ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದಿದ್ದೇನು? | ಹೊತ್ತಿಕೊಂಡು ಉರಿದ್ದೇಗೆ ಮೊಬೈಲ್‌ ಶಾಪ್

Shimoga Private Bus Stand What happened last night? | A mobile shop that carries and burns

ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದಿದ್ದೇನು? | ಹೊತ್ತಿಕೊಂಡು ಉರಿದ್ದೇಗೆ ಮೊಬೈಲ್‌ ಶಾಪ್
Shimoga Private Bus Stand

SHIVAMOGGA | MALENADUTODAY NEWS | Apr 30, 2024    ‌ 

ಶಿವಮೊಗ್ಗ ನಗರದ ಖಾಸಗಿ ಬಸ್‌ ನಿಲ್ದಾಣ ದಲ್ಲಿ ನಿನ್ನೆ ಅಗ್ನಿ ಆಕಸ್ಮಿಕ ಘಟನೆಯೊಂದು ಸಂಭವಿಸಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಖಾಸಗಿ ಬಸ್‌ ನಿಲ್ದಾಣದಲ್ಲಿರುವ ಮೊಬೈಲ್‌ ಶಾಪ್‌ ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೆಅಲ್ಲದೆ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿ, ಜ್ವಾಲಾಮುಖಿಯಂತೆ ಉರಿದಿದೆ. ಪರಿಣಾಮ ಅಂಗಡಿಯಲ್ಲಿದ್ದ ಯಾವೊಂದು ವಸ್ತುವು ಸಹ ಉಳಿದಿಲ್ಲ. ಪ್ರತಿಯೊಂದು ಸುಟ್ಟು ಭಸ್ಮವಾಗಿದೆ. 

ನಗರದ ಖಾಸಗಿ ಬಸ್‌ ನಿಲ್ದಾಣದ ಜನಸಂದಣಿ ಇರುವ ಪ್ರದೇಶವಾಗಿದ್ದು ತಡರಾತ್ರಿಯವರೆಗೂ ಬಸ್‌ಗಳು ಓಡಾಡುತ್ತವೆ. ಇದರ ನಡುವೆ ಅಂಗಡಿಯೊಂದು ಹೊತ್ತಿ ಧಗಧಗ ಉರಿಯುವರೆಗು ಅಲ್ಲಿದ್ದವರಿಗೆ ವಿಚಾರ ತಿಳಿದುಬರಲಿಲ್ಲ. ಇನ್ನೂ ಬೆಂಕಿಗೆ ಆಹುತಿಯಾದ ಅಂಗಡಿಯು ಮೊಬೈಲ್‌ ಶಾಪ್‌ ಆಗಿದ್ದು, ವಸೀಂ ಎಂಬವರಿಗೆ ಸೇರಿದ್ದು ಎನ್ನಲಾಗಿದೆ.‌ ಶಾರ್ಟ್‌ ಸರ್ಕಿಟ್‌ ಹೀಗೆ ಆಗಿರಬಹುದು ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ದೊಡ್ಡಪೇಟೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇವತ್ತಷ್ಟೆ ಹೊರಕ್ಕೆ ಬರಬೇಕಿದೆ.