ಅಡಿಕೆ ಸಾಗಿಸುತ್ತಿದ್ದ ಲಾರಿ ಡಿಕ್ಕಿ; ವೆಹಿಕಲ್ ಮೇಲೆ ಉರುಳಿದ ಕೋಣಂದೂರು ಬಸವಣ್ಣ ದೇವಾಲಯದ ಮಹಾದ್ವಾರ !ವಿಡಿಯೋ

ಹಂಚಿಕೊಳ್ಳಿ
WhatsApp Facebook X Telegram
Lorry Hits Basavanna Temple Entrance Gate at Konandur in Thirthahalli
Lorry Hits Basavanna Temple Entrance Gate at Konandur in Thirthahalli

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಪಟ್ಟಣದಲ್ಲಿ ಅಡಿಕೆ ಸಾಗಿಸುತ್ತಿದ್ದ ಲಾರಿಯೊಂದು ಬಸವಣ್ಣ ದೇವಾಲಯದ ಮಹಾದ್ವಾರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ದೇವಾಲಯದ ಮಹಾದ್ವಾರ ನೆಲಕ್ಕುರುಳಿದೆ.

ಕೋಣಂದೂರಿನ ಬಸವಣ್ಣ ಬೀದಿಯಲ್ಲಿರುವ ಬಸವಣ್ಣ ದೇವಾಲಯದ ಬಳಿ ಈ ಘಟನೆ ಸಂಭವಿಸಿದೆ. ಅಡಿಕೆ ಸಾಗಿಸುತ್ತಿದ್ದ ಲಾರಿ ದೇವಾಲಯದ ಮಹಾದ್ವಾರಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಾರ ಸಂಪೂರ್ಣವಾಗಿ ಕುಸಿದು ಬಿದ್ದಿದೆ.ಲಾರಿ ಚಾಲಕನ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor