SHIVAMOGGA NEWS / Malenadu today/ Nov 27, 2023 | Malenadutoday.com
SHIVAMOGGA | ನಿಮಗೆ ಗೊತ್ತಿಲ್ಲದೇ ನೀವು ಕಟ್ಟಿದ್ದ ಚೀಟಿ ಹಣವನ್ನ ಡ್ರಾ ಮಾಡಿಕೊಂಡು ಉಡಾಯಿಸಿದರೇ ನಿಮ್ಮ ಪರಿಸ್ಥಿತಿ ಏನಾಗಬೇಡ…ಹಾಗೆ ಸುಮ್ಮನೇ ಯೋಚಿಸಿ ನೋಡಿ! ಜೊತೆಯಲ್ಲಿಯೇ ಸ್ವಲ್ಪ ಎಚ್ಚರವಹಿಸಿ.. ಏಕೆಂದರೆ ಇಂತಹದ್ದೊಂದು ಘಟನೆ ನಡೆದಿದೆ.
ಶಿಕಾರಿಪುರ ದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಓರ್ವ ಮಹಿಳೆ ಮತ್ತು ಓರ್ವ ಪುರುಷನ ವಿರುದ್ಧ ಆರೋಪ ಮಾಡಲಾಗಿದೆ. ಘಟನೆ ಸಂಬಂಧ ಶಿಕಾರಿಪುರ ಟೌನ್ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ದಾಖಲಾಗಿದೆ.
READ : ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ! ಕಾರಣವೇನು?
ಏನಿದು ಕೇಸ್
ಸಂತ್ರಸ್ತರು ಮನೆ ಕಟ್ಟಲು ಜಾಗ ತೆಗೆದುಕೊಂಡಿದ್ದು, ಅದರ ಖರೀದಿಗೆ ಆರೋಪಿಗಳೇ ಸಾಲ ಕೊಡಿಸಿದ್ದರಂತೆ.. ಈ ನಂಬಿಕೆ ಮೇಲೆ ಮನೆ ಕಟ್ಟಲು ಸಾಲ ಕೊಡಿಸುವಂತೆ ಸಂತ್ರಸ್ತರು ಕೋರಿದ್ದಾರೆ. ಇದಕ್ಕೆ ಒಪ್ಪಿದ ಆರೋಪಿಗಳು ಚಿಟ್ಸ್ ಒಂದರಲ್ಲಿ ಸದಸ್ಯರನ್ನಾಗಿ ಮಾಡಿಸಿ ಸಂತ್ರಸ್ತರಿಂದ ಹಣ ಹೂಡಿಕೆ ಮಾಡಿಸಿದ್ದಾರೆ.
ಬಳಿಕ ಸಂತ್ರಸ್ತನಿಗೆ ಸಾಲ ಸಿಗುತ್ತದೆ. ಆಸ್ತಿಪತ್ರ ದೀಡ್ ಮಾಡಿಸಬೇಕು ಎಂದು ಹೇಳಿ ಚಿಟ್ಸ್ ಪಂಡ್ನ ಹೆಸರಿಗೆ ಸಂತ್ರಸ್ತರ ಆಸ್ತಿಯನ್ನ ದೀಡ್ ಮಾಡಿಸಿದ್ದಾರೆ. ಬಳಿಕ ಕೆಲವೇ ದಿನಗಳಲ್ಲಿ ಸಾಲ ಸ್ಯಾಂಕ್ಷನ್ ಆಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕಾಗಿ ಎರಡು ಜಾಮೀನುದಾರರ ಚೆಕ್ಗಳನ್ನು ಸಹ ಪಡೆದಿದ್ದರಂತೆ.
READ : ಸಂಬಂಧಿಗಳ ನಡುವೆಯೇ ತಂದಿಡುತ್ತೆ ಫೇಸ್ಬುಕ್ ಫೋಸ್ಟ್? ಇಲ್ಲಿದೆ ಓದಿ CEN ಕೇಸ್!
ಇಷ್ಟೆಲ್ಲಾ ಆದ ಮೇಲೆ ಕೇಳಿದರೆ ಸಾಲ ಸ್ಯಾಂಕ್ಷನ್ ಆಗಿಲ್ಲ ಎಂದಿದ್ದಾರೆ.ಈ ಬಗ್ಗೆ ಸ್ವತಃ ಸಂತ್ರಸ್ತರು ಚಿಟ್ಸ್ ಸಂಸ್ಥೆಗೆ ಹೋಗಿ ವಿಚಾರಿಸಿದ್ದಾರೆ. ಆಗ ಅಲ್ಲಿ ಇವರ ಅಕೌಂಟ್ಕ್ಕೆ ಚೀಟಿ ಹಣ ಸ್ಯಾಂಕ್ಷನ್ ಆಗಿರುವುದು ಗೊತ್ತಾಗಿದೆ. ತಕ್ಷಣವೇ ಬ್ಯಾಂಕ್ಗೆ ಹೋಗಿ ನೋಡಿದರೆ, ಅಲ್ಲಿ ಎರಡು ಅಕೌಂಟ್ಗಳಿಗೆ ನಿಫ್ಟ್ ಮೂಲಕ ಹಣ ಟ್ರಾನ್ಸಫರ್ ಆಗಿರುವುದು ಗೊತ್ತಾಗಿದೆ.
ಸಂತ್ರಸ್ತರಿಗೆ ಇಷ್ಟೆಲ್ಲಾ ಗೊತ್ತಿಲ್ಲದೇ ಹಣವೂ ವರ್ಗಾವಣೆಯಾಗಿದೆ. ತಾನು ಮೋಸ ಹೋಗಿರುವುದು ಗೊತ್ತಾಗಿ ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
