ಆಗುಂಬೆ ಘಾಟಿಯಲ್ಲಿ 25 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಜಾಗರಣಾ ವೇದಿಕೆ ಸದಸ್ಯರು! ಸೌಹಾರ್ದತೆಗೆ ಸಾಕ್ಷಿಯಾದ ಘಟನೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 16, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ತಿರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ತಿರುವೊಂದರಲ್ಲಿ ಕಂದಕಕ್ಕೆ ಬಿದ್ದಿದ್ದ ವ್ಯಕ್ತಿಯನ್ನು ಹಿಂದು ಜಾಗರಣ ವೇದಿಕೆ ಸದಸ್ಯರು ರಕ್ಷಣೆ ಮಾಡಿದ ಘಟನೆ ಇಂದು ನಡೆದಿದೆ..

ಆಗುಂಬೆ ಘಾಟ್ ನ 7 ನೇ ತಿರುವಿನಲ್ಲಿ ಟ್ರ್ಯಾಕ್ಟರ್‌ ಟೋಯಿಂಗ್ ಮಾಡ್ತಿದ್ದರು.. 207 ಗಾಡಿ ಜೊತೆಯಲ್ಲಿ ಒಂದಿಷ್ಟು ಮಂದಿ ಟೋಯಿಂಗ್ ಮಾಡುತ್ತಾ ಡ್ರೈವರ್ ಗೆ ಡೈರಕ್ಷನ್ ಹೇಳುತ್ತಿದ್ದರು…ಈ ವೇಳೆ 207 ವಾಹನ ಏಕಾಯೇಕಿ ಹಿಂದಕ್ಕೆ ಬಂದಿದೆ‌..ಅದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪಾಷಾ ಎಂಬವರು, ತಮಗೆ ವಾಹನ ಡಿಕ್ಕಿಯಾಗುವುದನ್ನ ತಪ್ಪಿಸಲು ರಸ್ತೆ ಬದಿಗೆ ಸರಿದಿದ್ದಾರೆ..ಅಷ್ಟರಲ್ಲಿ ಆಯ ತಪ್ಪಿ ಆಗುಂಬೆ ಘಾಟಿಯಿಂದ ಕೆಳಗಡೆ ಬಿದ್ದಿದ್ದಾರೆ…ಸುಮಾರು  25 ಅಡಿ ಆಳಕ್ಕೆ ಬಿದ್ದಿದ್ದರಿಂದ,  ಪಾಷಾರವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದಿದ್ದೆ…

ಇನ್ನೂ ಇದೆ ಸಂದರ್ಭದಲ್ಲಿ ಆಗುಂಬೆಗೆ ವಾಪಸ್ ಆಗುತ್ತಿದ್ದ ಹಿಂದು ಜಾಗರಣೆ ವೇದಿಕೆಯ ಸದಸ್ಯರು ಮತ್ತು ಆಗುಂಬೆಯ ಸ್ಥಳೀಯರು ಮಹಮ್ಮದ್ ಪಾಷಾರನ್ನ ರಕ್ಣಣೆ ಮಾಡಿದ್ದಾರೆ…

ಬೆಡ್ ಶೀಟ್ ಹಾಗು ಹಗ್ಗವನ್ನ ಬಳಸಿ ಭಾಷಾರನ್ನು ಮೇಲಕ್ಕೆ ಎತ್ತಿ , ಆ್ಯಂಬುಲೆನ್ಸ್ ನಲ್ಲಿ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಿದ್ದಾರೆ‌.

ನಮ್ಮ ಹತ್ರ ಬೇಡ! ಕಿಚ್ಚ ಸುದೀಪ್​ ರವರ ಪರವಾಗಿ ಶಿವಮೊಗ್ಗದಲ್ಲಿ ಅಭಿಮಾನಿಗಳ ವಾರ್ನಿಂಗ್!

  

ಅಪ್ಪುರವರು 50 ಡಿಪ್ಸ್​ ಹೊಡೆದ ಈ ಜಾಗ ಯಾವುದು ಗೊತ್ತಾ? ಗೆಸ್ ಮಾಡಿ! ವೈರಲ್​ ಆಗ್ತಿದೆ ಪುನೀತ್​ರ ಹಳೆಯ ವಿಡಿಯೋ!

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor