ಡಿಸೆಂಬರ್​.25 ರಿಂದ 26 ರವರೆಗೆ ರೈಲ್ವೆ ಗೇಟ್ ಬಂದ್! ಪ್ರಮುಖ ಹೆದ್ದಾರಿ ಸಂಚಾರಕ್ಕೆ ಪರ್ಯಾಯ ಮಾರ್ಗ! ಇಲ್ಲಿದೆ ವಿವರ

Railway gates to remain closed from December 25 to 26 An alternative route to major highway traffic! Here's the details

ಡಿಸೆಂಬರ್​.25 ರಿಂದ 26 ರವರೆಗೆ  ರೈಲ್ವೆ ಗೇಟ್ ಬಂದ್! ಪ್ರಮುಖ ಹೆದ್ದಾರಿ ಸಂಚಾರಕ್ಕೆ ಪರ್ಯಾಯ ಮಾರ್ಗ! ಇಲ್ಲಿದೆ ವಿವರ
Railway gates to remain closed from December 25 to 26 An alternative route to major highway traffic! Here's the details

SHIVAMOGGA|  Dec 19, 2023  |  ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸುವ ಸಂಬಂದ ಜಿಲ್ಲಾಡಳಿತ ಪ್ರಕಟಣೆವೊಂದನ್ನ ಹೊರಡಿಸಿದೆ. 

 

ಕುಂಸಿ-ಆನಂದಪುರ ಸ್ಟೇಷನ್

ಕುಂಸಿ-ಆನಂದಪುರ ಸ್ಟೇಷನ್ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.80(ಕಿ.ಮೀ.96/200-300) ನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡಬೇಕಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ. 

ಡಿಸೆಂಬರ್​.25 ರಿಂದ 26 ರವರೆಗೆ ಗೇಟ್ ಮುಚ್ಚಿ ಕೆಳಕಂಡಂತೆ ಪಯಾರ್ಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಆದೇಶಿಸಿದ್ದಾರೆ.

READ : ಕೊಟ್ಟಿಗೆಯಲ್ಲಿ ಕಟ್ಟಿದ್ದ ತುಂಬು ಗರ್ಭದ ಹಸುಗಳನ್ನ ಕದ್ದೊಯ್ದ ಕಳ್ಳರು! ಸ್ಥಳೀಯರ ಆಕ್ರೋಶ

ರಿಪ್ಪನ್‍ಪೇಟೆಯಿಂದ ಆಯನೂರು ಮತ್ತು ಆಯನೂರಿನಿಂದ ರಿಪ್ಪನ್‍ಪೇಟೆಗೆ ಸಂಚರಿಸುವ ಲಘು ವಾಹನಗಳು ರೈಲ್ವೆ ಲೆವೆಲ್ ಕ್ರಾಸ್ ನಂ.79ರ ಮೂಲಕ ಆಯನೂರು, ಕುಂಸಿ, ಚೋರಡಿ, ಗುಂಡೂರು ಕ್ರಾಸ್, ಶೆಟ್ಟಿಕೆರೆ, ಸೂಡೂರು, ರಿಪ್ಪನ್‍ಪೇಟೆ ಹಾಗೂ

 

ರಿಪ್ಪನ್‍ಪೇಟೆಯಿಂದ ಶಿವಮೊಗ್ಗಕ್ಕೆ ಬರುವ ವಾಹನಗಳು ರಿಪ್ಪನ್‍ಪೇಟೆ, ಸೂಡೂರು, ಶೆಟ್ಟಿಕೆರೆ, ಚೋರಡಿ, ಕುಂಸಿ, ಆಯನೂರು, ಶಿವಮೊಗ್ಗ ಮಾರ್ಗವಾಗಿ ಬರುವುದು 

ಹಾಗೂ ಭಾರಿ ವಾಹನಗಳು ಅಯನೂರು, ಕುಂಸಿ, ಚೋರಡಿ, ಆನಂದಪುರ, ರಿಪ್ಪನ್‍ಪೇಟೆ ಮುಖಾಂತರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಡಿ.14 ರ ಆದೇಶದಲ್ಲಿ ಸೂಚಿಸಿದ್ದಾರೆ.