MALENADUTODAY.COM | SHIVAMOGGA NEWS |HOSANAGARA TALUK
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಪೊಲೀಸ್ ಸ್ಟೇಷನ್ (ripponpet police station) ವ್ಯಾಪ್ತಿಯಲ್ಲಿ ಬರುವ ಬಾರ್ವೊಂದರಲ್ಲಿ ಬಿಲ್ ವಿಚಾರಕ್ಕಾಗಿ ಹೊಡೆದಾಟ ನಡೆದಿದೆ. ಕುಡಿದು ಬಿಲ್ ನೀಡುವ ವೇಳೆ ಕ್ಯಾಶಿಯರ್ ಜೊತೆಗೆ ಜಗಳವಾಡಿದ ಇಬ್ಬರು ಹೊಡೆದಾಟ ನಡೆಸಿದ್ದಾರೆ. ರಿಪ್ಪನ್ಪೇಟೆ ಸಮೀಪದ ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಹೊಡೆದಾಟ ನಡೆದಿದ್ದು, ಬಾರ್ನಲ್ಲಿ ವಸ್ತುಗಳನ್ನು ದ್ವಂಸಗೊಳಿಸಿರುವ ಕಿಡಿಗೇಡಿಗಳು, ರಕ್ತ ಬರುವಂತೆ ಹೊಡೆದಾಡಿದ್ದಾರೆ.
ಕಳೆದ ಗುರುವಾರ ನಡೆದ ಘಟನೆ ಸಂಬಂದ ರಿಪ್ಪನ್ಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಣ್ಣೆ ಕುಡಿದು ಟೈಟಾಗಿ, ಕ್ಯಾಶಿಯರ್ ಜೊತೆಗೆ ಜಗಳ ತೆಗೆದ ಕ್ರಾಂತಿ ಹಾಗೂ ಸುದರ್ಶನ ಎಂಬವವರು, ದೇವರಾಜ್ ಹಾಗೂ ಷಣ್ಮುಖ ಎಂಬಿಬ್ಬರಿಗೆ ಗಂಭೀರ ಗಾಯಗಳನ್ನ ಮಾಡಿದ್ದಾರೆ. ಗಾಯಾಳುಗಳಿಗೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ.
ಇನ್ನೂ ಘಟನೆಯಲ್ಲಿ ಬಾರ್ ತುಂಬಾ ರಕ್ತ ಚೆಲ್ಲಾಡಿದ್ದು, ಹಲವು ವಸ್ತುಗಳು ಧ್ವಂಸಗೊಂಡಿವೆ. ಇದರಿಂದ ಸಾಕಷ್ಟು ನಷ್ಟವಾಗಿದೆ ಎಂದು ಬಾರ್ ಮಾಲೀಕರು ಪೊಲೀಸರ ಬಳಿಯಲ್ಲಿ ತಿಳಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
