SHIVAMOGGA | Jan 5, 2024 | Bhadravathi Hosamane Police Station / ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಬಕ್ಕು ಮಾರಕಾಸ್ತ್ರಗಳನ್ನ ತೋರಿಸ್ತಿದ್ದ ಜನರಲ್ಲಿ ಭಯ ಹುಟ್ಟಿಸುತ್ತಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ. ಇವರ ಬಳಿಯಲ್ಲಿ ಒಣ ಗಾಂಜಾ ಕೂಡ ಪತ್ತೆಯಾಗಿದ್ದು ಮಾದಕ ವಸ್ತುವಿಗೆ ಸಂಬಂಧಿಸಿದ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಭದ್ರಾವತಿ ಹೊಸಮನೆ ಪೊಲೀಸ್ ಸ್ಟೇಷನ್ /Bhadravathi Hosamane Police Station
ಭದ್ರಾವತಿ ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷ್ ನಗರ ಲೇ ಔಟ್ ನಲ್ಲಿ, ಅಪರಿಚಿತರು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣ ಕುಮಾರ್ ಬಿ ಮಾನೆ, ಪಿಎಸ್ಐ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ಸ್ಥಳದಲ್ಲಿ ರೇಡ್ ಮಾಡಿ. ಆರೋಪಿಗಳನ್ನ ಬಂಧಿಸಿದೆ. .
ಗಾಂಜಾ ಮಾರಾಟ ಮಾಡುತ್ತಿದ್ದ ಮತ್ತು ಮಾರಕಾಸ್ತ್ರಗಳನ್ನು ತೋರಿಸುತ್ತಾ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದ ಆರೋಪಿತರಾದ 1) ಮಹಮ್ಮದ್ ಗೌಸ್, 23 ವರ್ಷ, ಅನ್ವರ್ ಕಾಲೋನಿ ಭದ್ರಾವತಿ ಮತ್ತು 2) ಮಹಮ್ಮದ್ ಮುಸ್ತಫಾ, 24 ವರ್ಷ, ಅನ್ವರ್ ಕಾಲೋನಿ ಭದ್ರಾವತಿ ರನ್ನ ಬಂಧಿಸಲಾಗಿದೆ.
ಇನ್ನೂ ಆರೋಪಿತರಿಂದ ಅಂದಾಜು ಮೌಲ್ಯ 15,000/- ರೂಗಳ 375 ಗ್ರಾಮ ತೂಕದ ಒಣ ಗಾಂಜಾ, ರೂ 1,000/- ನಗದು ಹಣ ಮತ್ತು 02 ಚಾಕುಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0001/2024 ಕಲಂ 20(b) (ii) A NDPS ಮತ್ತು 25(1A) Indian Arms Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.