KARNATAKA NEWS/ ONLINE / Malenadu today/ Jul 18, 2023 SHIVAMOGGA NEWS
ಶಿವಮೊಗ್ಗ ನಗರದಲ್ಲಿ ನಿನ್ನೆ ಬಸ್ಸ್ಟ್ಯಾಂಡ್ ಬಳಿಯಲ್ಲಿ ನಡೆಯಿತು ಎನ್ನಲಾದ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಿಂದ ಆರಂಭವಾದ ಕೇಸ್ ಕೊಪ್ಪ ಪೊಲೀಸ್ ಸ್ಟೇಷನ್ನಲ್ಲಿ ಅಂತ್ಯ ಕಂಡಿದೆ.
ಏನಿದು ಕೇಸ್?
ನಿನ್ನೆ ಶಿವಮೊಗ್ಗದ ಬಸ್ ಸ್ಟ್ಯಾಂಡ್ ಬಳಿಯಿಂದ ಯುವತಿಯೊಬ್ಬಳನ್ನ ಅಪಹರಿಸಲಾಗಿದೆ ಎಂಬ ಮಾತು ಸಖತ್ ಸುದ್ದಿಯಾಗಿ ಹರಿದಾಡಿತ್ತು. ಪೊಲೀಸರಿಗಿಂತಲೂ ಬೇಗ ಜನರ ನಡುವೆ ಹರಿದಾಡಿದ Kidnap case ಸುದ್ದಿ ಕುತೂಹಲ ಮೂಡಿಸಿತ್ತು. ವಿಚಾರ ತಿಳಿದು ದೊಡ್ಡಪೇಟೆ ಪೊಲೀಸರು ಸಿಸಿ ಕ್ಯಾಮರಾಗಳನ್ನು ಚೆಕ್ ಮಾಡಿ, ಅನುಮಾನಸ್ಪದವಾಗಿ ಕಂಡು ಬಂದ ಕಾರಿನ ಬೆನ್ನಟ್ಟಿ ಹೊರಟಿದ್ದರು.
ಬಸ್ಸ್ಟ್ಯಾಂಡ್ ಬಳಿ ನಡೆದಿದ್ದು?
ಹೀಗೊಂದು ಕಿಡ್ನ್ಯಾಪ್ ನಡೆಯುವಾಗ, ಯುವತಿಯ ತಾಯಿಯು ಅಲ್ಲಿಯೇ ಇದ್ದರು, ಯುವತಿ ಹಾಗೂ ಅವರ ತಾಯಿ ಯಾವುದೋ ಪೂಜೆಗೆಂದು ಪರಊರಿಗೆ ಹೊರಟಿದ್ದಾಗ, ಯುವತಿಯನ್ನ ಕಾರಿನಲ್ಲಿ ಅಪಹರಿಸಲಾಗಿತ್ತು. ಮತ್ತೆ ಕೆಲವರು ಇದು ಕಿಡ್ನ್ಯಾಪ್ ಕೇಸ್ ಇದ್ಧಾಗೆ ಇರಲಿಲ್ಲ. ಯುವತಿಯೇ ಕಾರನ್ನ ಹತ್ತಿ ಹೋದಾಗೆ ಇತ್ತು ಎಂದಿದ್ದರು.
ದೊಡ್ಡಪೇಟೆಯಲ್ಲಿ ಆಗುತ್ತಿತ್ತು ಕೇಸ್?
ಈ ಮಧ್ಯೆ ಯುವತಿಯ ಪೋಷಕರು ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಕದ ತಟ್ಟಿದ್ದರು. ಆಷ್ಟೊತ್ತಿಗೆ ದೊಡ್ಡಪೇಟೆಯ ಚೇಸಿಂಗ್ ಟೀಂ ಅನುಮಾನಸ್ಪದ ಕಾರನ್ನ ಬೆನ್ನಟ್ಟಿಕೊಂಡು ಚಿಕ್ಕಮಗಳೂರು ಗಡಿ ದಾಟಿತ್ತು. ಅಲ್ಲದೆ ಶಂಕಿತ ಕಾರು ಕೊಪ್ಪ ಪೊಲೀಸ್ ಸ್ಟೇಷನ್ ಕಚೇರಿಗೆ ತಲುಪಿತ್ತು. ಅಲ್ಲಿ ಅಸಲಿ ವಿಚಾರ ಬಹಿರಂಗವಾಗಿದೆ.
ಕೊಪ್ಪ ಪೊಲೀಸ್ ಸ್ಟೇಷನ್ ನಲ್ಲಿ?
ಅಸಲಿಗೆ ಗಾಜನೂರಿನ ಯುವಕ ಹಾಗೂ ಹೊಸಮನೆ ಯುವತಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಅಲ್ಲದೆ ರಿಜಿಸ್ಟರ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯು ಇದೆ. ಈ ಮಧ್ಯೆ ಯುವತಿ ಕುಟುಂಬಸ್ಥರು ಇದಕ್ಕೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಿನ್ನೆ ಈ ಕಿಡ್ನ್ಯಾಪ್ ಪ್ರಹಸನಕ್ಕೆ ಮುಂದಾಗಿದ್ದಾರೆ. ಅದು ದೊಡ್ಡ ವಿಷಯವಾಗುತ್ತಲೇ ಕೊಪ್ಪ ಸ್ಟೇಷನ್ನಲ್ಲಿ ಎಲ್ಲವನ್ನು ಹೇಳಿಕೊಂಡು, ಪರಿಸ್ಥಿತಿಯನ್ನು ಸರಿಪಡಿಸಲು ಮುಂದಾಗಿದ್ಧಾರೆ. ಅಲ್ಲದೆ ಯುವತಿ ತಾನು ಆತನೊಂದಿಗೆ ಹೋಗುವುದಾಗಿ ಹೇಳಿದ್ದರಿಂದ, ಪೊಲೀಸರು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ.
ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!
ಅಪ್ಪುರವರು 50 ಡಿಪ್ಸ್ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್ ಆಗ್ತಿದೆ ಪುನೀತ್ರ ಹಳೆಯ ವಿಡಿಯೋ!