ಮನೆಗೆ ನುಗ್ಗಿಗೆ ಮಹಿಳೆ ಮೇಲೆ ಹಲ್ಲೆ! ರಾಜಕೀಯ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರ ವಿರುದ್ದ FIR ! ವಿಡಿಯೋ ವೈರಲ್
FIR against taluk unit president of political party ರಾಜಕೀಯ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರ ವಿರುದ್ದ FIR

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS
Shivamogga | ಮಹಿಳೆಯೊಬ್ಬರ ಮನೆಗೆ ನುಗ್ಗಿ ರಾಜಕೀಯ ಪಕ್ಷವೊಂದರ ತಾಲ್ಲೂಕು ಘಟಕದ ಅದ್ಯಕ್ಷ ಹಾಗೂ ಆತನ ಕುಟುಂಬಸ್ಥರು ಹಲ್ಲೆ ಮಾಡಿರುವ ಆರೋಪವೊಂದು ಶಿಕಾರಿಪುರದಲ್ಲಿ ಕೇಳಿಬಂದಿದೆ. ಈ ಸಂಬಂಧ IPC 1860 (U/s-143,147,448,323,324,354(B),504,149) ಅಡಿಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ..
ಶಿಕಾರಿಪುರ ತಾಲ್ಲೂಕಿನ ಅರಿಶಿನಗೆರೆ ಗ್ರಾಮದ ನಿವಾಸಿ ಶೋಬಾ ಎಂಬವರು ಈ ಸಂಬಂಧ ದೂರು ನೀಡಿದ್ದು, ಶಿಕಾರಿಪುರ ತಾಲ್ಲೂಕು ಘಟಕ ಅಧ್ಯಕ್ಷ ವೀರೇಂದ್ರ ಪಾಟೀಲ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಕೇಸ್ ದಾಖಲಾಗಿದೆ.ದಿನಾಂಕ ನವೆಂಬರ್ ಆರನೇ ತಾರೀಖು ಶೋಬಾರವರ ಮನೆಗೆ ಬಂದ ವೀರೇಂದ್ರ ಪಾಟೀಲ್ ಹಾಗೂ ಆರೋಪಿತರು, ಶೋಭಾರವರ ಪತಿ ರಾಮುರವರ ಮೇಲೆ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ವೇಳೇ ಜಗಳ ತಪ್ಪಿಸಲು ಬಂದ ಶೋಬಾರವರ ಮೇಲೆಯು ಹಲ್ಲೆ ಮಾಡಲಾಗಿದೆ. ಮಹಿಳೇ ಎಂದು ನೋಡದೇ ಅವರ ನೈಟಿಯನ್ನ ಹರಿದು ಹಾಕಿ ಜಾಗ ತಮ್ಮದು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
READ : ಶಿವಮೊಗ್ಗದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ನಡೆಯುತ್ತಿವೆ ಹೈಟೆಕ್ ಕೊಲೆಗಳು!? ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ!
ಶೋಭಾರವರ ಮನೆ ಜಾಗದ ವಿಚಾರಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಎರಡು ಕುಟುಂಬಗಳು ಜಾಗ ತಮ್ಮದು ಎಂದು ವಾದಿಸಿದ್ದಾರೆ. ಅಲ್ಲದೆ ಇದೇ ವಿಚಾರದಲ್ಲಿ ಪತ್ರ ತೆಗೆದುಕೊಂಡು ಬಾ ನಾವು ತರುತ್ತೇವೆ ಎಂದು ಶೋಭಾರ ಕುಟುಂಬ ಹೇಳಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ. ಗಲಾಟೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ತಮ್ಮ ಅಮ್ಮನಿಗೆ ಹೊಡೆಯುತ್ತಿದ್ದಾರೆ ಎಂದು ಹೆಣ್ಣುಮಗಳೊಬ್ಬಳು ಹೇಳುತ್ತಿರುವ ದ್ವನಿ ದೃಶ್ಯದಲ್ಲಿ ಕೇಳಿಬರುತ್ತಿದೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಸದ್ಯ ಮೊಬೈಲ್ನ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ