ಶಿವಮೊಗ್ಗ : ಕುಡಿದು ಹಣ ನೀಡಲಿಲ್ಲವೆಂದು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಬಾರ್​ ಕ್ಯಾಷಿಯರ್​, ಮನನೊಂದು ವ್ಯಕ್ತಿ ಆತ್ಮ* ಹತ್ಯೆ ?

ಹಂಚಿಕೊಳ್ಳಿ
WhatsApp Facebook X Telegram
Shivamogga Burglary ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗದ ಸಾಂದರ್ಭಿಕ ಚಿತ್ರ
Shivamogga Burglary

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಬಾರ್​ ಒಂದರಲ್ಲಿ ಕುಡಿದು ಹಣ ನೀಡಲಿಲ್ಲ ಎಂಬ ಕಾರಣದಿಂದ ಬಾರ್​ನ ಕ್ಯಾಷಿಯರ್​ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಹಿನ್ನೆಲೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ ನೋಡುವುದಾದರೆ, ಎಫ್​​ಐಆರ್​​ನಲ್ಲಿ ಇರುವಂತೆ ದೂರುದಾರ ಮಹಿಳೆಗೆ ಬಾರ್​ನ ಕ್ಯಾಷಿಯರ್​ನಿಂದ ಫೋನ್​ ಕರೆಯೊಂದು ಬಂದಿದೆ. ಅದನ್ನು ಸ್ವೀಕರಿಸಿದಾಗ ನಿನ್ನ ಗಂಡ ಕಂಠಪೂರ್ತಿ ಕುಡಿದು 35 ಸಾವಿರ ಸಾಲ ಮಾಡಿದ್ದಾನೆ, ಆತನನ್ನು ಹೊಡೆದು ಹೊರಗೆ ಹಾಕಿ ಬೈಕ್​ ಅನ್ನು ಇಟ್ಟುಕೊಂಡಿದ್ದೇವೆ, ಬಂದು ಕರೆದುಕೊಂಡು ಹೋಗು ಎಂದು ಹೇಳಿದ್ದಾರೆ.

ಇದರಿಂದ ಮಹಿಳೆ ತಮ್ಮ ಮಕ್ಕಳನ್ನು ಕಳುಹಿಸಿ ಗಂಡನನ್ನು ಕರೆದುಕೊಂಡು ಬಂದಿದ್ದಾರೆ. ಮಾರನೇ ದಿನ ವಿಚಾರದ ಬಗ್ಗೆ ಗಂಡನ ಬಳಿ ದೂರುದಾರ ಮಹಿಳೆ ಕೇಳಿದಾಗ, ನಾನು ಹೆಚ್ಚಾಗಿ ಕುಡಿದಿಲ್ಲ 8 ಸಾವಿರದವರೆಗೆ ಅಷ್ಟೇ ಸಾಲ ಮಾಡಿದ್ದೇನೆ, ಆದರೂ ಬಾರ್​ ಕ್ಯಾಷಿಯರ್ ಹಾಗೂ ಓನರ್​ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಎಷ್ಟೇ ಕೇಳಿದರೂ ಬೈಕ್​ ಕೊಡದೆ ಮಾನ ಮರ್ಯಾದೆಯನ್ನು ತೆಗೆದರು ಎಂದು ದೂರುದಾರರ ಗಂಡ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ದೂರುದಾರ ಮಹಿಳೆ ತನ್ನ ಕಿವಿ ಓಲೆಯನ್ನು ಅಡವಿಟ್ಟು 20 ಸಾವಿರ ಸಾಲ ತೀರಿಸಿ ಬಾರ್​ನಲ್ಲಿದ್ದ ಬೈಕ್​ ಅನ್ನು ಬಿಡಿಸಿಕೊಂಡು ಬಂದಿದ್ದಾರೆ.

ಆದರೆ ರಾತ್ರಿ ಮನೆಗೆ ಬಂದು ನೋಡಿದಾಗ ದೂರುದಾರ ಮಹಿಳೆಗೆ ಶಾಕ್​ ಎದುರಾಗಿದೆ. ಅದೇನೆಂದರೆ ದೂರುದಾರರ ಗಂಡ ಅವಮಾನದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಹಿಳೆ ನನ್ನ ಗಂಡನ ಸಾವಿಗೆ ಬಾರ್​ನ ಕ್ಯಾಷಿಯರ್​ ಹಾಗೆಯೇ ಮಾಲೀಕರೇ ಮೂಲ ಕಾರಣ ಎಂದು ಆರೋಪಿಸಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor