ಹುಷಾರ್! ಮಹಿಳೆಗೆ ಕಿರುಕುಳ , 6 ಆರೋಪಿಗಳಿಗೆ 1 ವರ್ಷ ಜೈಲು, ₹1.14 ಲಕ್ಷ ದಂಡ!

ಹಂಚಿಕೊಳ್ಳಿ
WhatsApp Facebook X Telegram
Shimoga Court
Shimoga Court

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳಿಗೆ ನ್ಯಾಯಾಲಯ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ₹1,14,000 ದಂಡ ವಿಧಿಸಿದೆ. ಸದ್ಯ ಈ ಪ್ರಕರಣ ಮಹಿಳೆಯರಿಗೆ ಕಿರುಕುಳ ನೀಡುವಂತಹ ಕೃತ್ಯಗಳಿಗೆ ಎಚ್ಚರಿಕೆಯ ಪಾಠವಾಗಿ ಕಾಣುತ್ತಿದೆ. ಇನ್ನೂ ಈ ಕೇಸ್​ನಲ್ಲಿ ನೊಂದ ಮಹಿಳೆಗೆ ₹1,40,000 ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

6 ಆರೋಪಿಗಳಿಗೆ 1 ವರ್ಷ ಜೈಲು

ಜಿಲ್ಲೆಯ ಗ್ರಾಮವೊಂದರ ಮಹಿಳೆಗೆ ಯುವಕನೊಬ್ಬ ಎಂಬಾತ ಪ್ರೀತಿಸುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ ವೆಸಗಿದ್ದ ಬಳಿಕ ಆಕೆಯನ್ನ ಮದುವೆಯಾಗಿದ್ದ. ತದನಂತರ ಈತ ಮತ್ತು ಈತನ ಸಂಬಂಧಿಕರು, ನೊಂದ ಮಹಿಳೆಯನ್ನ ತಮ್ಮ ಮನೆಗೆ ಸೇರಿಸಿಕೊಳ್ಳದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಕೇಸ್​ ಕುಂಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಐಪಿಸಿ ಕಲಂ 417, 376(2)(j), 376(2)(n), 323, 504, 506, 354, 447 ಮತ್ತು 149ರ ಅನ್ವಯ ಪ್ರಕರಣ ದಾಖಲಾಗಿತ್ತು.

ಭಾರತ್ ಜೋಡೋ ಯಾತ್ರೆ 2.0

ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಐ ಹರೀಶ್ ಕೆ. ಪಾಟೀಲ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ವಾದ ಮಂಡಿಸಿದ್ದರು. ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1)ದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಇದೀಗ ನ್ಯಾಯಾಧೀಶ ನಿಂಗನಗೌಡ ಬಿ. ಪಾಟೀಲ್ ಅವರು 28-09-2026ರಂದು ತೀರ್ಪು ಪ್ರಕಟಿಸಿ, ಆರೋಪಿತರಿಗೆ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ ₹1,14,000 ದಂಡ ವಿಧಿಸಿದ್ದಾರೆ. ಇದರೊಂದಿಗೆ ನೊಂದ ಮಹಿಳೆಗೆ ₹1,40,000 ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor