾಫರ್ ಎಂಬಾತನ ಕೊಲೆಯಾಗಿತ್ತು. ಈ ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ಎಸ್​ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ಧಾರೆ. 

ನಡೆದಿದ್ದೇನು?  

ಈದ್ ಮಿಲಾದ್ ಆಚರಣೆ ಸಂಬಂಧ  ಶಿಕಾರಿಪುರ ಪಟ್ಟಣದಲ್ಲಿ ಸಮಿತಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಕೆಯು ಕಳೆದ ಭಾನುವಾರ ನಡೆದಿತ್ತು.ಈ ಪ್ರಕ್ರಿಯೆಯ ಬಗ್ಗೆ ಕೆಲವರು ಅಸಮಾಧಾನ ಹೊಂದಿದ್ದರು. ಇದೇ ವಿಚಾರದಲ್ಲಿ ನಿನ್ನೆ ಸೋಮವಾರ ಮತ್ತೆ ಪಟ್ಟಣದ  ಕೆಎಚ್‌ಬಿ ಬಡಾವಣೆಯ ಖಾಲಿ ನಿವೇಶನವೊಂದರಲ್ಲಿ ಗುಂಪುಗೂಡಿ ಮಾತುಕತೆ ನಡೆಸ್ತಿದ್ದರು. ಈ ವೇಳೆ ಪರಸ್ಪರ  ಮಾತಿನ ಚಕಮಕಿಯಾಗಿ, ಗಲಾಟೆಯಾಗಿದೆ. ಇದೇ ಸಂದರ್ಭದಲ್ಲಿ , ಜನ್ನತ್‌ಗಲ್ಲಿಯ ನಿವಾಸಿ ಜಾಫರ್‌ (32) ರನ್ನ ಚಾಕುವಿನಿಂದ ಇರಿಯಲಾಗಿದೆ. 

ಆಯ್ಕೆಯಾದ ಸಮಿತಿ ಸಂಬಂಧ ಮಾತುಕತೆ ನಡೆಯುವಾಗ ಶಿವಮೊಗ್ಗದ ಸದ್ದು ರೋಷನ್​, ಶಿಕಾರಿಪುರದ ಶಹಿಬುಲ್ಲಾ ಸೇರಿದಂತೆ ಗುಂಪೊಂದು ಜಾಫರ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡ ಪುರಸಭೆ ಸದಸ್ಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಇದೇ ವಿಚಾರದಲ್ಲಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಈ ಬಗ್ಗೆ ನಿನ್ನೆ ಸ್ಥಳಕ್ಕೆ ಭೇಟಿಕೊಟ್ಟು ಸ್ಥಳೀಯವಾಗಿ ಮಾಹಿತಿ ನೀಡಿರುವ ಎಸ್​ಪಿ ಮಿಥುನ್ ಕುಮಾರ್, ಸಭೆಯಲ್ಲಿ ಪಾಲ್ಗೊಂಡವರೆಲ್ಲಾ ಪರಿಚಿತರೇ ಆಗಿದ್ದರು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಗೊತ್ತಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದಿದ್ಧಾರೆ.  

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು