ಹೆದ್ದಾರಿ ಅಗಲೀಕರಣದ ವೇಳೆ ಮಣ್ಣಿನಡಿ ಸಿಲುಕಿ ಕಾರ್ಮಿಕನ ದುರಂತ ಸಾವು!/ ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿ ಜಪ್ತಿ

A labourer was killed in a landslide during highway widening work in Sringeri taluk of Chikkamagaluru district.

ಹೆದ್ದಾರಿ ಅಗಲೀಕರಣದ ವೇಳೆ ಮಣ್ಣಿನಡಿ ಸಿಲುಕಿ ಕಾರ್ಮಿಕನ ದುರಂತ ಸಾವು!/ ಅಬಕಾರಿ ಅಧಿಕಾರಿಗಳಿಂದ  ಕಳ್ಳಭಟ್ಟಿ ಜಪ್ತಿ

CHIKKAMAGALURU|  Dec 19, 2023  |  ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೇ ಮಣ್ಣು ಕುಸಿದ ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿದ ಘಟನೆ  ಶೃಂಗೇರಿ ತಾಲೂಕು ನೆಮ್ಮಾರ್ ಬಳಿ ಸಂಭವಿಸಿದೆ. 

ಇಲ್ಲಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಡೆಯುತ್ತಿತ್ತು. ಈ ವೇಳೆ ಜೆಸಿಬಿಯಿಂದ ಮಣ್ಣು ತಗೆಯಲಾಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಮಣ್ಣು ಕುಸಿದು ಕೆಳ ಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ. ಈ ವೇಳೆ 30 ವರ್ಷದ ಮುಜೀಬರ್ ಎಂಬಾತ ಮಣ್ಣಿನಡಿ ಸಾವನ್ನಪ್ಪಿದ್ದಾನೆ. ಇನ್ನು ಸ್ಥಳದಲ್ಲಿ ಶೃಂಗೇರಿ ಪೊಲೀಸರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. 

READ : ಡಿಸೆಂಬರ್​.25 ರಿಂದ 26 ರವರೆಗೆ ರೈಲ್ವೆ ಗೇಟ್ ಬಂದ್! ಪ್ರಮುಖ ಹೆದ್ದಾರಿ ಸಂಚಾರಕ್ಕೆ ಪರ್ಯಾಯ ಮಾರ್ಗ! ಇಲ್ಲಿದೆ ವಿವರ

ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆ ಹಾರ ಸಮೀಪ ಬಣಕಲ್ ನ ಬಿ.ಹೊಸಳ್ಳಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಬರೋಬ್ಬರಿ 5 ಲೀ. ಸಾರಾಯಿ, 100 ಲೀ. ಬೆಲ್ಲದ ಕೊಳೆ ಹಾಗೂ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರ ತೋಟದ ಮೇಲೆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು.