ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್​ಗೆ ಸಿಲುಕಿ ಕೈ ಕಳೆದುಕೊಂಡ ರೈತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು : ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್​ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ.

ಭತ್ತದ ಒಕ್ಕಲು ಮಾಡುತ್ತಿದ್ದಾಗ ಮಷಿನ್​ಗೆ  ಸಿಲುಕಿ ಕೈ ಕಳೆದುಕೊಂಡ ರೈತ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಒಕ್ಕಲು ಸಂದರ್ಭದಲ್ಲಿ ಭತ್ತದ ಮಷಿನ್​ಗೆ ಸಿಲುಕಿ ರೈತರೊಬ್ಬರ ಕೈ ಪೂರ್ಣ ತುಂಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು (hosanagara) ದೇವಗಂಗೆಯಲ್ಲಿ ನಡೆದಿದೆ.

ಇದನ್ನು ಸಹ ಓದಿ : ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವಿಪರೀತವಾದ ಕಾಡುಕೋಣಗಳ ಕಾಟ! ಹುಲಿಯ ಆತಂಕ

ಕೆಲಸಕ್ಕೆ ಹೋಗಿದ್ಧಾಗ ಘಟನೆ :   ಇಲ್ಲಿನ ರೈತ ವಿಶ್ವನಾಥರವರು ಗಾಯಗೊಂಡಿದ್ಧಾರೆ.  ಈ ಭಾಗದ ಮೂಡುಗೊಪ್ಪ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದೇವಗಂಗೆಯ ರೈತ ವಿಶ್ವನಾಥ್​ ರವರು, ಇಲ್ಲಿನ ಮಹೇಶ್​ ಗೌಡ ಎಂಬವರ ಜಮೀನಿನಲ್ಲಿ ಒಕ್ಕಲು ಕೆಲಸಕ್ಕೆ ಬಂದಿದ್ರು. ಈ ವೇಳೆ ಆಕಸ್ಮಿಕವಾಗಿ ಭತ್ತದ ಮಷಿನ್​ಗೆ ಅವರ ಕೈ ಸಿಲುಕಿದೆ.

ಇದನ್ನು ಸಹ ಓದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ

ಚಿಕಿತ್ಸೆಗೆ ಪ್ರಯತ್ನಿಸಿದರೂ ಆಗದ ಪ್ರಯೋಜನ :  ಪರಿಣಾಮ ಬಲಗೈ ಕಟ್ ಆಗಿದೆ. ತಕ್ಷಣ ಅವರನ್ನು ತುಂಡಾದ ಕೈನಾ ಸಮೇತ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಂತರ ಮಂಗಳೂರು ವೆನ್​ಲಾಕ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಆದಾಗ್ಯು, ತುಂಡಾದ ಕೈ ಜೋಡಣೆ ಸಾಧ್ಯವಾಗಲಿಲ್ಲ. ಸದ್ಯ ಬಡ ರೈತನ ಪಾಡು ಮುಂದೇಗೆ ಎಂಬುದೇ ಪ್ರಶ್ನೆಯಾಗಿದೆ. 

BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link