ನೀರು ಕುಡಿಯಲು ಬಂದ ಬೋನಿಗೆ ಬಿದ್ದ ಚಿರತೆ ! ಶಿವಮೊಗ್ಗದಲ್ಲಿ ಹೆಚ್ಚಾದ ಹಾವಳಿ

Leopard falls into cage to drink water Leopard menace on the rise in Shivamogga

ನೀರು ಕುಡಿಯಲು ಬಂದ ಬೋನಿಗೆ ಬಿದ್ದ ಚಿರತೆ ! ಶಿವಮೊಗ್ಗದಲ್ಲಿ ಹೆಚ್ಚಾದ ಹಾವಳಿ
Leopard falls into cage to drink water

Shivamogga    Apr 3, 2024  ಶಿವಮೊಗ್ಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಇತ್ತೀಚೆಗೆ ನವುಲೆ ಸಮೀಪವೂ ಚಿರತೆಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇನ್ನೊಂದೆಡೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು  ಮದಗ ಹಾರನಹಳ್ಳಿ ಬಳಿ ಚಿರತೆಯೊಂದು ಸೆರೆಯಾಗಿದೆ. 

ಇಲ್ಲಿನ ಅಡಿಕೆ ತೋಟವೊಂದರ ಚಿರತೆ ಕಾಣಿಸಿಕೊಂಡಿದ್ದರ ಬಗ್ಗೆ ವರದಿಯಾಗಿತ್ತು. ಹಾಗಾಗಿ ಕ್ರಮ ಕೈಗೊಂಡಿದ್ದ ಅರಣ್ಯ ಇಲಾಖೆ ಚಿರತೆಗಾಗಿ ಬೋನ್‌ ಇಟ್ಟಿದ್ದರು. ಇದೀಗ  ಅಡಿಕೆ ತೋಟದಲ್ಲಿ ನೀರು ಕುಡಿಯಲು ಬಂದಿದ್ದ ಚಿರತೆ ಬೋನಿಗೆ ಬಿದ್ದಿದೆ. ಈ ಭಾಗದಲ್ಲಿ ಚಿರತೆ ಪದೇಪದೆ ಕಾಣಿಸಿಕೊಂಡಿದ್ದರಿಂದ ಜನರು ಆತಂಕಗೊಂಡಿದ್ದರು.