ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್! ಇ-ಬಸ್​ ದರದಲ್ಲಿ ಬದಲಾವಣೆ! ವೀಕೆಂಡ್​ನಲ್ಲಿ ವಿಶೇಷ ದರ!

Good news for Shivamogga-Bengaluru passengers! Change in e-bus fares! Special rate for the weekend! ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್! ಇ-ಬಸ್​ ದರದಲ್ಲಿ ಬದಲಾವಣೆ! ವೀಕೆಂಡ್​ನಲ್ಲಿ ವಿಶೇಷ ದರ!

ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್! ಇ-ಬಸ್​ ದರದಲ್ಲಿ ಬದಲಾವಣೆ! ವೀಕೆಂಡ್​ನಲ್ಲಿ ವಿಶೇಷ ದರ!

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶಿವಮೊಗ್ಗ-ಬೆಂಗಳೂರು  (Shimoga-Bangalore) ಮಾರ್ಗದಲ್ಲಿ ಪ್ರಸ್ತುತ 04 ಹವಾ ನಿಯಂತ್ರಿತ ವಾಹನಗಳು ಕಾರ್ಯಾಚರಣೆಯಾಗುತ್ತಿದೆ. 

ಪ್ರಯಾಣಿಕರು ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣ ದರವನ್ನು ನಿರ್ಧರಿಸಿ ಬಸ್‍ಗಳನ್ನು ಚಾಲನೆಗೊಳಿಸಿದೆ.

ವಾಹನಗಳ ಪ್ರಯಾಣದರ ವಾರದ ದಿನಗಳಾದ ಸೋಮವಾರದಿಂದ ಗುರುವಾರದವರೆಗೆ ರೂ.550/-  ಮತ್ತು ವಾರಾಂತ್ಯ ದಿನಗಳಾದ ಶುಕ್ರವಾರ ದಿಂದ ಭಾನುವಾರದವರೆಗೆ ಪ್ರಯಾಣ ದರ ರೂ.600/- ಆಗಿರುತ್ತದೆ. 

ಶಿವಮೊಗ್ಗದಿಂದ ನಿರ್ಗಮನವಾಗುವ ಸಮಯ ಬೆ:11-00, ಮ:01-00, ರಾ:10-00, ರಾ:11-00 ಮತ್ತು ಬೆಂಗಳೂರಿನಿಂದ ನಿರ್ಗಮನವಾಗುವ ಸಮಯ ಬೆ:10-00, ಬೆ:11-00, ರಾ:11-00, ರಾ:11-30 ಆಗಿದೆ ಎಂದು ಶಿವಮೊಗ್ಗ ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇನ್ನಷ್ಟು ಸುದ್ದಿಗಳು