ಸುಡುವ ಮೈಗೆ ತಂಗಾಳಿಯ ಸಿಂಚನ! ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದ ಮೊದಲ ವರ್ಷಧಾರೆ! ಮಳೆ ಬಂತೋ ಎಂದು ಸಂಭ್ರಮ!

Shimoga district receives first rainfall of the year It's raining!

ಸುಡುವ ಮೈಗೆ ತಂಗಾಳಿಯ ಸಿಂಚನ! ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷದ ಮೊದಲ ವರ್ಷಧಾರೆ! ಮಳೆ ಬಂತೋ ಎಂದು ಸಂಭ್ರಮ!
Shimoga district receives first rainfall

Shivamogga    Apr 3, 2024  ಮಲೆನಾಡಿನಲ್ಲಿ ಬಿಸಿಲ ಝಳ ತಾಳಲಾಲ್ತಿಲ್ಲ. ಅಯ್ಯೋ ದೇವರೇ ಏನ್‌ ಸೆಕೆ ಎನ್ನುತ್ತಲೇ ಜನ ಮಳೆರಾಯ ಎಲ್ಲಿದ್ಯೋ ನೆರೆ ಬಂದರೂ ಪರವಾಗಿಲ್ಲ. ಸುರಿದು ಬಿಡು ಎಂದು ಪ್ರಾರ್ಥಿಸುತ್ತಿದ್ದಾರೆ. ಬಿಸಿಗಾಳಿಯ ನಡುವೆ, ತಣ್ಣನೇ ಗಾಳಿ ಬೀಸಿದ ಅನುಭವಕ್ಕೆ ಜನರು ಹಾತೊರೆಯುತ್ತಿದ್ದಾರೆ. ಮನುಷ್ಯ ಪ್ರಾರ್ಥನೆಗೆ ದೈವಕೃಫೆಯಾದಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಇಂದು ಮಳೆಯಾಗಿದೆ. 

rain in bhadravati

 

ವರ್ಷದ ಮೊದಲ ಮಳೆಯಾಗಿ ಸುರಿದ ವರ್ಷಧಾರೆ ಜನರಲ್ಲಿ ಹರ್ಷ ಮೂಡಿಸಿದೆ. ಸುಡುವ ಸೆಖೆಯಲ್ಲಿ ಮಳೆ ಬಂತೋ ಎಂದು ಕೂಗುತ್ತಾ ವರುಣಾಗಮನವನ್ನ ಸ್ವಾಗಿಸಿದ್ದಾರೆ. ಸ್ವಲ್ಪ ಹೊತ್ತು ಸುರಿದು ಹೋಗುವ ಮಳೆ ಮತ್ತಷ್ಟು ಸೆಕೆಯಾಗಿಸುತ್ತಾನೆ ಎಂಬುದು ಗೊತ್ತಿರುವ ವಿಚಾರವೇ. ಆದಾಗ್ಯು ಸುಡುವ ಮೈಗೆ ತಂಪರೆವ ವರ್ಷಧಾರೆ ಸ್ವಲ್ಪ ಹೊತ್ತಾದರೂ ಆಯ್ತಲ್ಲ ಎಂಬ ಖುಷಿ ಜನರಲ್ಲಿ ಮೂಡಿತ್ತು. 

rain in bhadravati

 

ಭದ್ರಾವತಿ ನಗರವೂ ಸೆರಿದಂತೆ ಕೆಲವಡೆ ಇವತ್ತು ಕೆಲಕಾಲ ಮಳೆಯಾಗಿದೆ. ಸುಮಾರು ಅರ್ಧಗಂಟೆ ಕಾಲ ಮಳೆಯಾಗಿದ್ದು, ಯುಗಾದಿ ಪೂರ್ವ ಮಳೆ ಶುಭಸೂಚಕ ಎಂದು ಸಹ ಜನರು ಮಾತನಾಡಿಕೊಳ್ತಿದ್ದಾರೆ.