ವರ್ಷದಿಂದ ಲೈಂಗಿಕ ಕಿರುಕುಳ! ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ !ಸಾಗರದಲ್ಲಿ ಮತ್ತೊಂದು ಪೋಕ್ಸೋ ಕೇಸ್!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಮತ್ತೊಂದು ಪೋಕ್ಸೋ ಕೇಸ್ ದಾಖಲಾಗಿದೆ. ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮನೀಡಿದ್ದು, ಈ ಸಂಬಂಧ ಸಾಗರ ತಾಲ್ಲೂಕು ಪೊಲೀಸರು ಕೇಸ್ ದಾಖಲಿಸಿದ್ದಾರೆ. 

ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಒಂದು ವರ್ಷದಿಂದ ಯುವತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇನ್ನೊಂದು ತಾಲ್ಲೂಕಿನ ವಿದ್ಯಾರ್ಥಿಯೊಬ್ಬ, ಈ ಕೃತ್ಯ ವೆಸಗಿದ್ದು, ಪ್ರಕರಣದ ಪೂರ್ತಿ ವಿವರವನ್ನು ಗೌಪ್ಯವಾಗಿ ಇಡಲಾಗಿದೆ. ಇನ್ನೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿದ್ಯಾರ್ಥಿನಿ ನೀಡಿರುವ ದೂರಿನನ್ವಯ ಆರೋಪಿಯನ್ನು ಬಂಧಿಸಿದ್ದಾರೆ. 


ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್! ಇ-ಬಸ್​ ದರದಲ್ಲಿ ಬದಲಾವಣೆ! ವೀಕೆಂಡ್​ನಲ್ಲಿ ವಿಶೇಷ ದರ!

ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶಿವಮೊಗ್ಗ-ಬೆಂಗಳೂರು  (Shimoga-Bangalore) ಮಾರ್ಗದಲ್ಲಿ ಪ್ರಸ್ತುತ 04 ಹವಾ ನಿಯಂತ್ರಿತ ವಾಹನಗಳು ಕಾರ್ಯಾಚರಣೆಯಾಗುತ್ತಿದೆ. 

ಪ್ರಯಾಣಿಕರು ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣ ದರವನ್ನು ನಿರ್ಧರಿಸಿ ಬಸ್‍ಗಳನ್ನು ಚಾಲನೆಗೊಳಿಸಿದೆ.

ವಾಹನಗಳ ಪ್ರಯಾಣದರ ವಾರದ ದಿನಗಳಾದ ಸೋಮವಾರದಿಂದ ಗುರುವಾರದವರೆಗೆ ರೂ.550/-  ಮತ್ತು ವಾರಾಂತ್ಯ ದಿನಗಳಾದ ಶುಕ್ರವಾರ ದಿಂದ ಭಾನುವಾರದವರೆಗೆ ಪ್ರಯಾಣ ದರ ರೂ.600/- ಆಗಿರುತ್ತದೆ. 

ಶಿವಮೊಗ್ಗದಿಂದ ನಿರ್ಗಮನವಾಗುವ ಸಮಯ ಬೆ:11-00, ಮ:01-00, ರಾ:10-00, ರಾ:11-00 ಮತ್ತು ಬೆಂಗಳೂರಿನಿಂದ ನಿರ್ಗಮನವಾಗುವ ಸಮಯ ಬೆ:10-00, ಬೆ:11-00, ರಾ:11-00, ರಾ:11-30 ಆಗಿದೆ ಎಂದು ಶಿವಮೊಗ್ಗ ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇನ್ನಷ್ಟು ಸುದ್ದಿಗಳು 


 

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು