ಶಿಕಾರಿಪುರ ತಾಲ್ಲೂಕು ಕಲ್ಮನೆಯಲ್ಲಿ ನಡೆದ ಹೋರಿಹಬ್ಬದಲ್ಲಿ ದಾವಣಗರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಯುವಕ ಸಾವು!

A young man of Nyamati Taluk of Davangare district died in Horihabba held in Shikaripura Taluk Kalmane!

ಶಿಕಾರಿಪುರ ತಾಲ್ಲೂಕು ಕಲ್ಮನೆಯಲ್ಲಿ ನಡೆದ ಹೋರಿಹಬ್ಬದಲ್ಲಿ ದಾವಣಗರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಯುವಕ ಸಾವು!

Shivamogga Feb 12, 2024 |  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ನಲ್ಲಿ ಯವಕನೊಬ್ಬ ಹೋರಿಹಬ್ಬ ದಲ್ಲಿ ಸಾವನ್ನಪ್ಪಿದ್ದಾರೆ. ಈತನ ಮೂಲತಃ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಹೊಸಮಳಲಿ ಗ್ರಾಮದ ನಿವಾಸಿಯಾಗಿದ್ಧಾನೆ. ಹೆಸರು ಪುನೀತ್ ಆಚಾರ್, ವಯಸ್ಸು 19 ಎಂದು ಗೊತ್ತಾಗಿದೆ. ಈತ ಐಟಿಐ ವಿದ್ಯಾರ್ಥಿಯಾಗಿದ್ದು ಹೋರಿಹಬ್ಬ ನೋಡಲು ಅಂತ ಬಂದಿದ್ದ ಎಂದು ಗೊತ್ತಾಗಿದೆ. 

ಶಿಕಾರಿಪುರ ತಾಲ್ಲೂಕು ಕಲ್ಮನೆಯಲ್ಲಿ ಹೋರಿಹಬ್ಬ ಆಯೋಜಿಸಲಾಗಿತ್ತು. ತುಂಬಾ ಜೋರಾಗಿ ನಡೆಯುವ ಹೋರಿಹಬ್ಬ ನೋಡಲು ಸಾವಿರಾರು ಮಂದಿ ಬರುತ್ತಾರೆ. ಅದರಂತೆ ಪುನೀತ್ ಕೂಡ ಬಂದಿದ್ದ. ಆಕಸ್ಮಿಕವಾಗಿ ಬೆದರಿದ ಹೋರಿ ಓಡುವ ಸಂದರ್ಭದಲ್ಲಿ ಪುನೀತ್​ಗೆ ತಿವಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್​ರನ್ನ ಸ್ಥಳೀಯರು ಆ್ಯಂಬುಲೆನ್ಸ್​ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಪುನೀತ್ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.