ಹಾವಳಿ ಕೊಟ್ರೆ ಜೈಲು ಗ್ಯಾರಂಟಿ! ಶಿವಮೊಗ್ಗ ಸಿಟಿ ಮೇಲಿದೆ ಪೊಲೀಸರ ಡ್ರೋಣ್​ ಕಣ್ಣು! ಯಾಮಾರಿದ್ರೆ ಖತಂ! ಏನಿದು ಗೊತ್ತಾ ವ್ಯವಸ್ಥೆ

In Shivamogga city, the police department is conducting patrolling through drone cameras against those who misbehave in public places.

ಹಾವಳಿ ಕೊಟ್ರೆ ಜೈಲು  ಗ್ಯಾರಂಟಿ! ಶಿವಮೊಗ್ಗ ಸಿಟಿ ಮೇಲಿದೆ ಪೊಲೀಸರ ಡ್ರೋಣ್​ ಕಣ್ಣು! ಯಾಮಾರಿದ್ರೆ ಖತಂ! ಏನಿದು ಗೊತ್ತಾ ವ್ಯವಸ್ಥೆ

KARNATAKA NEWS/ ONLINE / Malenadu today/ Jun 8, 2023 SHIVAMOGGA NEWS

ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ, ಪುಂಡ ಪೋಕರಿಗಳ ಮೇಲೆ ಡ್ರೋಣ್​ ಕಣ್ಣನ್ನ ನೆಟ್ಟಿದೆ. ಈ ಹಿಂದೆ ಈ ಮಲೆನಾಡು ಟುಡೆ ಸುದ್ದಿ ಮಾಡಿತ್ತು. ಇದೀಗ ಪೊಲೀಸ್ ಇಲಾಖೆ ಡ್ರೋಣ್ ಮೂಲಕ ನೈಟ್ ಕಾರ್ಯಾಚರಣೆ ಕೈಗೊಳ್ಳುತ್ತಿದ್ದು, ಹೊತ್ತಲ್ಲದ ಹೊತ್ತಲ್ಲಿ, ಎಲ್ಲೆಂದರಲ್ಲಿ ನ್ಯೂಸೆನ್ಸ್​ ಕ್ರಿಯೆಟ್ ಮಾಡುವ ವ್ಯಕ್ತಿಗಳನ್ನ  ಡ್ರೋಣ್​ ತನ್ನ ಕ್ಯಾಮರಾದ ಮೂಲಕ ಸೆರೆಹಿಡಿದು ಪೊಲೀಸರಿಗೆ ನೀಡುತ್ತಿದೆ. ಕ್ಯಾಮರಾ ನೀಡುವ ಚಿತ್ರಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನ ಸೆರೆಹಿಡಿಯುತ್ತಿದ್ದಾರೆ. 

ಇದಕ್ಕೆ ಸಾಕ್ಷಿಎಂಬಂತೆ ನಿನ್ನೆ ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್​ನ ಪೊಲೀಸರು    ಡ್ರೋಣ್ ಕ್ಯಾಮರಾದ ಮೂಲಕ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದವರು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವೆರ್ತಿಸುತ್ತಿರುವವರ ಪತ್ತೆ ಹಚ್ಚಿ ಕೇಸ್ ದಾಖಲಿಸಿದೆ.  ಗೋಪಾಳ ಹಾಗೂ ಮಲ್ಲಿಗೇನಹಳ್ಳಿ ಸುತ್ತಮುತ್ತ ಈ ಕಾರ್ಯಾಚರಣೆ ನಡೆಸಿರುವ ಪೊಲೀಸರು, 12  ಪಿಟ್ಟಿ ಕೇಸ್​ , 15 ಐಎಂವಿ, 1 ಕೋಟ್ಪಾ ಕೇಸ್ ಸಹ ದಾಖಲಿಸಿದೆ. 

ಈ ಮೊದಲು ಪೊಲೀಸರು ಬೀಟ್​ ಮಾಡುತ್ತಿದ್ದರು, ಇದೀಗ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಪೊಲೀಸರು ಡ್ರೋಣ್ ಕ್ಯಾಮರಾದ ಮೂಲಕ ನಿರ್ಜನ ಪ್ರದೇಶಗಳನ್ನು ಕೂಡ ಸ್ಕ್ಯಾನ್ ಮಾಡುತ್ತಿದ್ದಾರೆ. ಗಾಂಜಾ ಸೇವನೆ, ದರೋಡೆಗೆ ಸ್ಕೆಚ್​, ಅನಾವಶ್ಯಕ ಕಿರಿಕ್​, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದನ್ನ ಲೈವ್ ಆಗಿ ಶೂಟ್ ಮಾಡುವ ಡ್ರೋಣ್ ಕ್ಯಾಮರಾಗಳು ಅಪರಾಧಕ್ಕೆ ಸಾಕ್ಷ್ಯ ಕೂಡ ಆಗುತ್ತಿವೆ. ಇನ್ನೂ ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರು, ಅವರು ಓಡುತ್ತಿರುವ ದಾರಿಯನ್ನ ಸಹ ಡ್ರೋಣ್ ಕ್ಯಾಮರಾಗಳು ನೀಡಬಲ್ಲದು. ಸದ್ಯ ಈ ಡ್ರೋಣ್​ ಕ್ಯಾಮರಾವನ್ನು ಪೊಲೀಸರು ತಮ್ಮ ಗಸ್ತು ವ್ಯವಸ್ಥೆಗೆ ಬಳಸಿಕೊಳ್ಳುತ್ತಿದ್ದು, ನಿರ್ದಿಷ್ಟವಲ್ಲದ ಸಮಯದಲ್ಲಿಯೇ ಕಾರ್ಯಾಚರಣೆ ನಡೆಸ್ತಿದ್ದಾರೆ. ಹೀಗಾಗಿ ಪುಂಡರು ಹಾವಳಿ ಮಾಡಿದರೆ, ಪೊಲೀಸರ ಅತಿಥಿಯಾಗುವುದು ಗ್ಯಾರಂಟಿಯಾಗಿದೆ. 


ಬಾರ್​ ಕ್ಯಾಶಿಯರ್​ ಹತ್ಯೆಗೆ ಸೊರಬದಲ್ಲಿ ಜನಾಕ್ರೋಶ! ಆರೋಪಿಗಳ ವಿರುದ್ಧ ಸಿಡಿದ ಯುವಕರು!

ಸೊರಬ/ ಆಯನೂರು ನವರತ್ನ ಬಾರ್ ಬಳಿಯಲ್ಲಿ ನಡೆದ ಕ್ಯಾಶಿಯರ್ ಕೊಲೆ ಪ್ರಕರಣವನ್ನು ಸೊರಬ ಜನತೆ ಗಂಭೀರವಾಗಿ ಪರಿಗಣಿಸಿದ್ದಾರೆ. ಬಾರ್​ಗಳಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವವರ ಮೇಲೆ ದುಷ್ಕರ್ಮಿಗಳು ಗೂಂಡಾಗಿರಿ ಪ್ರದರ್ಶನ ಮಾಡುತ್ತಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿನ್​ರ ಕೊಲೆ ಮಾಡಿದ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಸೊರಬದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ತಾಲ್ಲೂಕು ಕಚೇರಿ ಎದುರು ಇವತ್ತು, ಈ ಸಂಬಂಧ ಪ್ರತಿಭಟನೆ ನಡೆಸಿದ ನೂರಾರು ಮಂದಿ ಸಚಿನ್​ರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ , ಘೋಷಣೆಗಳನ್ನು ಕೂಗಿದರು. ಅಲ್ಲದೆ ಕೊಲೆ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ರು. ಈ ಸಂಬಂಧ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಮನವಿ ಕೊಟ್ಟ ಯುವಕರು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಿ ಪೊಲೀಸರು ಎಂದು ಒತ್ತಾಯಿಸಿದ್ರು. 


ರಾಂಗ್​ ಸೈಡ್​ನಲ್ಲಿ ವಾಹನ ಓಡಿಸಬೇಡಿ! ಭೀಕರ ಆಕ್ಸಿಡೆಂಟ್​ನ ಸಾಕ್ಷಿ ತೋರಿಸ್ತಿದೆ ನೋಡಿ ಸಿಸಿಟಿವಿ

ಶಿವಮೊಗ್ಗ ನಗರದ  ಪೆಸಿಟ್​ ಕಾಲೇಜು ಬಳಿಯಲ್ಲಿ ಸಂಭವಿಸಿದ ಅಪಘಾತದ ಸಿಸಿಟಿವಿ ದೃಶ್ಯವೊಂದು ಲಭ್ಯವಾಗಿದ್ದು, ರಾಂಗ್​ ಸೈಡ್​ನಲ್ಲಿ ವಾಹನ ಓಡಿಸುವುದು ಎಷ್ಟೊಂದು ಅಪಾಯಕಾರಿ ಎನ್ನುವುದಕ್ಕೆ ಸಾಕ್ಷಿಯಾಗಿದೆ. 

ನಡೆದಿದ್ದೇನು?

ಕಳೆದ ಜೂನ್ 5 ರಂದು ಈ ಘಟನೆ ಸಂಭವಿಸಿದ್ದು, ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಇನ್ನೋವ್ಹಾ ಕಾರಿಗೆ ಬೈಕ್​ವೊಂದು ಡಿಕ್ಕಿಯಾಗಿತ್ತು. ಘಟನೆಗೆ ಆ ಸಂದರ್ಭದಲ್ಲಿ ಕಾರಣ ಸ್ಪಷ್ಟವಾಗಿರಲಿಲ್ಲ. ಘಟನೆಯಲ್ಲಿ ಸಾಗರ ತಾಲ್ಲೂಕಿನ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಬೈಕ್​ ಜಖಂ ಆಗಿತ್ತಷ್ಟೆ ಅಲ್ಲದೆ ಕಾರಿಗೂ ಹಾನಿಯಾಗಿತ್ತು. ಇನ್ನೂ ಘಟನೆಯ ದೃಸ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್​ ಆಗಿದ್ದು, ಅದರಲ್ಲಿ  ರಾಂಗ್​ ಸೈಡ್​ನಲ್ಲಿ ಬಂದು ಬೈಕ್​ ಸವಾರ ಕಾರಿಗೆ ಡಿಕ್ಕಿ ಹೊಡೆದಿರವುದು ಕಾಣುತ್ತಿದೆ. ಸದ್ಯ ಈ ದೃಶ್ಯ ಮೊಬೈಲ್​ಗಳಲ್ಲಿ ಹರಿದಾಡುತ್ತಿದ್ದು, ಘಟನೆ ಸಂಬಂಧ ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 


ಶಿವಮೊಗ್ಗ-ಬೆಂಗಳೂರು ರೈಲ್ವೆ ಪ್ರಯಾಣದ ಸಮಯ ಕಡಿಮೆಯಾಗಬಹುದು! ಕಾರಣವೇನು ಗೊತ್ತಾ? ಸಾರ್ವಜನಿಕರಿಗೆ ರೈಲ್ವೆ ಇಲಾಖೆ ನೀಡಿದೆ ಎಚ್ಚರಿಕೆ!? ಏನದು? ವಿವರ ಓದಿ



ರೈಲ್ವೆ ಪ್ರಯಾಣಿಕರಿಗೆ , ಭಾರತೀಯ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಇದೇ ಜೂನ್ 17 ರಂದು  ಶಿವಮೊಗ್ಗಕ್ಕೆ  ಮೊದಲ  ವಿದ್ಯುತ್‌ ಚಾಲಿತ ರೈಲು ಆಗಮಿಸುತ್ತಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

 

ಬೀರೂರು ಮತ್ತು ಶಿವಮೊಗ್ಗ ಮಾರ್ಗವು ಆರು ತಿಂಗಳ ಹಿಂದೆಯೇ ವಿದ್ಯುದೀಕರಣಗೊಂಡಿತ್ತು. ಆದರೆ   ವಿಧಾನಸಭಾ ಚುನಾವಣೆ ಬಂದ ಹಿನ್ನೆಲೆ ವಿದ್ಯುತ್‌ ಚಾಲಿತ ಹೊಸ ರೈಲುಗಳ ಸಂಚಾರ ಆರಂಭವಾಗಿರಲಿಲ್ಲ. ಇದೀಗ  ಶಿವಮೊಗ್ಗಕ್ಕೆ ಮೂರು - ವಿದ್ಯುತ್‌ ಚಾಲಿತ ರೈಲುಗಳನ್ನು ಮಂಜೂರು ಮಾಡಲಾಗಿದೆ.ಈಗಾಗಲೇ ಸಂಚರಿಸುತ್ತಿರುವ 3 - ರೈಲುಗಳಿಗೆ ಡೀಸಲ್ ಇಂಜಿನ್ ಬದಲಾಗಿ ವಿದ್ಯುತ್‌ ಚಾಲಿತ - ಎಂಜಿನ್‌ಗಳನ್ನು ಅಳವಡಿಸಲಾಗುತ್ತಿದೆ. 

ಯಾವ್ಯಾವ ಟ್ರೈನ್​ 

ಸಾರ್ವಜನಿಕರಿಗೆ ಎಚ್ಚರಿಕೆ 

ಇನ್ನೂ ವಿದ್ಯುತ್ ಚಾಲಿತ ರೈಲುಗಳ ಸಂಚಾರಕ್ಕಾಗಿ ಬೀರೂರು-ಶಿವಮೊಗ್ಗ ರೈಲು ಮಾರ್ಗಕ್ಕೆ ಅಳವಡಿಸಿರುವ ವಿದ್ಯುತ್‌ ಮಾರ್ಗವನ್ನು ಈಗಾಗಲೇ ಚಾಲನೆಗೊಳಿಸಲಾಗಿದೆ. ವಿದ್ಯುತ್ ಚಾಲಿತ ರೈಲುಗಳ ಪರೀಕ್ಷಾರ್ಥ ಚಾಲನೆ ಸಹ ನಡೆಯುತ್ತಿದೆ. ವಿದ್ಯುತ್‌ ಮಾರ್ಗದಲ್ಲಿ 25 ಸಾವಿರ ಕೆ.ವಿ. ವಿದ್ಯುತ್‌ ಹರಿಯುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ರೈಲು ಮಾರ್ಗದ ಮೇಲೆ ಸಂಚರಿಸುವುದು, ರೈಲು ಮಾರ್ಗದ ಸಮೀಪದಲ್ಲಿ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವುದು, ತಂತಿ, ಹಸಿ ಕೋಲುಗಳನ್ನು ಎಸೆಯುವುದು, ವಿದ್ಯುತ್ ಕಂಬಗಳು, ಟಿಸಿಗಳ ಸಮೀಪ ಹೋಗುವುದು ಅಪಾಯಕಾರಿ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.