ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

Do you know where Appu hit 50 push-ups? Guess it! Puneeth's old video is going viral! , ದಿವಂಗತ ಪುನೀತ್ ರಾಜಕುಮಾರ್​ರವರು ಜೋಗ ಜಲಪಾತದ ಬಂಡೆ ಪುಶ್ ಅಪ್ಸ್​ ಹೊಡೆದಿರುವ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಗಾಯಕ ನವೀನ್ ಸಜ್ಜು ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಷೇರ್ ಮಾಡಿದ್ದಾರೆ.

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ!  ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS 

ಮನವೂ ಮರೆಯದ ವ್ಯಕ್ತಿಯೆಂದರೆ ಅದು ಪುನೀತ್ ರಾಜಕುಮಾರ್!  (puneeth rajkumar) ಅಗಲಿದ ಆ ಪುಣ್ಯಾತ್ಮನ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗುತ್ತಿದೆ. ಅದರಲ್ಲಿಯು ಆ ವಿಡಿಯೋ ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರೋದು ಇನ್ನೊಂದು ವಿಶೇಷ.. 

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಪು ಬಾಸ್​ ರವರು 50 ಪುಶ್​ ಅಪ್ಸ್​ ಹೊಡೆದ ವಿಡಿಯೋ ಸಂಚಲನ ಮೂಡಿಸುತ್ತಿದೆ. ಗಾಯಕ ನವೀನ್ ಸಜ್ಜು ತಮ್ಮ ಇನ್​ಸ್ಟಾಗ್ರಾಂ (instagram) ಅಕೌಂಟ್​ನಲ್ಲಿ ಈ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದಾರೆ. 

ವಿಶ್ವವಿಖ್ಯಾತ ಜೋಗದ ಜಲಪಾತವನ್ನು ದೂರದಿಂದ ನೋಡುತ್ತಿದ್ದವರಿಗೆ, ಅದರ ಕಾರ್ಗಲ್ಲುಗಳನ್ನು ಪರಿಚಯ ಮಾಡಿಕೊಟ್ಟಿದ್ದು, ಮುಂಗಾರು ಮಳೆ ಸಿನಿಮಾ. ಆ ಸಿನಿಮಾದಿಂದ ಮುಂಗಾರು ಮಳೆ ಸ್ಪಾಟ್ ಅಂತಾನೇ ಫೇಮಸ್​ ಆದ ಜಾಗಕ್ಕೆ ತೆರಳಲು, ಜನರು ಮುಗಿಬೀಳಲು ಆರಂಭಿಸಿದರು. ಜೊತೆಯಲ್ಲಿಯೇ ಸಾಕಷ್ಟು ಅನಾಹುತಗಳು ಸಂಭವಿಸಿದವು. ತದನಂತರ ಆ ಜಾಗಕ್ಕೆ ಪ್ರವೇಶ ಬಹುತೇಕ ಬಂದ್ ಮಾಡಲಾಯ್ತು. 

ಸದ್ಯ ಪುನೀತ್ ರಾಜಕುಮಾರ್​ರವರು ಪುಶ್​ ಅಪ್ಸ್​ ಹೊಡೆದಿದ್ದು ಈ ಭಾಗದಲ್ಲಿರುವ ದೊಡ್ಡಬಂಡೆಯ ಮೇಲೆ , ಯಾವ ಸಮಯದಲ್ಲಿ ಅಪ್ಪುರವರು ಈ ರೀತಿಯಲ್ಲು ಕಲ್ಲಿನ ಮೇಲೆ ಪುಶ್​ಅಪ್ಸ್​ ಹೊಡೆದಿದ್ದರೋ ಸ್ಪಷ್ಟವಾಗಿಲ್ಲ. ಆದರೆ ವಿಡಿಯೋ ಇದೀಗ ನವೀನ್ ಸಜ್ಜುರವರ ಪೋಸ್ಟ್​ ನಿಂದ ವೈರಲ್ ಆಗಿದೆ.

ವಿಡಿಯೋದಲ್ಲಿ ಅಪ್ಪುರವರು ಐವತ್ತು ಪುಶ್​ಅಪ್ಸ್​ ಹೊಡೆದು, ಅಬ್ಬಾ50...ಎಂದು ಉದ್ಘರಿಸುತ್ತಾರೆ. ಆನಂತರ ಹಿಂಗಿಲ್ಲಾ , ಹಿಂಗಿದೆ ಈಸಿ… ಎಂದು ತಮ್ಮ ತೊಳನ್ನು ಮುಟ್ಟಿಕೊಂಡು ನಗುತ್ತಾರೆ. ಆ ನಗು   ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಸಂತೋಷವಾಗಿದೆ.