ವಿದ್ಯುತ್​ ದರ ಹೆಚ್ಚಳಕ್ಕೆ ಹೆಚ್ಚಿದ ವಿರೋಧ! ಮೆಸ್ಕಾಂ ಕಚೇರಿಗೆ ಕಲ್ಲು ! ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Increased opposition to power tariff hike! Mescom office stoned! BJP workers protest

ವಿದ್ಯುತ್​ ದರ ಹೆಚ್ಚಳಕ್ಕೆ ಹೆಚ್ಚಿದ ವಿರೋಧ! ಮೆಸ್ಕಾಂ ಕಚೇರಿಗೆ ಕಲ್ಲು ! ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS

ಶಿವಮೊಗ್ಗ / ಮೆಸ್ಕಾಂ ವಿಭಾಗದ ಎದುರು ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ವಿದ್ಯುತ್ ದರ (Power Price Hike) ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು.  ಮೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಕಾರ್ಯಕರ್ತರು, ಸರ್ಕಾಋದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಈ ಮಧ್ಯೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ  ಮೇಲೆ ಕಲ್ಲು ತೂರಿದರು. ತೂರಿದ ಕಲ್ಲುಗಳು ಮೆಸ್ಕಾಂ ಕಚೇರಿಯ ಕಿಟಕಿ ಹಾಗು ನೋಟಿಸ್ ಬೋರ್ಡ್​ಗೆ ತಗುಲಿತು. ಇನ್ನೂ ಇದೇ ವೇಳೆ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು,

ಸರ್ಕಾರ ರಚನೆಯಾಗಿ  ತಿಂಗಳಲ್ಲಿಯೇ ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಲು ಕಾಂಗ್ರೆಸ್​ ಪಕ್ಷವೆ ಹೊಣೆ ಎಂದು ಆರೋಪಿಸಿದರು. ಈ ಮಧ್ಯೆ ಪ್ರತಿಭಟನೆಯಲ್ಲಿ ಮಾತನಾಡಿದ ಎಂಎಲ್​ಎ ಚನ್ನಬಸಪ್ಪರವರು, ಕಾಂಗ್ರೆಸ್​ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆಗಳಿಗೆ ತೊಂದರೆಯಾಗಲಿದೆ ಎಂದರು. ಅಲ್ಲದೆ, 200 ಯುನಿಟ್ ವಿದ್ಯುತ್ ಪ್ರೀ ಎಂದವರು ಕಂಡೀಷನ್​ಗಳನ್ನು ಹಾಕುತ್ತಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ಬಳಸದಂತೆ ಮಾಡುತ್ತಿದೆ ಎಂದು ಆರೋಪಿಸಿದರು. 

ಇನ್ನೊಂದೆಡೆ ಮೆಸ್ಕಾಂ ಕಚೇರಿ ಅಧಿಕಾರಿಗಳು , ಕಲ್ಲು ಹೊಡೆದ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು ಈ ಸಂಬಂಧ ದೂರು ನೀಡುವುದಾಗಿ ತಿಳಿಸಿದ್ದಾರೆ