ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?

Modigift to Shimoga district! Amrit Bharat Station Yojana to be implemented for three railway stations! Do you know what the plan is?

ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​!    ಮೂರು ರೈಲ್ವೆನಿಲ್ದಾಣ​ಕ್ಕೆ  Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?
ಶಿವಮೊಗ್ಗ ಜಿಲ್ಲೆಗೆ ಮೋದಿಗಿಫ್ಟ್​! ಮೂರು ರೈಲ್ವೆನಿಲ್ದಾಣ​ಕ್ಕೆ Amrit Bharat Station Yojana ಜಾರಿ! ಏನಿದು ಯೋಜನೆ ಗೊತ್ತಾ?

MALENADUTODAY.COM | SHIVAMOGGA NEWS 

ಕೇಂದ್ರ ಬಜೆಟ್​ನಲ್ಲಿ ಶಿವಮೊಗ್ಗದ ಎರಡು ಮುಖ್ಯವಾದ ಕಾಮಗಾರಿಗಳಿಗೆ ಹಣ ಮೀಸಲಿಡಲಾಗಿದೆ. ಶಿವಮೊಗ್ಗ ಶಿಕಾರಿಪುರ ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ ಹಣ ಹಾಗೂ Amrit Bharat Station Yojana ಅಡಿಯಲ್ಲಿ ರೈಲ್ವೆ ನಿಲ್ಧಾಣಗಳ (Railway Station)  ಅಭಿವೃದ್ಧಿಗೆ   ಹಣ ನೀಡಲಾಗಿದೆ. 

Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!?

ಶಿವಮೊಗ್ಗ – ಶಿಕಾರಿಪುರ – ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ 150 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಮೃತ್ ಭಾರತ್ ಸ್ಕೀಂ ಅಡಿ 30 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಯೋಜಿಸಲಾಗಿದ್ದು, ಈ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಸಾಗರ ಜಂಬಗಾರು ಮತ್ತು ತಾಳಗುಪ್ಪ ನಿಲ್ದಾಣಗಳ ಅಭಿವೃದ್ಧಿಗೆ ಯೋಜಿಸಲಾಗಿದೆ.

ಏನಿದು Amrit Bharat Station Yojana

ಭಾರತೀಯ ಸರ್ಕಾರ ಹಳೆಯ ಕಾಲದ ರೈಲ್ವೆ ನಿಲ್ದಾಣಗಳ ಮಾದರಿಯನ್ನು ಬದಲಾಯಿಸುವ ನಿಟ್ಟಿನಲ್ಲಿ Amrit Bharat Station Yojana ನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ರೈಲ್ವೆ ಸ್ಟೇಷನ್ಗಳನ್ನು ಸುಂದರವಾಗಿಯು, ಬಹುಉಪಯೋಗಕ್ಕಾಗಿಯೂ  ಮತ್ತು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೂಪಾಂತರಗೊಳಿಸಲಾಗುತ್ತದೆ. ಯೋಜನೆಯಲ್ಲಿ ರೈಲ್ವೆ ನಿಲ್ದಾಣದ ಪ್ಲಾಟ್​ಫಾರಮ್​ ವ್ಯವಸ್ಥೆ, ಎಂಟ್ರಿ ಎಕ್ಸಿಟ್ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಪಾರ್ಕಿಂಗ್​ ಮತ್ತು ರೆಸ್​ರೂಮ್​ಗಳ ವ್ಯವಸ್ಥೆಗಳನ್ನು ವಿಶೇಷವಾಗಿ ರೂಪಿಸಲಾಗುತ್ತದೆ. ಅಲ್ಲದೆ ಸಿಟಿಸೆಂಟರ್​ಗಳು ನಿಲ್ದಾಣಗಳಲ್ಲಿ ತಲೆಯೆತ್ತಲಿದ್ದು, ಇದರಲ್ಲಿ ವಿವಿಧ ಮಳಿಗೆಗಳು ಓಪನ್ ಆಗಲಿವೆ.  ಚಿತ್ರಮಂದಿರುವೂ ಸೇರಿದಂತೆ  ವಿವಿಧ ಸ್ಟಾಲ್​ಗಳು ಇರಲಿದ್ದು,  ಜನರ ಉಪಯೋಗಕ್ಕೆ ಸಿಗಲಿದೆ 

VISL ಗೇ ಶಾಹಿ ಗಾರ್ಮೆಂಟ್ಸ್​ ಪರ್ಯಾಯವೇ? ಅಪ್ಪ ಕಳ್ಳ-ಮಗ ಸುಳ್ಳ! ಭದ್ರಾವತಿಯಲ್ಲಿ ಸಂಸದರಿಗೆ ಘೇರಾವ್​! ಬಿಜೆಪಿಗೆ ಮುಖಭಂಗ! ಫೆ.3 ಕ್ಕೆ ಹೆಚ್​​ಡಿಕೆ ಎಂಟ್ರಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com