ಹುಬ್ಬಳ್ಳಿ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಉತ್ತರಕನ್ನಡ ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳಿಬ್ಬರು ಶಿರಾಳಕೊಪ್ಪದಲ್ಲಿ ಅರೆಸ್ಟ್ ! ಏನಿದು ಕೇಸ್

Hubballi, Davanagere, Chikkamagaluru, Haveri and Uttara Kannada district police arrested two wanted accused in Shiralakoppa. What is the case?

ಹುಬ್ಬಳ್ಳಿ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಉತ್ತರಕನ್ನಡ  ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳಿಬ್ಬರು ಶಿರಾಳಕೊಪ್ಪದಲ್ಲಿ ಅರೆಸ್ಟ್ ! ಏನಿದು ಕೇಸ್

KARNATAKA NEWS/ ONLINE / Malenadu today/ Jul 1, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ಪೊಲೀಸರು 19-06-2023 ಶೇಖರಪ್ಪ ಎಂಬವರ ಬೈಕ್​ ಕಳ್ಳತನ ಪ್ರಕರಣವನ್ನು ಭೇದಿಸಿದ್ದಷ್ಟೆಅಲ್ಲದೆ ಈ ಸಂಬಂಧ 6 ಜಿಲ್ಲೆಗಳ ವಿವಿಧ ಸ್ಟೇಷನ್​ಗಳಲ್ಲಿ ವಾಂಟೆಡ್ ಆಗಿದ್ದ ಆರೋಪಿಗಳಿಬ್ಬರನ್ನ ಬಂಧಿಸಿದ್ಧಾರೆ. 

ನಡೆದಿದ್ದೇನು?

ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಹೀರೋ ಸ್ಪೆಂಡರ್ ಪ್ರೋ ಬೈಕ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ರು. ಈ ಸಂಬಂಧ  379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದ ಬೆನ್ನಟ್ಟಿದ್ ಶಿರಾಳಕೊಪ್ಪ ಪೊಲೀಸರು  ನಿನ್ನೆ ದಿನಾಂಕಃ 30-06-2023  ರಂದು  ಆರೋಪಿಗಳನ್ನ ಬಂಧಿಸಿದ್ದಾರೆ. 

ಬಂಧಿತರು

1) ರಫೀಕ್ ಸಾಬ್ ಸವಣೂರ @ ರಫೀಕ್, 28 ವರ್ಷ, ಮಾಸೂರು ಗ್ರಾಮ ಹಿರೇಕೆರೂರು ಹಾವೇರಿ ಜಿಲ್ಲೆ 

2) ಮಹಮ್ಮದ್ ಅಫ್ರಿದಿ @ ಅಫ್ರಿದಿ, 23 ವರ್ಷ,  ಮಾಸೂರು ಗ್ರಾಮ ಹಿರೇಕೆರೂರು ಹಾವೇರಿ ಜಿಲ್ಲೆ 

ವಿಶೇಷ ಅಂದರೆ, ಈ ಇಬ್ಬರು ಆರೋಪಿಗಳ ಮೂಲಕ ಆರು ಜಿಲ್ಲೆಗಳ ವಿವಿಧ ಸ್ಟೇಷನ್​ಗಳ ಕೇಸ್​ಗಳು ಬಗೆಹರಿದಿವೆ..  

ಶಿರಾಳಕೊಪ್ಪ ಪೊಲೀಸ್ ಠಾಣೆಯ 01, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ 01, ಆನವಟ್ಟಿ ಪೊಲೀಸ್ ಠಾಣೆಯ 01, ಹಿರೆಕೆರೂರು ಪೊಲೀಸ್ ಠಾಣೆಯ 01, ಹಾನಗಲ್ ಪೊಲೀಸ್ ಠಾಣೆಯ 01, ಕೋಟೆ ಪೊಲೀಸ್ ಠಾಣೆಯ 01, ಅಜ್ಜಂಫುರ ಪೊಲೀಸ್ ಠಾಣೆಯ 01, ಶಿರಸಿ ಟೌನ್ ಪೊಲೀಸ್ ಠಾಣೆಯ 01, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ 01, ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ 01 ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ 01 ಪ್ರಕರಣ ಸೇರಿದಂತೆ ಒಟ್ಟು 11 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 3,96,000/- ರೂಗಳ 11 ಬೈಕ್ ಗಳನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡಿದ್ಧಾರೆ. 


ಸಾಗರದಲ್ಲಿ ಭಟ್ಕಳ ಯುವಕರ ಕೈಚಳಕ! ಮೂರು ದಿನದಲ್ಲಿ ಕೇಸ್ ಖಲ್ಲಾಸ್! ಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಏನಿದು ಪ್ರಕರಣ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಟೌನ್ ಪೊಲೀಸರು 24-06-2023 ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಕೇವಲ ಒಂದು ವಾರದ ಅವಧಿಯಲ್ಲಿ ಭೇದಿಸಿದ್ದಾರೆ. ಸಾಗರ ಟೌನ್ ನ ತೋಟಗಾರಿಕೆ ಇಲಾಖೆಯ ಹತ್ತಿರವಿರುವ ಮಹಮ್ಮದ್ ರಫೀಕ್ ರವರ ವಾಸದ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರು ವೆಂಟಿಲೇಟರ್ ನ ಕಬ್ಬಿಣದ ಮೆಸ್ ಮುರಿದು ಮನೆಯ ಒಳಗೆ ಬಂದು ಗಾರ್ಡೇಜ್ ಬೀರುವಿನಲ್ಲಿದ್ದ ಕೈ ಗಡಿಯಾರ, ಆಭರಣಗಳನ್ನು ಕದ್ದಿದ್ದರು. ಈ ಸಂಬಂಧ   ಸಾಗರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0145/2023  ಕಲಂ 454, 457, 380 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ಸಂಬಂಧ ಸಾಗರ ಟೌನ್​ ಪೊಲೀಸರು ಮೂರು ದಿನಗಳ ಒಳಗಾಗಿ ಆರೋಪಿಗಳನ್ನ ಬಂಧಿಸಿದೆ  

ಬಂಧಿತರು

1) ಮಹಮದ್ ಇಫ್ಜಾಲ್  @ ಇಫ್ಜಾಲ್, 25 ವರ್ಷ, 2 ನೇ ಕ್ರಾಸ್, ಮದೀನಾ ಕಾಲೋನಿ ಭಟ್ಕಳ,  

2) ಯಾಸೀನ್ ಸಾಹೇಬ, 38 ವರ್ಷ, ಶಿರೂರು ಭಟ್ಕಳ 

3) ಮಹಮದ್ ಮುಸಾಧಿಕ್, 33 ವರ್ಷ, ಅಮರ್ ಕಾಲೋನಿ ಹೆಗ್ಗಲ್ ರಸ್ತೆ, ಭಟ್ಕಳ

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ 03 ವಾಚ್, ಆಭರಣಗಳು ಮತ್ತು ಕೃತ್ಯಕ್ಕೆ ಬಳಸಲಾದ ಕಾರು ಸೇರಿ ಅಂದಾಜು ಮೌಲ್ಯ 7,45,729 ರೂಗಳ ಮಾಲನ್ನು ಅಮಾನತ್ತುಪಡಿಸಿಕೊಂಡಿದ್ದಾರೆ. 


ಟ್ರಕ್ಕಿಂಗ್​ಗೆ ಬಂದಿದ್ದ ಯುವಕ ಸಾವು! ನೇತ್ರಾವತಿ ಪೀಕ್​ ಸ್ಪಾಟ್​ನಲ್ಲಿ ನಡೆದಿದ್ದೇನು?

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಟ್ರಕ್ಕಿಂಗ್​ಗೆ ಎಂದು ಬಂದಿದ್ದ ಪ್ರವಾಸಿಗನೊಬ್ಬ ಹೃದಯಘಾತದಿಂದಾಗಿ ಸಾವನ್ನಪ್ಪಿದ್ಧಾನೆ. 27 ವರ್ಷದ ರಕ್ಷಿತ್ ಮೃತ ಯುವಕ. ಮೂಲತಃ ಮೈಸೂರು ಕಡೆಯವರು. ಮೈಸೂರಿನಿಂದ ಒಟ್ಟಾರೆ ಏಳು ಮಂದಿ ಟ್ರಕ್ಕಿಂಗ್​ಗೆ ಅಂತಾ ಚಿಕ್ಕಮಗಳೂರಿಗೆ ಆಗಮನಿಸಿದ್ದರು, ಕುದುರೆ ಮುಖದಿಂದ ನೇತ್ರಾವತಿ ಪೀಕ್ ಸ್ಪಾಟ್​ಗೆ ತೆರಳುತ್ತಿದ್ದರು. ಈ ನಡುವೆ ದಾರಿಯಲ್ಲಿಯೇ ರಕ್ಷಿತ್​ಗೆ ಎದೆನೋವು ಕಾಣಿಸಿದೆ. ತಕ್ಷಣಕ್ಕೆ ಅವರಿಗೆ ಚಿಕಿತ್ಸೆ ನೀಡಲು ಸಹ ಅಲ್ಲಿ ಸಾಧ್ಯವಿರಲಿಲ್ಲ. ಇನ್ನೂ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಕಳಸಕ್ಕೆ ರವಾನೆ ಮಾಡಿದ್ದು, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ದಾಖಲಾಗಿದೆ.