SHIVAMOGGA NEWS / Malenadu today/ Nov 26, 2023 | Malenadutoday.com
SHIVAMOGGA | ಆನ್ಲೈನ್ ಜಗತ್ತಿನಲ್ಲಿ ಯಾವುದು ಯಾವತ್ತು ಏನು ಆಪತ್ತು ತಂದಿಡುತ್ತದೆಯೋ ಹೇಳಲಾಗುವುದಿಲ್ಲ. ಹಾಗಾಗಿಯೇ ಸೋಶಿಯಲ್ ಮೀಡಿಯಾಗಳಲ್ಲಿ (social media) ನಿಮ್ಮ ಫ್ರೋಫೈಲ್ಗಳನ್ನು ಲಾಕ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ನಿಮ್ಮದೇ ಫೋಟೋಗಳನ್ನು ಕದ್ದು ನಿಮ್ಮ ಹೆಸರಿನಲ್ಲಿ ಅಕೌಂಟ್ ಕ್ರಿಯೆಟ್ ಮಾಡಿ ನಿಮ್ಮ ಬಗ್ಗೆಯೇ ಅವಹೇಳನ ಮಾಡುವ ಅಥವಾ ಅಶ್ಲೀಲವಾಗಿ ಚಿತ್ರಿಸುವ ಪ್ರಯತ್ನಗಳು ನಡೆಯುವ ಅಪಾಯವಿರುತ್ತದೆ.
ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣವೊಂದು ದಾಖಲಾಗಿದೆ . ಈ ಪ್ರಕರಣದಲ್ಲಿ ಸಂತ್ರಸ್ತರೊಬ್ಬರ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ವೊಂದನ್ನ ಕ್ರಿಯೆಟ್ ಮಾಡಿ, ಅವರ ಮಹಿಳಾ ಸಂಬಂಧಿಯ ಬಗ್ಗೆ ಅವಹೇಳನ ಮಾಡಲಾಗಿದೆ. ಫೇಸ್ಬುಕ್ ಸ್ಟೋರಿಯಲ್ಲಿ ಅವಹೇಳನ ಮಾಡಿದ ಬಗ್ಗೆ ಸಂತ್ರಸ್ತರೊಬ್ಬರು ದೂರು ಹೇಳಿಕೊಂಡಿದ್ದಾರೆ.
READ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರ ಪರಿಚಯ ಹೇಳಿಕೊಂಡು ವಂಚನೆ! ಸಿಕ್ಕಿಬಿದ್ದ ಆರೋಪಿ
ನಕಲಿ ಫೇಸ್ಬುಕ್ ಅಕೌಂಟ್ ಕ್ರಿಯೆಟ್ ಆದ ಬಗ್ಗೆ ಸಂತ್ರಸ್ತರಿಗೆ ಮಾಹಿತಿಯೇ ಇಲ್ಲ. ಅವರ ಹೆಸರು ಫೋಟೋಗಳನ್ನ ಬಳಸಿಕೊಂಡು ಇಂತಹದ್ದೊಂದು ಕೃತ್ಯವೆಸಗಲಾಗಿದೆ.ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ
