ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

ನಟ ಕಿಚ್ಚ ಸುದೀಪ್​ರವರ ಪರವಾಗಿ ಶಿವಮೊಗ್ಗದಲ್ಲಿ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು , Kichcha Sudeep's fans staged a protest in Shivamogga on behalf of him.

ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS

ನಟ ಕಿಚ್ಚ ಸುದೀಪ್​ (kichaha sudeepa)  ಪರವಾಗಿ ಶಿವಮೊಗ್ಗ ನಗರದಲ್ಲಿ ಇವತ್ತು ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.. ಸುದೀಪ್​ರವರು ತಮ್ಮ ಬಳಿ ಅಡ್ವಾನ್ಸ್​ ಪಡೆದು ಕಾಲ್‌ಶೀಟ್‌ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಇತ್ತೀಚೆಗಷ್ಟೆ  ನಿರ್ಮಾಪಕ ಕುಮಾರ್‌ ಆರೋಪಿಸಿದ್ದರು. ಅಲ್ಲದೆ ಈ ಸಂಬಂಧ ಸಾಲು ಸಾಲು  ಸುದ್ದಿಗೋಷ್ಠಿ ನಡೆಸಿದ್ದರು. ಆನಂತರ  ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.

ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದ ಸುದೀಪ್​ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಅಲ್ಲದೆ ಕೋರ್ಟ್​ ಬಳಿಯಲ್ಲಿ ಮಾತನಾಡಿದ್ದ ಸುದೀಪ್​, ನಾನು ತಪ್ಪು ಮಾಡಿಲ್ಲ. ಹಾಗೊಂದು ವೇಳೆ ಮಾಡಿದ್ದರೇ ಅದಕ್ಕೆ ಕೋರ್ಟ್​ ನಲ್ಲಿ ದಂಡ ಕಟ್ಟುತ್ತೇನೆ ಎಂದಿದ್ದರು. ಇದಕ್ಕೂ ಮೊದಲು ಭಾವುಕರಾಗಿ ಪತ್ರವೊಂದನ್ನ ಬರೆದಿದ್ದರು. ಈ ಎಲ್ಲಾ ಬೆಳವಣಿಗೆಳ ಬೆನ್ನಲ್ಲೆ ಇವತ್ತು ಸುದೀಪ್​ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಕೇಸರಿ ಶಾಲುಗಳ ಜೊತೆಯಲ್ಲಿ ಕಣ ಕಣದಲ್ಲಿಯು ಕಿಚ್ಚ ಎಂದು ಘೋಷಣೆ ಕೂಗಿದ ಅಭಿಮಾನಿಗಳು, ನಟನ ವಿರುದ್ಧವಾಗಿ ನಡೆಯುತ್ತಿರುವ ಅಪಪ್ರಚಾರವನ್ನು ನಿಲ್ಲಿಸುವಂತೆ ಎಚ್ಚರಿಸಿದ್ದಾರೆ. 


ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

 

ಮನವೂ ಮರೆಯದ ವ್ಯಕ್ತಿಯೆಂದರೆ ಅದು ಪುನೀತ್ ರಾಜಕುಮಾರ್! ಅಗಲಿದ ಆ ಪುಣ್ಯಾತ್ಮನ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿಯು ಆ ವಿಡಿಯೋ ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರೋದು ಇನ್ನೊಂದು ವಿಶೇಷ.. ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಪು ಬಾಸ್​ ರವರು 50 ಪುಶ್​ ಅಪ್ಸ್​ ಹೊಡೆದ ವಿಡಿಯೋ ಸಂಚಲನ ಮೂಡಿಸುತ್ತಿದೆ. ಗಾಯಕ ನವೀನ್ ಸಜ್ಜು ತಮ್ಮ ಇನ್​ಸ್ಟಾಗ್ರಾಂ (instagram) ಅಕೌಂಟ್​ನಲ್ಲಿ ಈ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದಾರೆ. ವಿಶ್ವವಿಖ್ಯಾತ ಜೋಗದ ಜಲಪಾತವನ್ನು ದೂರದಿಂದ ನೋಡುತ್ತಿದ್ದವರಿಗೆ, ಅದರ ಕಾರ್ಗಲ್ಲುಗಳನ್ನು ಪರಿಚಯ ಮಾಡಿಕೊಟ್ಟಿದ್ದು, ಮುಂಗಾರು ಮಳೆ ಸಿನಿಮಾ. ಆ ಸಿನಿಮಾದಿಂದ ಮುಂಗಾರು ಮಳೆ ಸ್ಪಾಟ್ ಅಂತಾನೇ ಫೇಮಸ್​ ಆದ ಜಾಗಕ್ಕೆ ತೆರಳಲು, ಜನರು ಮುಗಿಬೀಳಲು ಆರಂಭಿಸಿದರು. ಜೊತೆಯಲ್ಲಿಯೇ ಸಾಕಷ್ಟು ಅನಾಹುತಗಳು ಸಂಭವಿಸಿದವು. ತದನಂತರ ಆ ಜಾಗಕ್ಕೆ ಪ್ರವೇಶ ಬಹುತೇಕ ಬಂದ್ ಮಾಡಲಾಯ್ತು. ಸದ್ಯ ಪುನೀತ್ ರಾಜಕುಮಾರ್​ರವರು ಪುಶ್​ ಅಪ್ಸ್​ ಹೊಡೆದಿದ್ದು ಈ ಭಾಗದಲ್ಲಿರುವ ದೊಡ್ಡಬಂಡೆಯ ಮೇಲೆ , ಯಾವ ಸಮಯದಲ್ಲಿ ಅಪ್ಪುರವರು ಈ ರೀತಿಯಲ್ಲು ಕಲ್ಲಿನ ಮೇಲೆ ಪುಶ್​ಅಪ್ಸ್​ ಹೊಡೆದಿದ್ದರೋ ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ಇದೀಗ ನವೀನ್ ಸಜ್ಜುರವರ ಪೋಸ್ಟ್​ ನಿಂದ ವೈರಲ್ ಆಗಿದೆ.ವಿಡಿಯೋದಲ್ಲಿ ಅಪ್ಪುರವರು ಐವತ್ತು ಪುಶ್​ಅಪ್ಸ್​ ಹೊಡೆದು, ಅಬ್ಬಾ50...ಎಂದು ಉದ್ಘರಿಸುತ್ತಾರೆ. ಆನಂತರ ಹಿಂಗಿಲ್ಲಾ , ಹಿಂಗಿದೆ ಈಸಿ… ಎಂದು ತಮ್ಮ ತೊಳನ್ನು ಮುಟ್ಟಿಕೊಂಡು ನಗುತ್ತಾರೆ. ಆ ನಗು   ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸಂತೋಷವಾಗಿದೆ.. ಅಪ್ಪುರವರ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ : ಅಪ್ಪುಬಾಸ್

 

 

kiccha sudeep about darshan, kiccha sudeep tweet about darshan, kiccha sudeep tweet about darshan birthday, kiccha sudeep aftab shivdasani movie, kiccha sudeep vs yash, kiccha sudeep on kannada, kiccha sudeep on kanthara movie, kiccha sudeep in hindi language, kiccha sudeep on kgf, kiccha sudeep in hindi, how can i contact, kiccha sudeep, kiccha sudeep salary, kiccha sudeep in bahubali, kiccha sudeep in japan, kiccha sudeep in baahubali, kiccha sudeep in tiger zinda hai, kiccha sudeep in australia, kiccha sudeep in hindi movie,