KARNATAKA NEWS/ ONLINE / Malenadu today/ Oct 11, 2023 SHIVAMOGGA NEWS
ಕಂದಕಕ್ಕೆ ಬಿದ್ದ ಕಾರು | ನೆರೆಯ ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ನಲ್ಲಿ ನಿನ್ನೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಜೋರು ಮಳೆಯಾದ್ದರಿಂದ್ದ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚಾಲಕನಿಗೆ ರಸ್ತೆ ಸರಿಯಾಗಿ ಕಾಣದೇ ಕಾರು ರಸ್ತೆ ಪಕ್ಕಕ್ಕೆ ಚಲಿಸಿದೆ. ಪರಿಣಾಮ ನಿಯಂತ್ರಣಕ್ಕೆ ಸಿಗದೇ, ಕಾರು ತಗ್ಗಿಗೆ ಉರುಳಿದೆ.
ಗಾಂಜಾ ಆಸಾಮಿ ಬಳಿ ಸಿಕ್ತು ಪಿಸ್ತೂಲ್ | ಇನ್ನೊಂದಡೆ ಕಡೂರು ಪಟ್ಟಣದಲ್ಲಿ ಗಾಂಜಾ ಗುಂಗಿನಲ್ಲಿ ಪಿಸ್ತೂಲ್ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದ ವ್ಯಕ್ತಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಿರೂರು ನಿವಾಸಿ ಸಮೀರ್ ಎಂದು ಗೊತ್ತಾಗಿದೆ. ಎಪಿಎಂಸಿ ಆವರಣದ ಗೋದಾಮು ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಪೊಲೀಸರು ರೆಡ್ ಹಿಡಿದು ಮಾರಕಾಸ್ತ್ರಗಳನ್ನು ಜಪ್ತು ಮಾಡಿದ್ದಾರೆ.
ಇನ್ನಷ್ಟು ಸುದ್ದಿಗಳು
