ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಆಪ್ ಪಕ್ಷದ ಅಭ್ಯರ್ಥಿಯಾಗಿ ಇಲ್ಲವೇ ಸ್ವತಂತ್ರವಾಗಿ ನಿವೃತ್ತ ಐಎಫ್ ಸ್ ಅಧಿಕಾರಿ ಐ.ಎಂ ನಾಗರಾಜ್ ಸ್ಪರ್ಧಿಸಿದರೆ...ಬದಲಾಗುವುದೇ ಕ್ಷೇತ್ರ ಚಿತ್ರಣ...ಇದು ಜೆಡಿಎಸ್ ಪಕ್ಷಕ್ಕೆ ವರವಾಗಬಲ್ಲದೇ?
Retired IFS officer IM Nagaraj is contesting from Shivamogga Rural reserved constituency as an AAP candidate or as an independent candidate.
ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಈ ಬಾರಿ ವಿಧಾನ ಸಭೆ ಚುನಾವಣೆ ಕದನ ಕುತುಹಲ ಕೆರಳಿಸಿದೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯ ನಾಯ್ಕ್ ಗೆಲ್ಲುತ್ತಾರೆ ಎಂಬ ವಾತಾವರಣ ಕ್ಷೇತ್ರದಲ್ಲಿ ದಿನದಿನಕ್ಕೂ ಲೀಡ್ ಪಡೆಯುತ್ತಿದೆ.ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಪಂಚರತ್ನ ರಥಯಾತ್ರೆ ಗ್ರಾಮೀಣ ಭಾಗದಲ್ಲಿ ಸಂಚರಿಸಿದ ಬೆನ್ನಲ್ಲೇ.ವಾತಾವರಣವೇ ಬದಲಾಗುತ್ತಿರುವುದು ಮತದಾರನ ನಾಡಿಮಿಡಿತದಿಂದ ಅರಿವಾಗುತ್ತದೆ.
ಹಲವರ ಕಣ್ಣು ಗೆಲುವಿನ ದಿಕ್ಕಿನೆಡೆಗೆ
ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳು ಇನ್ನು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಆದ್ರೆ ಜೆಡಿಎಸ್ ಹಲವು ತಿಂಗಳ ಮೊದಲೇ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್ ಎಂದು ಘೋಷಣೆ ಮಾಡಿದೆ. ಇದು ಶಾರದಪರ್ಯ ನಾಯ್ಕ್ ಗೆ ಕ್ಷೇತ್ರದಲ್ಲಿ ಜನಮನ ಗೆಲ್ಲಲು ಸಾಕಷ್ಟು ಸಮಯಾವಕಾಶ ಸಿಕ್ಕಂತಾಗಿದೆ.ಇನ್ನು ಕಾಂಗ್ರೇಸ್ ನಲ್ಲಿ ರವಿ ಕುಮಾರ್,ಪಲ್ಲವಿ,ನಾರಾಯಣಸ್ವಾಮಿ ಶ್ರೀನಿವಾಸ್ ಕರಿಯಣ್ಣ ಮತ್ತು ಭೀಮಪ್ಪ,ಹೊಳೆಬೆಳಗಲು ಗ್ರಾಮದ ಮಲ್ಲಪ್ಪ, ಸೇರಿದಂತೆ ಹಲವು ಮುಖಂಡರು ಕ್ಷೇತ್ರದಲ್ಲಿ ನಾವೇ ಮುಂದಿನ ಅಭ್ಯರ್ಥಿಗಳು ಎಂದು ಹೇಳಿಕೊಂಡು ಕ್ಷೇತ್ರ ಸಂಚಾರ ಮಾಡುತ್ತಿದ್ದರೂ ಟಿಕೇಟ್ ಯಾರಿಗೆ ಎಂದು ನಿಕ್ಕಿಯಾಗಿಲ್ಲ. ಇನ್ನು ಬಿಜೆಪಿಯಿಂದ ಅಶೋಕ್ ನಾಯ್ಕ್ ಡಿ.ರಾಜು ಹೊನ್ನವಿಲೆ, ಎಂಪಿ ಕುಮಾರಸ್ವಾಮಿ, ವೀರಭದ್ರಪ್ಪ ಪೂಜಾರಿ ಸೇರಿದಂತೆ ಹಲವು ಹೆಸರುಗಳು ಮುನ್ನಲೆಗೆ ಬಂದಿದೆಯಾದರೂ, ಟಿಕೇಟ್ ಯಾರಿಗೆ ಎಂಬುದು ಅಂತಿಮವಾಗಿಲ್ಲ.
ಆಪ್ನಿಂದ ಐಎಂನಾಗರಾಜ್
ದೇಶದಲ್ಲಿ ಅತಿ ಕಡಿಮೆ ಅವದಿಯಲ್ಲಿ ಹೆಚ್ಚು ಶಿಕ್ಷಿತರನ್ನ ಸೆಳೆದ ಪಕ್ಷ ಎಎಪಿ ಪಕ್ಷ, ನಿವೃತ್ತ ಅಧಿಕಾರಿಗಳು ಉನ್ನತ ವಿದ್ಯಾಭ್ಯಾಸ ಮಾಡಿದ ವ್ಯಕ್ತಿಗಳನ್ನ ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಪ್ ಪಕ್ಷದಿಂದ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ. ಆಪ್ ನಿಂದ ನಿವೃತ್ತ ಐ.ಎಫ್.ಎಸ್ ಅಧಿಕಾರಿ ಐಎಂ ನಾಗರಾಜ್ ಹೆಸರು ಮುನ್ನಲೆಗೆ ಬಂದಿದೆ. ಪಕ್ಷ ಟಿಕೇಟ್ ಕೊಟ್ಟರೂ ಕೊಡದಿದ್ದರೂ, ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಐ.ಎಂ ನಾಗರಾಜ್ ಹೇಳಿದ್ದಾರೆ. ಐ.ಎಂ ನಾಗರಾಜ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಒಂದಿಷ್ಟು ಮತಗಳು ಛಿದ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಐ.ಎಮ್ ನಾಗರಾಜ್ ಹೆಸರು ಶಿವಮೊಗ್ಗದ ಗ್ರಾಮಾಂತರ ಪ್ರದೇಶದಲ್ಲಿ ಸದಾ ಹಸಿರಾಗಿದೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿಯೇ ವಲಯ ಅರಣ್ಯಾಧಿಕಾರಿಯಾಗಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ, ಡಿಸಿಎಫ್ ಆಗಿ ಬಹುವರ್ಷಗಳ ಸೇವೆ ಸಲ್ಲಿಸಿದ್ದಾರೆ. ಅವರು ಅರಣ್ಯ ಪ್ರದೇಶದ ಜನರಿಗೆ ಮಾಡಿರುವ ಜನಪರ ಕೆಲಸಗಳನ್ನು ಜನರು ಈಗಲೂ ನೆನೆಯುತ್ತಾರೆ. ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳಿಗೆ ಇವರು ಸ್ಪಂಧಿಸಿದ್ದಾರೆ. ಕಾನೂನು ಮೀರಿ ಮಾನವೀಯತೆ ಚೌಕಟ್ಟಿನಲ್ಲಿ ಅವರಿಗೆ ಬೇಕಾದ ನೆರವನ್ನು ನೀಡಿದ್ದಾರೆ. ಈ ಸಮುದಾಯದ ಮತಗಳು ನಾಗರಾಜ್ ಗೆ ವರದಾನವಾಗಲಿದೆ.
ಕೇಜ್ರಿವಾಲ್ರಿಂದ ಕರೆ
ಶೆಟ್ಟಿಹಳ್ಳಿ ಹಾಗೂ ಪುರದಾಳು ಪಂಚಾಯಿತಿ ಗ್ರಾಮದ ಜನರು ನಾಗರಾಜ್ ರನ್ನು ಎಂದಿಗೂ ಮರೆಯುವುದಿಲ್ಲ. ಹೌದು ಕಳೆದ 32 ವರ್ಷಗಳ ಅರಣ್ಯ ಇಲಾಖೆಯ ಸುದೀರ್ಘ ಸೇವೆಯಲ್ಲಿ ನಾಗರಾಜ್ ವನ್ಯಜೀವಿ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಭಾಗದ ಜನರ ನಾಡಿಮಿಡಿತವನ್ನು ಅರಿತಿರುವ ನಾಗರಾಜ್ ಗೆ ಜನರು ಚುನಾವಣೆಲ್ಲಿ ಕೈಹಿಡಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಕಾಂಗ್ರೇಸ್ ನಿಂದ ಬಣಜಾರ ಸಮುದಾಯ ಹೊರತು ಪಡಿಸಿ ಬೇರೆ ಮೀಸಲು ಅಭ್ಯರ್ಥಿಗೆ ಟಿಕೇಟ್ ನೀಡಿದರೆ, ಲಿಂಗಾಯಿತ ಮತಗಳು ಬಿಜೆಪಿ ಇಲ್ಲವೇ ಜೆಡಿಎಸ್ ಪಾಲಾಗುತ್ತದೆ. ಇಂತಹ ಮತಗಳು ನನಗೂ ಕೂಡವರವಾಗಲಿದೆ ಎಂಬ ಲೆಕ್ಕಚಾರ ನಾಗರಾಜ್ ರದ್ದಾಗಿದೆ. ಐಮ್ ನಾಗರಾಜ್ ರವರಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಖುದ್ದು ಕೆರೆ ಮಾಡಿ ಎಎಪಿ ಪಕ್ಷಕ್ಕೆ ಆಹ್ವಾನ ಮಾಡಿ ಇಲ್ಲಿ ತಮ್ಮ ಜನಪರ ಸೇವೆಯನ್ನು ಮುಂದುವರೆಸಿ ಎಂದು ಹೇಳಿದ್ದಾರೆ.. ಮೂಲತಃ ಶಿವಮೊಗ್ಗ ಗ್ರಾಮಾಂತರ ಭಾಗದವರಾಗಿರುವ ನಾಗರಾಜ್ ಜನಿಸಿದ್ದು ಅಯನೂರು ಗ್ರಾಮದಲ್ಲಿ. ತಮ್ಮ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣವನ್ನು ಅಯನೂರು ಗ್ರಾಮದಲ್ಲಿ ಪೂರೈಸಿ ಕಾಲೇಜು ಹಾಗೂ ಉನ್ನತ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಗಿಸಿದ್ದಾರೆ..ಶಿವಮೊಗ್ಗ ಅರಣ್ಯ ವಲಯಲ್ಲಿ ಸುಮಾರು 18 ವರ್ಷಗಳ ಸೇವೆ ಮಾಡಿರುವ ಐಎಮ್ ನಾಗರಾಜ್ ಕೆಲಸ ನಿರ್ವಹಿಸುವ ವೇಳೆ ಅಯನೂರು ಸುತ್ತಮುತ್ತಲಿನ ಗ್ರಾಮ ಶೆಟ್ಟಿಹಳ್ಳಿ ಪುರದಾಳು ಗ್ರಾಮಪಂಚಾಯ್ತಿ ವ್ಯಾಪ್ರಿಯ ಗ್ರಾಮ, ಹೊಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಚಿರಪರಿಚಿತರು.
ಐಎಂ ಸ್ಪರ್ಧಿಸಿದರೆ ಜೆಡಿಎಸ್ ಗೆ ಲಾಭ
ಐ.ಎಂ ನಾಗರಾಜ್ ಸ್ಪರ್ಧಿಸಿದರೆ, ಬಿಜೆಪಿಯ ಮತಗಳನ್ನೇ ಪಡೆಯಲಿದ್ದಾರೆ. ಬಣಜಾರ ಲಿಂಗಾಯಿತ ಈಡಿಗ ಸಮುದಾಯದ ಜನರೊಂದಿಗೆ ನಾಗರಾಜ್ ಉತ್ತಮ ಒಡನಾಟ ಹೊಂದಿದ್ದಾರೆ. ಕರ್ತವ್ಯದಲ್ಲಿದ್ದಾಗ ಮಾಡಿದ ಸೇವೆ ಇವರಿಗೆ ಕೈಹಿಡಿಯಲಿದೆ. ನಾಗರಾಜ್ ಕನಿಷ್ಠ ಐದು ಸಾವಿರ ಮತಗಳನ್ನು ಪಡೆದರೂ..ಅದು ಒಬ್ಬರಿಗೆ ವರವಾದರೆ ಮತ್ತೊಬ್ಬರಿಗೆ ಶಾಪವಾಗುತ್ತದೆ. ಆದ್ರೆ ಕ್ಷೇತ್ರದಲ್ಲಿ ನನಗೆ ನನ್ನದೆ ಆದ ಮೂವತ್ತು ಸಾವಿರ ಮತಗಳಿವೆ ಎಂದು ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೆ, ಆ ಪಕ್ಷದ ವರ್ಚಸ್ಸಿನ ಮತಗಳು ಕೌಂಟ್ ಆದ್ರೆ..ಗೆಲವು ನನ್ನದೆ ಎಂದು ನಾಗರಾಜ್ ರಾಜಕೀಯ ಗಣಿತದ ಲೆಕ್ಕಚಾರ ಹೇಳುತ್ತಾರೆ. ನಾಗರಾಜ್ ಬಹುತೇಕ ಪಡೆಯುವುದು ಬಿಜೆಪಿಯ ಮತಗಳ ಆಗಿರುವುದರಿಂದ ಅದು ಜೆಡಎಸ್ ನ ಶಾರದಾ ಪೂರ್ಯನಾಯಕ್ ಗೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ. ಜಾತ್ಯಾತೀತವಾಗಿ ಎಲ್ಲರ ವಿಶ್ವಾಸ ಗಳಿಸಿರುವ ನಾಗರಾಜ್ ಸ್ಪರ್ಧಿಸಿದರೆ ಬಿಜೆಪಿಯ ಮತಗಳನ್ನು ಇವರು ಪಡೆಯಲಿದ್ದಾರೆ.ಮುಸ್ಲಿಂ ಭಾಂದವರ ಜೊತೆಯೂ ಉತ್ತಮ ಒಡನಾಟ ಹೊಂದಿರುವ ಐಎಂ ಎಷ್ಟು ಮತ ಪಡೆದು ಗೆಲ್ಲುತ್ತಾರೋ ಸೊಲುತ್ತಾರೋ ಎಂಬ ಲೆಕ್ಕಚಾರಕ್ಕಿಂತ, ಮೊದಲ ಬಾರಿಯ ಇವರ ಸ್ಪರ್ಧೆ ಎದುರಾಳಿ ಗೆಲುವಿನ ಅಭ್ಯರ್ಥಿಗೆ ಬಿಗ್ ಸ್ಟ್ರೋಕ್ ಕೊಟ್ಟರೂ ಅಚ್ಚರಿ ಇಲ್ಲ.
ಶಿವಮೊಗ್ಗ ಗ್ರಾಮಾಂತರ ಭಾಗದ ಜಾತಿವಾರು ಅಂದಾಜು ಲೆಕ್ಕಾಚಾರ
ಲಿಂಗಾಯತರು 55 ಸಾವಿರ
ಬೋವಿ 35-37 ಸಾವಿರ
ಎಕೆ 28 ಸಾವಿರ
ಕೊರಚ -ಕೊರಮ ಸಮುದಾಯ 800
ಉಪ್ಪಾರ 10-12 ಸಾವಿರ
ಕುರುಬ 7-8 ಸಾವಿರ
ಲಂಬಾಣಿ 18-20 ಸಾವಿರ
ಮುಸ್ಲಿಂ 16-18 ಸಾವಿರ
ಕುಂಚಿಟಿಗರು 6 ಸಾವಿರ
ಕ್ರಿಶ್ಚಿಯನ್ 1500
ಒಕ್ಕಲಿಗರು 5 ಸಾವಿರ
ವಾಲ್ಮಿಕಿ 15- 16 ಸಾವಿರ
ಒಟ್ಟು 2.29.000 ಮತದಾರರು ಇದ್ದಾರೆ.