ಅಪ್ರಾಪ್ತೆ ಮೇಲೆ ಅತ್ಯಾಚಾರ! 53 ಮಂದಿ ವಿರುದ್ಧ ದಾಖಲಾಗಿದ್ದ ಕೇಸ್​ನಲ್ಲಿ ತಾಯಿ ಸೇರಿ ನಾಲ್ವರಿಗೆ 20 ವರ್ಷ ಶಿಕ್ಷೆ

In the case registered against 53 people, four including the mother were sentenced to 20 years

ಅಪ್ರಾಪ್ತೆ ಮೇಲೆ ಅತ್ಯಾಚಾರ! 53 ಮಂದಿ ವಿರುದ್ಧ ದಾಖಲಾಗಿದ್ದ ಕೇಸ್​ನಲ್ಲಿ ತಾಯಿ ಸೇರಿ ನಾಲ್ವರಿಗೆ 20 ವರ್ಷ ಶಿಕ್ಷೆ
sentenced to 20 years

chikkamagaluru Mar 11, 2024  ತನ್ನ ತಾಯಿಯೇ ತನ್ನ ಅಪ್ತಾಪ್ತ ಮಗಳನ್ನ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ 20 ವರ್ಷ ಶಿಕ್ಷೆ ವಿಧಿಸಿದೆ. ಈ ಸಂಬಂಧ ಪೊಲೀಸರು 39 ಎಫ್ಐಆರ್​ಗಳನ್ನು ದರ್ಜ್ ಮಾಡಿ ಬರೋಬ್ಬರಿ 53 ಮಂದಿ ಆರೋಪಿಗಳನ್ನ ಬಂಧಿಸಿದ್ದರು. ಪ್ರಕರಣದಲ್ಲಿ ಕೋರ್ಟ್​ 49 ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ತಿಳಿದುಬಂದಿದೆ. 

ಪ್ರಕರಣ 2021 ರಲ್ಲಿ ನಡೆದಿತ್ತು. ಈ ಸಂಬಂಧ 2020ರ ಸೆಪ್ಟೆಂಬರ್ ನಿಂದ 2021ರ ನಡುವೆ ನಡೆದಿದ್ದ ಘಟನೆ ಸಂಬಂಧ ಪೊಲೀಸರು 53 ಮಂದಿಯನ್ನು ಬಂಧಿಸಿ,.ಪೋಕ್ಸೋ ಪ್ರಕರಣ ದಾಖಲಿಸಿದ್ದರು.. ಅಲ್ಲದೆ 38 ಚಾರ್ಜ್​ಶೀಟ್​ಗಳನ್ನು ಸಲ್ಲಿಸಿದ್ರು. ಇದೀಗ ತೀರ್ಪು ಹೊರಬಿದ್ದಿದ್ದು ಆರೋಪಿಗಳ ಪೈಕಿ ಅಪ್ರಾಪ್ತೆಯ ತಾಯಿಗೂ ಸಹ 20 ವರ್ಷ ಶಿಕ್ಷೆ ವಿಧಿಸಲಾಗಿದೆ.